April 29, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವಾಟರ್ ಬೆಡ್ ವಿತರಣೆ

ಹೊನ್ನಾವರ: ಕಳೆದ 13 ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಅಶಕ್ತವಾಗಿ ಮಲಗಿದ್ದ ತಾಲೂಕಿನ ಕಡ್ನೀರು ಉದಯ ಹನುಮಂತ ದೇಶಭಂಡಾರಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ಮಂಗಳವಾರ ವಾಟರ್ ಬೆಡ್ ವಿತರಣೆ ಮಾಡಲಾಯಿತು.
ಕಡ್ನೀರು ಉದಯ ಹನುಮಂತ ದೇಶಭಂಡಾರಿ ಅವರು ಕೃಷಿ ಚಟುವಟಿಕೆಯ ಮೂಲಕ ತಮ್ಮ ಪುಟ್ಟ ಸಂಸಾರದೊAದಿಗೆ ನೆಮ್ಮದಿಯ ಬದುಕು ಕಂಡಿದ್ದವರಾಗಿದ್ದರು. ಆದರೆ ಕಳೆದ 13 ವರ್ಷದ ಹಿಂದೆ ತೆಂಗಿನ ಮರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು, ಸೊಂಟದ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಯಾತನಾಮಯ ಜೀವನ ಸಾಗಿಸುತ್ತಿದ್ದಾರೆ. ಪ್ರತಿ ತಿಂಗಳು ಔಷಧಿಗಾಗಿ 2 ಸಾವಿರ ರೂ. ವ್ಯಯಿಸಬೇಕಾಗಿದ್ದು, ಉದಯ ಅವರ ಕುಟುಂಬದ ನಿರ್ವಹಣೆಯೂ ಕಷ್ಟವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ-ಭಟ್ಕಳ ವಲಯವು ಮಂಗಳವಾರ ಉದಯ ದೇಶಭಂಡಾರಿ ಅವರ ಕುಟುಂಬಕ್ಕೆ ಭೇಟಿ ನೀಡಿ ವಾಟರ್ ಬೆಡ್ ವಿತರಣೆ ಮಾಡಿದರು. ಈ ವೇಳೆ ಅವರ ಕುಟುಂಬದ ನಿರ್ವಹಣೆ, ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ಮಾಹಿತಿ ಪಡೆಯಲಾಯಿತು.
ಈ ಸಂದರ್ಭದಲ್ಲಿ ಚಂದಾವರ ಗ್ರಾಪಂ ಸದಸ್ಯ ವಿನಯ ನಾಯ್ಕ, ಪತ್ನಿ ನಾಗವೇಣಿ, ಪುತ್ರಿ ಸಾಕ್ಷಿ, ಯೋಜನಾಧಿಕಾರಿ ವಾಸಂತಿ ಅಮಿನ್, ಹಳದೀಪುರ ವಲಯ ಮೇಲ್ವಿಚಾರಕಿ ರಮ್ಯಾ ಜಿ, ಹೇರಂಬ ದೇಶಭಂಡಾರಿ, ಪತ್ರಕರ್ತ ಸುಧೀರ್ ಕಡ್ನೀರು ಉಪಸ್ಥಿತರಿದ್ದರು.

error: