May 13, 2024

Bhavana Tv

Its Your Channel

‘ನಮ್ಮ ಹೊನ್ನಾವರ ಉಳಿಸಿ, ಬೆಳೆಸಿ ಜನಪರ ವೇದಿಕೆ’ಯಿಂದ ಪ.ಪಂ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮನವಿ

ಹೊನ್ನಾವರ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ, ಗಟಾರ, ಅವ್ಯವಸ್ಥೆಯಿಂದ ಕೂಡಿದೆ. ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯತ ವಿಶೇಷ ಸಭೆ ಕರೆದು ಚರ್ಚಿಸಿ ಸರ್ವಾನುಮತದಿಂದ ನಿರ್ಣಯ ಕೈಗೊಂಡು ಪ್ರಸ್ತಾವನೆಗಳನ್ನು ಕಳಿಸುವಂತೆ ಆಗ್ರಹಿಸಿ ‘ನಮ್ಮ ಹೊನ್ನಾವರ ಉಳಿಸಿ, ಬೆಳೆಸಿ ಜನಪರ ವೇದಿಕೆ’ ಪ್ರಮುಖರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ, ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ದಿನ ನಿತ್ಯ ವಾಹನ ಸಂಚಾರ ದಟ್ಟಣೆಯ ಸಮಸ್ಯೆ, ಇಕ್ಕಟ್ಟಾದ ರಸ್ತೆಗಳು ಸಮಸ್ಯೆಗಳಿಂದ ನಲುಗುತ್ತಿದೆ. ಪಟ್ಟಣದಲ್ಲಿ ಪ್ಲೈ ಓವರ್, ಸರ್ವೀಸ್ ರಸ್ತೆ ಮತ್ತು ಅಂಡರ್ ಪಾಸ್ ವ್ಯವಸ್ಥೆ, ಪಟ್ಟಣ ಪಂಚಾಯತನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಬೇಕು.
ಯುಜಿಡಿ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷ ಕಳೆದರೂ ಸಹ ಎಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ, ಇದನ್ನು ಪೂರ್ಣಗೊಳಿಸಬೇಕು. ಇವೆಲ್ಲವನ್ನೂ ಸಂಬAಧಪಟ್ಟ ಸರಕಾರಕ್ಕೆ ಹಾಗೂ ಜನ ಪ್ರತಿನಿಧಿಗಳಿಗೆ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಂಡು ಪ್ರಸ್ತಾವನೆಗಳನ್ನು ಕಳಿಸಿ ತಾವೂ ಈ ಕುರಿತು ಒತ್ತಡ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ವೇದಿಕೆ ಅಧ್ಯಕ್ಷ ಜಿ.ಎನ್.ಗೌಡ, ಪ್ರಮುಖರಾದ ರವಿ ಶೆಟ್ಟಿ ಕವಲಕ್ಕಿ, ಕೃಷ್ಣಮೂರ್ತಿ ಹೆಬ್ಬಾರ್, ಮಹೇಶ ಕಲ್ಯಾಣಪುರ, ಶ್ರೀಕಾಂತ ನಾಯ್ಕ, ಎಸ್.ವಿ.ನಾಯ್ಕ, ಎಚ್.ಆರ್.ಗಣೇಶ, ಅಜಿತ್ ತಾಂಡೇಲ್, ಎಸ್.ಡಿ.ಹೆಗಡೆ, ಶಂಕರ ಗೌಡ, ಜಗದೀಶ ನಾಯ್ಕ, ಮತ್ತಿತರರು ಹಾಜರಿದ್ದರು.
ಪಪಂ ಅಧ್ಯಕ್ಷ ಶಿವರಾಜ ಮೇಸ್ತ, ಮುಖ್ಯಾಧಿಕಾರಿ ಪ್ರವೀಣ ಕುಮಾರ, ಸದಸ್ಯ ಶ್ರೀಪಾದ ನಾಯ್ಕ ಮನವಿ ಸ್ವೀಕರಿಸಿದರು.

error: