April 29, 2024

Bhavana Tv

Its Your Channel

ಬಸ್ಸು ನಿಲ್ದಾಣದ ಕಾಲುವೆ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿ ಭರವಸೆ

ಹೊನ್ನಾವರ ಪಟ್ಟಣದ ಬಸ್ಸು ತಂಗುದಾಣಕ್ಕೆ ಹೊಂದಿಕೊAಡಿರುವ ನೀರು ಹೋಗುವ ಕಾಲುವೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ಕೊಡುವುದಾಗಿ ಶಾಸಕ ದಿನಕರ ಶೆಟ್ಟಿಯವರು ಭರವಸೆ ನೀಡಿದರು.

ಮಳೆ ಸುರಿದಂತೆ ಕಿರಿದಾದ ಕಾಲುವೆ ತುಂಬಿ ರಸ್ತೆಯ ಮೇಲೆ ನೀರಿನ ಹೊಳೆ ಹರಿಯುವುದರಿಂದ ಸಾರ್ವಜನಿಕರಿಗೆ ನಿತ್ಯವೂ ಸಮಸ್ಯೆ ಉಂಟಾಗುತ್ತಿತ್ತು. ಈ ಸಮಸ್ಯೆಯ ಶಾಶ್ವತ ಪರಿಹಾರದ ಉದ್ದೇಶದಿಂದ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿ ಹೊಸ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಕಾಲುವೆ ನಿರ್ಮಾಣಕ್ಕೆ ಅಡ್ಡಿ ಉಂಟಾಗಿದ್ದ ವಿದ್ಯುತ್ ಕಂಬವನ್ನು ತೆರವು ಗೊಳಿಸಿ ಸ್ವಲ್ಪ ಮುಂದಕ್ಕೆ ಹೂಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. ಕಾಲುವೆ ಸರಿಪಡಿಸಲು ಪ. ಪಂ. ದವರು ಎಷ್ಟೇ ಪ್ರಯತ್ನ ಪಟ್ಟರು ಅದು ಸರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ನೀರು ಬರುವ ಸಾಂದ್ರತೆಕ್ಕಿAತ ಕಾಲುವೆ ಕಿರಿದಾದ ಕಾರಣ ನೀರಿನ ಒತ್ತಡಕ್ಕೆ ರಸ್ತೆಯ ಮೇಲೆ ಹರಿಯುವಂತಾಗಿತ್ತು. ಕಾಲುವೆ ತೆರವು ಗೊಳಿಸಿರುವುದರಿಂದ ರಸ್ತೆಯ ಪಕ್ಕದಲ್ಲಿ ಮುಚ್ಚಿಗೆ ಮಾಡಿದ ಕಲ್ಲುಗಳನ್ನು ರಸ್ತೆಯ ಮೇಲೆ ಇಟ್ಟಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಶಾಸಕರೇ ಖುದ್ದಾಗಿ ಬಂದು ಸಮಸ್ಯೆ ಪರಿಶೀಲಿಸಿ ಶೀಘ್ರ ಬಗೆಹರಿಸುವ ಭರವಸೆ ನೀಡಿದ್ದಾರೆ.

ಪಟ್ಟಣದ ಕರ್ಕಿನಾಕಾ, ಬಾಂದೆಗದ್ದೆ, ಸರ್ಪಿ ಸೆಂಟರ್, ನವನಗರ ಕಾಲೋನಿಯ ಸ್ಥಳೀಯ ನಿವಾಸಿಗಳು ಸ್ಥಳೀಯ ವ್ಯಕ್ತಿಯೊಬ್ಬರಿಂದ ಈ ಹಿಂದಿನಿAದಲು ನೈಸರ್ಗಿಕವಾಗಿ ಹರಿದು ಹೋಗುತ್ತಿದ್ದ ನೀರನ್ನು ಮಣ್ಣು ಹಾಕಿ ತಡೆದಿದ್ದಾರೆ, ಅದನ್ನು ತೆರವು ಗೊಳಿಸಬೇಕೆಂದು ಎಂದು ಮನವಿ ಮಾಡಿಕೊಂಡಿದ್ದರು. ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಶಾಸಕರು ಮಣ್ಣು ತೆರವುಗೊಳಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದAತೆ ನೋಡಿಕೊಳ್ಳಿ ಎಂದು ಸಂಬAಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕರ್ಕಿನಾಕಾ ಹತ್ತಿರ ಐ. ಆರ್. ಬಿ ಯವರು ನಡೆಸುತ್ತಿರುವ ಹೆದ್ದಾರಿ ಕಾಮಗಾರಿಯಿಂದ ನೀರು ರಸ್ತೆಗೆ ಹರಿದು ಬರುತ್ತಿತ್ತು. ರಸ್ತೆಗೆ ನೀರು ಬರದಂತೆ ತಡೆದು ಸಾರ್ವಜನಿಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಿ ಎಂದು ಐ. ಆರ್. ಬಿ ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷ ಶಿವರಾಜ್ ಮೇಸ್ತ, ಸದಸ್ಯ ವಿಜಯ್ ಕಾಮತ್, ಉಳಿದ ಪ. ಪಂ. ಸದಸ್ಯರು, ಸಿಪಿಐ ಶ್ರೀಧರ್ ಎಸ್. ಆರ್. ಹೆಸ್ಕಾಂ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ.

error: