May 11, 2024

Bhavana Tv

Its Your Channel

ಗುಡ್ಡ ಕುಸಿತದ ಭೀತಿಯಲ್ಲಿ ಸೈನಿಕನ ಕುಟುಂಬ : ಕುಸಿತ ತಡೆಯುವ ಯಾವ ಕ್ರಮವು ಕೈಗೊಳ್ಳದ ಆಡಳಿತ

ಹೊನ್ನಾವರ ತಾಲ್ಲೂಕಿನ ಹಡಿನಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೂರಿನಲ್ಲಿ ಕಳೆದ ವರ್ಷದ ಮಳೆಗೆ ಗುಡ್ಡ ಕುಸಿತ ಉಂಟಾಗಿ ಬೃಹತ್ ಗಾತ್ರದ ಕಲ್ಲು ಬಂಡೆಯೊAದು ಸೈನಿಕ ಸುರೇಶ ಗೌಡರವರ ಮನೆಯಂಗಳಕ್ಕೆ ಅಪ್ಪಳಿಸಿತ್ತು, ಕೂದಲೆಳೆ ಅಂತರದಲ್ಲಿ ದೊಡ್ಡ ಪ್ರಮಾಣದ ಅನಾಹುತ ತಪ್ಪಿದ ಘಟನೆ ನಡೆದಿತ್ತು. ಘಟನೆ ನಡೆದು ವರ್ಷ ಕಳೆದು ಮತ್ತೆ ಮಳೆ ಪ್ರಾರಂಭವಾದರೂ ಗುಡ್ಡ ಕುಸಿತ ತಡೆಯುವ ಯಾವ ಕ್ರಮವು ಕೈಗೊಳ್ಳದ ಕಾರಣ ಮತ್ತೆ ಗುಡ್ಡ ಕುಸಿತದ ಭೀತಿಯಲ್ಲಿ ಸೈನಿಕನ ಕುಟುಂಬ ಕಾಲಕಳೆಯ ಬೇಕಾಗಿದೆ.

ಕಾವೂರಿನ ಸೈನಿಕ ಸುರೇಶ ನಾರಾಯಣ ಗೌಡ ಎಂಬುವವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿತ ಉಂಟಾಗಿ, ಭಾರಿ ಪ್ರಮಾಣದ ಆಗಬಹುದಾದ ಅನಾಹುತ ತಪ್ಪಿತ್ತು. ಗುಡ್ಡ ಕುಸಿತದಿಂದ ಸುರೇಶ ಗೌಡ ಅವರ ಮನೆಗೆ ಹಾನಿಯಾಗಿತ್ತು. ಆ ಸಮಯದಲ್ಲಿ ಅಂದಿನ ತಹಸೀಲ್ದಾರ್ ವಿವೇಶ ಶೇಣ್ವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈಗಲೂ ಕೂಡ ಗುಡ್ಡ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮಳೆ ಪ್ರಾರಂಭವಾದರೆ ಮಣ್ಣು, ಕಲ್ಲು ಬೀಳುತ್ತಲೆ ಇದೆ.

ಇಲ್ಲಿ ಗುಡ್ಡ ಕುಸಿತ ನಡೆದಿದ್ದು ಎರಡನೇ ಬಾರಿ, ಕಳೆದ ವರ್ಷಕ್ಕಿಂತ ಮೊದಲಿನ ವರ್ಷವು ಗುಡ್ಡ ಕುಸಿತವಾಗಿತ್ತು. ಈ ವರ್ಷ ಏನಾದರು ಅಂತಹ ಘಟನೆ ನಡೆದರೆ ಮೂರನೆ ಘಟನೆ ಯಾಗಲಿದೆ. ಘಟನೆಗೆ ಸಂಬAಧಿಸಿ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದು ಒಂದಿಷ್ಟು ಫೋಟೊ ತೆಗೆದುಕೊಂಡು ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಇಂಜಿನಿಯರ್ ಬಂದು ಸ್ಥಳದ ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುತ್ತಾರೆ. ಆದರೆ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ವರ್ಷದ ಹಿಂದೆ ಆಗಸ್ಟ್ ತಿಂಗಳಲ್ಲಿ ಗುಡ್ಡ ಕುಸಿತ ಉಂಟಾಗಿತ್ತು, ವರ್ಷದ ಅವಧಿ ಪೂರ್ಣಗೊಳ್ಳುವ ಮುನ್ನವೇ ಕಳೆದ ವರ್ಷವು ಮತ್ತೆ ಗುಡ್ಡ ಕುಸಿತ ಉಂಟಾಗಿತ್ತು.

ಇನ್ನು ಗುಡ್ಡದ ಮೇಲ್ಬಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಶಾಲೆ ಹಾಗೂ ಪಕ್ಕದಲ್ಲಿರುವ ಅಂಗನವಾಡಿಗೂ ಅಪಾಯ ಎದುರಾಗಲಿದೆ. ಗುಡ್ಡ ಕುಸಿತ ಮುಂದುವರಿದ್ದಲ್ಲಿ ಶಾಲೆಯ ಕಟ್ಟಡಕ್ಕೂ ಕುಸಿತದ ಭೀತಿ ತಪ್ಪಿದ್ದಲ್ಲ. ಶಾಲೆಯ ಕಂಪೌAಡ್ ಈಗಾಗಲೇ ಕುಸಿದಿದೆ.
ಇಲ್ಲಿಯ ಪರಿಸ್ಥಿತಿಗನುಗುಣವಾಗಿ ಅತೀಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಗುಡ್ಡದ ಕೆಳಗಿರುವ ಮನೆ ಮತ್ತು ಶಾಲೆಗೆ ಯಾವುದೇ ಅನಾಹುತವಾಗದಂತೆ ಎಚ್ಚರ ವಹಿಸಿ ಕ್ರಮಕ್ಕೆ ಮುಂದಾಗಬೇಕಿದೆ.

ಕಳೆದ ವರ್ಷ ಘಟನೆ ನಡೆದ ಸಮಯದಲ್ಲಿ ಶಾಸಕ ಸುನೀಲ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಗುಡ್ಡಕ್ಕೆ ಪಿಚ್ಚಿಂಗ್ ಕಟ್ಟಿ ಮನೆಗೆ ಮತ್ತು ಶಾಲೆಗೆ ರಕ್ಷಣೆ ಕೊಡುವ ಭರವಸೆ ನೀಡಿದ್ದರು. ವರ್ಷ ಕಳೆದರು ಯಾವ ಕ್ರಮವೂ ಆಗಿಲ್ಲ. ಶಾಸಕರು, ಅಧಿಕಾರಿಗಳು ಬಂದು ಭರವಸೆ ನೀಡಿದ್ದು ಬಿಟ್ಟರೆ ಯಾವ ಪ್ರಯೋಜನವು ಆಗಿಲ್ಲ.

ದೇಶ ಕಾಯೋ ಸೈನಿಕನ ಸಮಸ್ಯೆ ಬಗೆಹರಿಸಲು ಹಿಂದೇಟು ಹಾಕುವ ವ್ಯವಸ್ಥೆ, ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಹೇಗಾಗಬೇಡ. ಸೈನಿಕನಾಗಿ ಇಡೀ ದೇಶಕ್ಕೆ ರಕ್ಷಣೆ ನೀಡುತ್ತಿದ್ದರೆ, ತಮ್ಮ ಮನೆಯವರ ಬಗ್ಗೆ ಭಯದಿಂದಲೇ ಕಾಲ ಕಳೆಯ ಬೇಕಾಗಿದೆ. ಎಲ್ಲಿ ತನ್ನ ಮನೆಯ ಹತ್ತಿರದ ಗುಡ್ಡ ಕುಸಿದು ಬಿದ್ದಿತ್ತು ಎನ್ನುವ ಆತಂಕದಲ್ಲೆ ತನ್ನ ದೇಶ ಸೇವೆ ಸಲ್ಲಿಸ ಬೇಕಾಗಿದೆ.

ಜಿಲ್ಲಾಧಿಕಾರಿಯವರು ಹೊನ್ನಾವರಕ್ಕೆ ಬಂದ ಸಮಯದಲ್ಲಿ ಮಾದ್ಯಮದವರು ಅವರ ಗಮನಕ್ಕೆ ತಂದಾಗ ತಹಸೀಲ್ದಾರಿಗೆ ಪರಿಶೀಲನೆಗೆ ಸೂಚಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಗುಡ್ಡ ಕುಸಿತ ಉಂಟಾಗುತ್ತಿದೆ. ಶಾಸಕರು, ತಹಸೀಲ್ದಾರರವರು ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರಿ ಶಾಲೆ ಹಾಗೂ ಅಂಗನವಾಡಿಯೂ ಸಹ ಅಪಾಯದ ಹಾದಿಯಲ್ಲಿದೆ. ಮತ್ತೆ ಮಳೆ ಪ್ರಾರಂಭವಾಗಿದೆ. ಸಂಬAಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಕರ ಅಭಿಪ್ರಾಯವಿದೆ.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: