May 14, 2024

Bhavana Tv

Its Your Channel

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ.

ಹೊನ್ನಾವರ: ಧರ್ಮಸ್ಥಳದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಶ್ರೀ ಗುರುದೇವ ಮಠದಲ್ಲಿ ಜುಲೈ ೧೩ ರಿಂದ ಆಗಷ್ಟ್ ೨೯ ರವರೆಗೆ ನಡೆಯಲಿದೆ ಎಂದು ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷ ಎಂ.ಜಿ.ನಾಯ್ಕ ತಿಳಿಸಿದರು.

ಹೊನ್ನಾವರದ ನಾಮಧಾರಿ ಸಭಾಭವನದಲ್ಲಿ `ಚಾತುಮಾಸ್ಯ ವೃತಾರಂಭ’ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಗುರುಪರಂಪರೆಯಲ್ಲಿ ಚಾತುರ್ಮಾಸ್ಯ ವೃತಕ್ಕೆ ಮಹತ್ವದ ಸ್ಥಾನವಿದೆ. ಚಾತುರ್ಮಾಸ್ಯ ವೃತಾಚರಣೆಯಿಂದ ಗುರುಗಳಲ್ಲಿ ಶಕ್ತಿ ಹೆಚ್ಚುತ್ತದೆ, ಚಾತುರ್ಮಾಸ್ಯ ಅವಧಿಯಲ್ಲಿ ಸ್ವಾಮೀಜಿಯವರು ವಿಶೇಷ ಸಾಧನೆ ಮಾಡಲು ಮತ್ತು ಭಕ್ತರಿಗೆ ಅಧ್ಯಾತ್ಮಿಕ ಅನುಭವ ಪಡೆಯಲು ಅವಕಾಶ ದೊರೆಯುವುದು. ಜಿಲ್ಲೆಯ ಹಾಗೂ ಹೊನ್ನಾವರ ತಾಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಶ್ರೀರಾಮ ಸೇವಾ ಸಮಿತಿಯ ಸಂಚಾಲಕ ವಾಮನ ನಾಯ್ಕ ಮಾತನಾಡಿ, ಜುಲೈ ೧೩ ಗುರುಪೂರ್ಣಿಮೆಯಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಗುರುಮಠದಲ್ಲಿ ಬೆಳಗ್ಗೆ ೭ ಗಂಟೆಗೆ ಚಾತುರ್ಮಾಸ್ಯ ಸಂಕಲ್ಪ ನಡೆಯುವುದು ೧೦ ಗಂಟೆಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ೧೦-೩೦ ಗಂಟೆಗೆ ದೇವರಗುಡ್ಡ ಗುರುಮಠದ ಶ್ರೀ ದೇವ ಲಿಂಗೇಶ್ವರ ದೇವಾಲಯದಿಂದ ಶ್ರೀಗಳ ಪುರ ಪ್ರವೇಶ ಮೆರವಣಿಗೆ, ವ್ಯಾಸ ಪೀಠಾರೋಹಣ, ಪಾದುಕಾ ಪೂಜೆ, ಆಶೀರ್ವಚನ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಚಾತುರ್ಮಾಸ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ ೧೦ ಗಂಟೆಗೆ ಭಜನಾ ಕಾರ್ಯಕ್ರಮ, ೧೧-೩೦ ಗಂಟೆಗೆ ಗುರುಪಾದುಕಾ ಪೂಜೆ, ೧೨-೩೦ ಗಂಟೆಗೆ ಫಲ ಮಂತ್ರಾಕ್ಷತೆ ವಿತರಣೆ, ೧ ಗಂಟೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಹೊನ್ನಾವರದ ಭಕ್ತಾಧಿಗಳಿಗೆ ಅಗಷ್ಟ ೫ ರಂದು ಸ್ವಾಮಿಗಳ ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಅವತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಪಾಲ್ಗೋಳ್ಳಲು ವಿನಂತಿಸಿದರು.

ಸಮಿತಿಯ ಕಾರ್ಯದರ್ಶಿ ಟಿ.ಟಿ.ನಾಯ್ಕ, ಉಪಾಧ್ಯಕ್ಷರಾದ ಕೆ.ಆರ್.ನಾಯ್ಕ, ರಾಮಪ್ಪ ನಾಯ್ಕ, ಸದಸ್ಯರಾದ ಶೇಖರ ನಾಯ್ಕ, ಸುಬ್ರಾಯ ನಾಯ್ಕ, ಗಜಾನನ ನಾಯ್ಕ, ಮೋಹನ ನಾಯ್ಕ, ಲಂಬೋದರ ನಾಯ್ಕ, ಜಗದೀಶ ನಾಯ್ಕ, ರಾಜು ನಾಯ್ಕ ಇತರರಿದ್ದರು.

error: