April 29, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಶಿಕ್ಷಕಿ ಸುಧಾ ಭಂಡಾರಿಯವರ ‘ಸಹನೆಯ ತೇರು’ ಕಥಾಸಂಕಲನ ಬಿಡುಗಡೆ

ಹೊನ್ನಾವರ:- ಉತ್ತರ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ ಘಟಕ ಹೊನ್ನಾವರದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸುಧಾ ಭಂಡಾರಿ ಶಿಕ್ಷಕಿ ಇವರ ‘ಸಹನೆಯ ತೇರು ‘ ಕಥಾಸಂಕಲನ ಅನಾವರಣಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾಕ್ಟರ್ ಸಬಿಹಾ ಭೂಮಿಗೌಡ ವಿಶ್ರಾಂತ ಕುಲಪತಿಗಳು ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ ಮಂಗಳೂರು, ವಾಣಿ ಪೆರಿಯಾರ್ ಬೆಂಗಳೂರು, ಎಲ್ಲಮ್ಮ ಎಂ ಸಮನ್ವಯಾಧಿಕಾರಿಗಳು ಭಟ್ಕಳ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಆನಂದು ಗಾವ್ಕರ್, ಹೊನ್ನಾವರ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಎಂ ಜಿ ನಾಯ್ಕ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಧನಾ ಬರ್ಗಿ ಮುಂತಾದ ಗಣ್ಯರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಎಂ ಜಿ ನಾಯ್ಕ್ ಅವರು ಪುಸ್ತಕ ಪರಿಚಯಿಸುತ್ತಾ ಸುಧಾ ಭಂಡಾರಿಯವರು ‘ಸಹನೆಯ ತೇರು’ ಕಥಾಸಂಕಲನದಲ್ಲಿ ಹೆಣ್ಣುಮಕ್ಕಳ ಅಂತರAಗದ ತುಮುಲವನ್ನು ತುಂಬಾ ಚೆನ್ನಾಗಿ ಚಿತ್ರಿಸಿರುವುದರ ಜೊತೆಗೆ ಅದನ್ನು ದಾಟಿ ಹೊರಬರುವ ಪ್ರಯತ್ನವನ್ನು ಇಡೀ ಕಥಾಸಂಕಲನದಲ್ಲಿ ಬಿಂಬಿಸಿದ್ದಾರೆ ಕೆಲವು ಕಥೆಗಳು ಓದುಗರ ಕಣ್ಣಲ್ಲಿ ನೀರು ಬರಿಸುತ್ತವೆ ಪ್ರತಿಯೊಬ್ಬ ಮಹಿಳೆಯೂ ಓದಬೇಕಾದ ಅತ್ಯುತ್ತಮ ಕೃತಿ ಎಂದು ಹೇಳಿದರು ,ಲೇಖಕಿ ಸುಧಾ ಭಂಡಾರಿ ಮಾತನಾಡಿ ಓರ್ವ ಮಕ್ಕಳ ಲೇಖಕಿಯಾಗಿ ತಾನು ಬೆಳೆದು ಬಂದ ಸಾಹಿತ್ಯಿಕ ಪಯಣದ ಕುರಿತಾಗಿ ಮಾತನಾಡಿದರು ,ಇದೇ ಸಂದರ್ಭದಲ್ಲಿ ಹೊನ್ನಾವರ ತಾಲೂಕಿನ ಆಯ್ದ ಶಿಕ್ಷಕರನ್ನು ಸಂಘದ ಪರವಾಗಿ ಗೌರವಿಸಲಾಯಿತು . ಸುಧಾ ಭಂಡಾರಿಯವರು ಓರ್ವ ಪ್ರತಿಭಾವಂತ ಶಿಕ್ಷಕಿಯಾಗಿ, ಅಂಕಣಕಾರ್ತಿ ಯಾಗಿ ಮನೆಮಾತಾಗಿದ್ದಾರೆ ಇದು ಅವರ ಐದನೇ ಕೃತಿಯಾಗಿದ್ದು ಚೊಚ್ಚಲ ಕಥಾ ಸಂಕಲನವಾಗಿದೆ. ಈ ಸಂಕಲನದಲ್ಲಿ ಒಟ್ಟು 18 ಕಥೆಗಳಿದ್ದು ಒಂದೆರಡು ಕತೆಗಳು ರಾಜ್ಯಮಟ್ಟದಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದ ಕಥೆಗಳೂ ಸೇರಿವೆ .ಸಾಹಿತ್ಯ ಕ್ಷೇತ್ರದಲ್ಲಿ ಸುಧಾ ರವರ ಕೃತಿ ಸದ್ದು ಮಾಡಲಿ. ಹೆಚ್ಚು ಹೆಚ್ಚು ಓದುಗರನ್ನು ತಲುಪುವಂತಾಗಲಿ ಎಂದು ಅವರ ಒಡನಾಡಿಗಳು ಸಾಹಿತ್ಯಪ್ರಿಯರು ಶುಭ ಹಾರೈಸಿದರು.

error: