May 16, 2024

Bhavana Tv

Its Your Channel

ಹೊನ್ನಾವರ ಲಯನ್ಸ್ ಕ್ಲಬ್ ನಿಂದ ಕೃಷಿಕರಿಗೆ ಉತ್ತೇಜನ ನೀಡುವ ವಿನೂತನ ಕಾರ್ಯಕ್ರಮ

ಹೊನ್ನಾವರ:- ಕೃಷಿಕರಿಗೆ ಉತ್ತೇಜನ ನೀಡುವ ವಿನೂತನ ಕಾರ್ಯಕ್ರಮ, ಹೊನ್ನಾವರ ಲಯನ್ಸ್ ಕ್ಲಬ್ ನಿಂದ ಚಂದಾವರದ ವಡಗೆರೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಭಾ ಅಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ರಾದ ಲಯನ್ ಎಮ್.ಜಿ.ನಾಯ್ಕ ಮಾತನಾಡಿ, ಜೈ ಜವಾನ್ ಜೈ ಕಿಸಾನ್ ಎಂಬ ಮಾತಿನಂತೆ ,ಸೈನಿಕರು ದೇಶದ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡರೆ,ರೈತರು ಅನ್ನದಾತರೆನಿಸಿಕೊಂಡಿದ್ದಾರೆ.ಹೀಗಿರುವಾಗ ಇಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೂಡಾ ಕೃಷಿ ಚಟುವಟಿಕೆಗಳು ನಶಿಸುತ್ತಿರುವುದು ಅತ್ಯಂತ ಅಘಾತಕಾರಿಯಾದ ಬೆಳವಣಿಗೆಯಾಗಿದೆ.ಆದ್ದರಿಂದ ಹೊನ್ನಾವರ ಲಯನ್ಸ್ ಕ್ಲಬ್ ಕೃಷಿಗೆ ಮತ್ತು ಕೃಷಿಕರಿಗೆ ಉತ್ತೇಜನ ನೀಡುವ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.
ಲಯನ್ಸ್ ಆನಂದ ನಾಯ್ಕ ಮಾತನಾಡಿ ಹೊನ್ನಾವರ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಭಾಗದ ಜನರು ಪ್ರಾಮಾಣಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಮನಗಂಡು ಇಲ್ಲಿಯ ಕೃಷಿಕರಿಗೆ ಉತ್ತೇಜಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕ ವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ಎಮ್.ಜೆ.ಎಫ್ ಲಯನ್ ರಾಜೇಶ ಸಾಳೇಹಿತ್ತಲ್, ಖಜಾಂಚಿ ರೋಶನ್ ಶೇಟ್ ಉಪಸ್ಥಿತರಿದ್ದರು.ಶಿಕ್ಷಕ ರಾಘವೇಂದ್ರ ನಾಯ್ಕ ನಿರೂಪಿಸಿದರು. ನಿಕಟಪೂರ್ವ ಕಾರ್ಯದರ್ಶಿ ಲಯನ್ ಉದಯ ನಾಯ್ಕ ವಂದಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರು ಎರಡು ಗಂಟೆಗಳ ಕಾಲ ರೈತರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಸುಮಾರು 50 ರೈತರಿಗೆ ಕುಟಾರಿ ಮತ್ತು ಬೆಡ್ ಸೀಟ್ ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ ಶಾಂತಾರಾಮ್ ನಾಯ್ಕ,ಲಯನ್ ಎನ್.ಜಿ.ಭಟ್,ಲಯನ್ ಅಶೋಕ ಮಹಾಲೆ,ಲಯನ್ ಶೇಕರ ನಾಯ್ಕ,ಲಯನ್ ಚಂದ್ರಕಾAತನಾಯಕ್,ಲಯನ್ ಮಹೇಶ ನಾಯ್ಕ,ಲಯನ್ ಡಿ.ಡಿ.ಮಡಿವಾಳ್,ಲಯನ್ ಪ್ರಭಾಕರ ಮಾಸ್ತಿಕಟ್ಟೆ,,ಲಯನ್ ಸಂತೋಷ ನಾಯ್ಕ,ಲಯನ್ ಹರೀಶ್ ನಾಯ್ಕ,ಲಯನ್ ಮಹೇಶ ನಾಯ್ಕ,ಲಯನ್ ಮಂಜು ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

error: