May 14, 2024

Bhavana Tv

Its Your Channel

ಮಂಕಿ ಸರಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಆಂಬ್ಯುಲೆನ್ಸ್ ಮತ್ತು ಪಟ್ಟಣ ಪಂಚಾಯತದಲ್ಲಿ ಕಸವಿಲೇವಾರಿ ವಾಹನ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

ಹೊನ್ನಾವರ : ಮಂಕಿ ಪಟ್ಟಣ ಪಂಚಾಯತ ಸರಿ ಸುಮಾರು 40 ಸಾವಿರ ಜನಸಂಖ್ಯೆಯನ್ನು ಹೊಂದಿರುವAತಹ ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗಿಸಲು ಈಗಾಗಲೇ ಬಹುಕೋಟಿ ವೆಚ್ಚದಲ್ಲಿ ಶಾಲೆ, ಪದವಿಪೂರ್ವ ಕಾಲೇಜು, ಪ್ರಥಮದರ್ಜೆ ಕಾಲೇಜು, ವಸತಿನಿಲಯ, ವಿದ್ಯುತ್ ಗ್ರಿಡ್ ಇಂತಹ ಹಲವು ಮೂಲಭೂತ ಸೌಕರ್ಯಗಳನ್ನು ವದಗಿಸಲಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.

ಅವರು ಮಂಕಿ ಸರಕಾರಿ ಆಸ್ಪತ್ರೆಯಲ್ಲಿ ನೂತನ ಅತ್ಯಾಧುನಿಕ ಸುಸಜ್ಜಿತ ಆಂಬ್ಯುಲೆನ್ಸ್ ಮತ್ತು ಪಟ್ಟಣ ಪಂಚಾಯತದಲ್ಲಿ ಕಸವಿಲೇವಾರಿ ವಾಹನ ಉದ್ಘಾಟಿಸಿ ಮಾತನಾಡಿದರು. ಮಂಕಿ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಹೊಸ ಹೊಳಪು ನೀಡುವ ಉದ್ದೇಶದಿಂದ ಮಂಕಿ ಭಾಗವನ್ನು ಇತ್ತೀಚೆಗೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಅದರಂತೆ ಈ ಭಾಗದ ಸ್ವಚ್ಛತೆಯನ್ನು ಹೆಚ್ಚುಸುವ ನಿಟ್ಟಿನಲ್ಲಿ ಕಸವಿಲೆವಾರಿಗಾಗಿ ಸರಿ ಸುಮಾರು 50 ಲಕ್ಷ_ವೆಚ್ಚದಲ್ಲಿ 3 ವಾಹನಗಳನ್ನು ನೀಡಲಾಗಿದೆ ಎಂದರು. ಇದೆ ಸಮಯದಲ್ಲಿ ವಾಹನವನ್ನು ಉದ್ಘಾಟಿಸಿ ಪಟ್ಟಣ ಪಂಚಾಯತ್ ಗೆ ಹಸ್ತಾಂತರಿಸಿದರು.

ಮAಕಿ ಭಾಗದ ಜನರ ಆರೋಗ್ಯ ಮತ್ತು ತುರ್ತು ವೈದ್ಯಕೀಯ ಸೇವೆಗೆ ಕಳೆದ 20 ವರ್ಷದ ಬೇಡಿಕೆಯಾಗಿ, 21 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಅತ್ಯಾಧುನಿಕ ಮತ್ತು ಸುಸಜ್ಜಿತ ಆಂಬ್ಯುಲೆನ್ಸ್ ನ್ನು ಉದ್ಘಾಟಿಸಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಆಸ್ಪತ್ರೆಯನ್ನುಮೇಲ್ದರ್ಜೆಗೆ ಏರಿಸಲಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗುವುದು ಎಂದರು.

ಮಂಕಿ ಮುಖ್ಯ ರಸ್ತೆಯಿಂದ ಹಿಡಿದು ವಿವಿಧ ಭಾಗಗಳಿಗೆ ಅಂದಾಜು 7.5 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಲಾಗಿದ್ದು ಕಾಮಗಾರಿ ಟೆಂಡರ್ ಹಂತದಲ್ಲಿದೆ. ಇನ್ನೂ ಕೆಲವೇ ದಿನಗಳಲ್ಲಿ ರಸ್ತೆನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಇದೆ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ ನಾಯ್ಕಡ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪ. ಪಂ. ಮುಖ್ಯಾಧಿಕಾರಿ ಅಜೇಯ ಬಂಡಾರಕರ, ಆರೋಗ್ಯಧಿಕಾರಿ ದಿನೇಶ, ಪಕ್ಷದ ಮುಖಂಡರಾದ ಸುಬ್ರಾಯ ನಾಯ್ಕ, ಸುರೇಶ ಖಾರ್ವಿ, ಸುರೇಶ ಹರಿಕಂತ್ರ, ಗಣಪತಿ ಗೌಡ ಚಿತ್ತಾರ, ಆನಂದ ನಾಯ್ಕ ,ಪಕ್ಷದ ಇನ್ನುಳಿದ ಮುಖಂಡರು ಇದ್ದರು.

ವರದಿ: ವೆಂಕಟೇಶ ಮೇಸ್ತ

error: