May 13, 2024

Bhavana Tv

Its Your Channel

ಜೂನ್ 25ಕ್ಕೆ ಲೋಕ್ ಅದಾಲತ್

ಹೊನ್ನಾವರ: ನ್ಯಾಯಾಲಯಗಳಲ್ಲಿನ ಚಿಕ್ಕ-ಪುಟ್ಟ ವ್ಯಾಜ್ಯಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಕಕ್ಷಿದಾರರ ನಡುವಿನ ಪರಸ್ಪರ ದ್ವೇಷ, ಅಸೂಯೆ ಕಡಿಮೆ ಆಗಿ, ಆರ್ಥಿಕ ಸಾಮಾಜಿಕ ಬೆಳವಣಿಗೆÀಗೆ ಕಾರಣವಾಗುತ್ತದೆ ಎಂದು ಹೊನ್ನಾವರ ಸಿವಿಲ್ ಜಡ್ಜ ಹಿರಿಯ ವಿಭಾಯ ನ್ಯಾಯಾಧಿಶ ಕುಮಾರ ಜಿ. ಕರೆ ನೀಡಿದರು.
ಅವರು ಜೂನ್ ತಿಂಗಳ 25 ಶನಿವಾರದಂದು ಹೊನ್ನಾವರದ ನ್ಯಾಯಾಲಯದ ಆವರಣದಲ್ಲಿ ನಡೆಯಲಿರುವ ಲೋಕ್ ಅದಾಲತ್ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಿದ್ದರು.
ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯಗಳ ಸೂಚನೆಯ ಅನ್ವಯ ರಾಷ್ಟಿçÃಯ ಲೋಕ್ ಅದಾಲತ್ ಪ್ರಾಧಿಕಾರವು ಹಮ್ಮಿಕೊಂಡಿರುವ ಲೋಕ್ ಅಧಾಲತ್ ಕಾರ್ಯಕ್ರಮದ ಸದುಪಯೋಗಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ರಾಜಿ ಮಾಡಬಹುದಾದ ಚಿಕ್ಕ-ಪುಟ್ಟ ಕ್ರ‍್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಸಿವಿಲ್ ಪ್ರಕರಣಗಳು, ವಿದ್ಯುತ್ ಶುಲ್ಕ ಬಾಕಿ ಪ್ರಕರಣಗಳು, ಪ.ಪಂ ಟೆಕ್ಸ ಪ್ರಕರಣಗಳು, ಭೂಸ್ವಾದಿನ ಪ್ರಕರಣಗಳನ್ನು, ಅಮಲ್ಜಾರಿ ಪ್ರಕರಣಗಳನ್ನು ಸೌಹಾರ್ಧಯುತವಾಗಿ ರಾಜಿ ಮುಲಕ ಇತ್ಯರ್ಥ ಪಡಿಸಲು ಅವಕಾಶ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಿನ್ಸಿಪಲ್ ಜೆ.ಎಂ.ಎಫ್.ಸಿ ಹಾಗೂ ಸಿವಿಲ್ ಜಡ್ಜ ಕಿರಿಯ ವಿಭಾಗ ನ್ಯಾಯಾಧೀüಶ ಚಂದ್ರಶೇಖರ ಬಣಕಾರ್, ವಕೀಲರ ಸಂಘದ ಅಧ್ಯಕ್ಷ, ಜಿ.ವಿ.ಭಟ್, ಕಾರ್ಯದರ್ಶಿ ಮನೋಜ ಜಾಲಿಸತ್ಗಿ, ಉಪಸ್ಥಿತರಿದ್ದರು.

error: