April 29, 2024

Bhavana Tv

Its Your Channel

ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷರಾಗಿ ಸತೀಶ ನಾಯ್ಕ ಆಯ್ಕೆ

ಹೊನ್ನಾವರ: ಜುಲೈ 3 ರಂದು ನಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘ ಹೊನ್ನಾವರ ತಾಲೂಕು ನಿರ್ದೇಶಕರುಗಳ ಚುನಾವಣೆಯಲ್ಲಿ ಸತೀಶ ನಾಯ್ಕ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಜಲವಳಕರ್ಕಿ, ರೋನಿ ಗೊನ್ಸಾಲ್ವಿಸ್ ಸರ್ಕಾರಿ ಪ್ರೌಢಶಾಲೆ ಕೋಟೆಬೈಲ್, ಸತೀಶ್ ನಾಯ್ಕ, ಸರ್ಕಾರಿ ಪ್ರೌಢಶಾಲೆ ಮಂಕಿ ಹಾಗೂ ಪ್ರಕಾಶ ನಾಯ್ಕ ಸರ್ಕಾರಿ ಪ್ರೌಢಶಾಲೆ ಚಿತ್ತಾರ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಸರ್ಕಾರಿ ಪ್ರೌಢಶಾಲೆ ಮಂಕಿಯ ಶಿಕ್ಷಕವರಾದ ಸತೀಶ ನಾಯ್ಕಯವರನ್ನು ತಾಲೂಕು ಘಟಕದ ಅಧ್ಯಕ್ಷರನ್ನಾಗಿಯೂ, ಸರ್ಕಾರಿ ಪ್ರೌಢಶಾಲೆ ಜಲವಳಕರ್ಕಿಯ ಶಿಕ್ಷಕರಾದ ಸತೀಶ ನಾಯ್ಕ ಇವರನ್ನು ತಾಲೂಕು ಘಟಕದ ಕಾರ್ಯದರ್ಶಿ ತಾಲೂಕಾ ನಿರ್ದೇಶಕರ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ. ಎಂದು ಜಿಲ್ಲಾಚುನಾವಣಾಧಿಕಾರಿ ರಾಜಕುಮಾರ ನಾಯ್ಕ ಹಾಗೂ ತಾಲೂಕು ಚುಣಾವಣಾ ಅಧಿಕಾರಿ ದೀಪಕ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: