April 29, 2024

Bhavana Tv

Its Your Channel

ದೋ ಎಂದು ಸುರಿಯುತ್ತಿರುವ ಮಳೆರಾಯ : ಮೋಡ ಮುಸುಕಿದ ಕತ್ತಲು : ಜನಜೀವನ ಅಸ್ತವ್ಯಸ್ತ

ಹೊನ್ನಾವರ (5-07-22) ತಾಲೂಕಿನಲ್ಲಿ ಒಂದೆ ಸಮನೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ್ಯ ಗೊಂಡು ಬಿಟ್ಟಿದೆ. ಮಳೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಮೋಡಕವಿದ ವಾತಾವರಣಕ್ಕೆ ಹಗಲಿನಲ್ಲಿ ಕತ್ತಲು ಆವರಿಸಿದಂತೆ ಬಾಸವಾಗುತ್ತಿದೆ.

ತಣ್ಣನೆ ಬೀಸುವ ಗಾಳಿ ಮಳೆಗೆ ವಾತಾವರಣವು ತಂಪಾಗಿದೆ. ಹಳ್ಳಿಯಲ್ಲಿ ಸ್ವಲ್ಪ ಮಟ್ಟಿಗೆ ಜ್ವರ ತಂಡಿ ಕೆಮ್ಮು ಪ್ರಾರಂಭವಾಗಿದ್ದು ಇದೆ ರೀತಿ ಮಳೆ ಮುಂದುವರಿದರೆ ಮತ್ತಷ್ಟು ಉಲ್ಬಣ ಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಕೆಲವು ದಿನದ ಹಿಂದೆ ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು, ರವಿವಾರ ತಡರಾತ್ರಿಯಿಂದ ಶುರುವಾದ ಮಳೆ ಮಂಗಳವಾರ ತನಕ ಅಬ್ಬರಿಸುತ್ತಿದೆ. ರಸ್ತೆಯ ತುಂಬೆಲ್ಲ ನೀರು ಹಳ್ಳದೋಪಾದಿಯಲ್ಲಿ ಹರಿದಿದೆ. ಹಳ್ಳ ಕೊಳ್ಳಗಳೆಲ್ಲ ನೀರಿನಿಂದ ತುಂಬಿ ಹರಿಯುತ್ತಿದೆ. ಮಳೆ ನಿರಂತರವಾಗಿ ಸುರಿಯುತ್ತಿದ್ದ ಪರಿಣಾಮ ಪೇಟೆಯಲ್ಲಿ ಜನರ ಸಂಚಾರ ಕೂಡ ಕಡಿಮೆಯಾಗಿತ್ತು.

ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗದಿದ್ದರು, ಅಲ್ಲಿ ಇಲ್ಲಿ ಕೆಲವು ಅವಘಡ ನಡೆಯುತ್ತಲೆ ಇದೆ. ಗುಂಡಬಾಳ ಮತ್ತು ಭಾಸ್ಕೇರಿ ನದಿ ದಡದ ತೀರದ ತನಕ ತುಂಬಿ ಹರಿಯುತ್ತಿದೆ. ನಿರಂತರ ಮಳೆ ನಿಲ್ಲದೆ ಸುರಿದರೆ ನೀರು ಮೇಲಕ್ಕೂ ಬರುವ ಸಾಧ್ಯತೆ ಇದೆ. ಬಾನು ತೂತು ಬಿದ್ದಂತೆ ದೋ ಎಂದು ಸುರಿಯುತ್ತಿರುವ ಮಳೆಗೆ ಜನ ಯಾವ ಕೆಲಸವನ್ನು ಮಾಡಲಾಗದೆ ಮನೆಯಲ್ಲೇ ಠಿಕಾಣಿ ಹೂಡಿದ್ದಾರೆ.

ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಂಡಮಕ್ಕಿಯ ರಾಮ ಗೌಡ ರವರ ವಾಸದ ಮನೆ ಭಾಗಶಃ ಹಾನಿಯಾಗಿದೆ. ಮನೆಗೆ ಹೊಂದಿಕೊAಡಿರುವ ಗೋಡೆ ಕುಸಿದು ಅಂದಾಜು ಹತ್ತು ಸಾವಿರದಷ್ಟು ಹಾನಿ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.

error: