April 29, 2024

Bhavana Tv

Its Your Channel

ಕಡ್ನೀರಿನ ಶಾಲೆಯಲ್ಲೊಂದು ನವಗ್ರಹ ವನ

ಹೊನ್ನಾವರ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ನೀರು ಹಾಗೂ ಯುಥ್ ಫಾರ್ ಸೇವಾ ಸಂಸ್ಥೆ ಸಿರ್ಸಿ ಇದರ ಸಂಯುಕ್ತ ಆಶ್ರಯದಲ್ಲಿ ನವಗ್ರಹವನ ಔಷಧಿ ಸಸ್ಯ ಸ್ಥಾಪನಾ ಕಾರ್ಯಕ್ರಮ ನಡೆಯಿತು.
ಶಾಲೆಯ ಪೂರ್ವ ವಿದ್ಯಾರ್ಥಿ, ಶಿಕ್ಷಕ ನಾರಾಯಣ ಬಿ ನಾಯ್ಕರು ನವಗ್ರಹ ವನದ ರೂವಾರಿಗಳು. ಅವರು ನವಗ್ರಹ ವನಕ್ಕೆ ಬೇಕಾಗುವ ಸಸ್ಯಗಳನ್ನು ತಾವೇ ಸಂಗ್ರಹಿಸಿಕೊAಡು ಮುಂಜಾನೆ ಶಾಲೆಯಂಗಳಕ್ಕೆ ಬಂದಿಳಿದಾಗ ಎಲ್ಲರಿಗೂ ಸಂತಸ ಮೂಡಿಸಿದರು.
ಶಿಕ್ಷಕ ನಾರಾಯಣ ನಾಯ್ಕ ನವಗ್ರಹಗಳು ಹಾಗೂ ನವಗ್ರಹ ವನದ ಕುರಿತು ಪರಿಚಯ ಮಾಡಿದರು. ,ಎಕ್ಕೆ, ಮುತ್ತುಗ, ಖೈರಾ, ಉತ್ತರಣಿ, ಅಶ್ವತ್ಥ, ಅತ್ತಿ, ಶಮಿ, ದರ್ಬೆ ಮತ್ತು ದೂರ್ವಾ ಗಳನ್ನು ಪ್ರದರ್ಶಿಸಿ, ಮಕ್ಕಳಿಂದಲೇ ಗಿಡಗಳನ್ನು ನೆಡಿಸಿದರು. ಜೊತೆಗೆ ಮಧುನಾಶಿನಿ, ನೆಲಮಾವು, ಮುಂತಾದ ಕೆಲವು ಔಷಧಿ ಸಸ್ಯಗಳ ಪರಿಚಯ ಮಾಡುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ನಾಟಿ ವೈದ್ಯ ಶ್ರೀಧರ ನಾಯ್ಕ ಕಡ್ನೀರು ಔಷಧಿ ಸಸ್ಯಗಳ ಮಹತ್ವ ಹಾಗೂ ಬಳಕೆಯ ಕುರಿತು ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಕುರಿತು ಎಲ್ಲರೂ ಗಮನಹರಿಸಬೇಕು ಎಂದರು. ಶ್ರೀ ಧನ್ವಂತರಿಯ ಪ್ರಾರ್ಥನೆ ಹೇಳಿಕೊಟ್ಟರು.
ಸಿ ಆರ್ ಪಿ ಈಶ್ವರ ಭಟ್ ಮಾತನಾಡಿ ಭಾರತೀಯರ ಕೊಡುಗೆಯಾದ ಆಯುರ್ವೇದ ಮತ್ತು ಯೋಗ ಇಂದು ವಿಶ್ವಕ್ಕೇ ಮಾದರಿಯಾಗಿದೆ. ನಾವಿದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ ಸದಸ್ಯ ವಿನಯ್ ನಾಯ್ಕರು ಅಪರೂಪದ ಕಾರ್ಯಕ್ರಮ ತನ್ನ ಶಾಲೆಯಲ್ಲಿ ನಡೆದಿದ್ದು ತುಂಬಾ ಖುಷಿ ತಂದಿದೆ. ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳೋಣ ಎಂದರು.
ಎಸ್.ಡಿ.ಎA.ಸಿ ಅಧ್ಯಕ್ಷ ದಿನೇಶ್ ನಾಯ್ಕ ಮಾತನಾಡಿ ನಾರಾಯಣ ನಾಯ್ಕರಂತೆ ಪೂರ್ವ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕೆಂದು ಹೇಳುತ್ತಾ, ಇಂದು ನಡೆದ ನವಗ್ರಹ ವನದ ನಿರ್ಮಾಣದ ಕುರಿತು ಸಂತಸ ವ್ಯಕ್ತಪಡಿಸಿದರು.
ಎಸ್ ಡಿ ಎಂ ಸಿ ಸದಸ್ಯರಾದ ರವಿ ನಾಯ್ಕ, ರಾಮಚಂದ್ರ ನಾಯ್ಕ, ಸುನೀತಾ, ಗೋದಾವರಿ ಸಹಕರಿಸಿದರು. ಪೂರ್ವವಿದ್ಯಾರ್ಥಿಗಳಾದ ರೇಷ್ಮಾ, ಸುಧೀರ್ ಮುಂತಾದವರು ಹಾಜರಿದ್ದರು.
ಮುಖ್ಯಾಧ್ಯಾಪಕಿ ಶಾರದಾ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಭಾರತಿ ನಾಯ್ಕ ಸ್ವಾಗತಿಸಿದರು. ಎಚ್.ಎನ್ ನಾಯ್ಕ ವಂದಿಸಿದರು. ಜ್ಯೋತಿ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

error: