April 29, 2024

Bhavana Tv

Its Your Channel

ಭಕ್ತಾದಿಗಳಿಗೆ ಪ್ಲಾಸ್ಟಿಕ್ ಚೀಲ ಬಳಕೆ ಮಾಡದಂತೆ ಜಾಗೃತಿ, ಬಟ್ಟೆಯ ಚೀಲ ನೀಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನ

ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯ ಪ್ರಯುಕ್ತ ಆಗಮಿಸುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ಚೀಲ ಬಳಕೆ ಮಾಡದಂತೆ ಜಾಗೃತಿ ಮೂಡಿಸಿ ಬಟ್ಟೆಯ ಚೀಲ ನೀಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಯಿತು.

ಸಮತಾ ಬಳಗ, ನಾಗರಿಕ ವೇದಿಕೆ ಮತ್ತು ಮಹಿಳಾ ಸಂಘಟನೆ-ಕವಲಕ್ಕಿ ಇದರ ಸ್ವಯಂಸೇವಕರು ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿಂತು
ದೇವಾಲಯಕ್ಕೆ ಬರುವ ಭಕ್ತರಿಗೆ ಕರಪತ್ರ, ಪರ್ಯಾಯ ಕೈಚೀಲಗಳನ್ನು ಹಂಚಿ ಪ್ಲಾಸ್ಟಿಕ್ ಬಳಕೆ ನಿಷೇದದ ಬಗ್ಗೆ ಜಾಗೃತಿ ಮೂಡಿಸಿದರು.

ನಾಗರ ಪಂಚಮಿ ಹಬ್ಬದ ನಿಮಿತ ಹತ್ತಾರು ಸಾವಿರ ಭಕ್ತಾದಿಗಳು ನೆರೆಯುತ್ತಾರೆ. ಬೆಳಕು ಹರಿಯುವ ಮೊದಲಿನಿಂದ ಸಂಜೆಯ ತನಕ ಭಕ್ತಸಾಗರ ಹರಿದು ಬಂದಿತ್ತು.
ಆ ದಿನದ ಬಳಿಕ ಸುತ್ತುಮುತ್ತೆಲ್ಲ ಪ್ಲಾಸ್ಟಿಕ್, ಕಸ, ಕೊಳೆಯಿಂದ ತುಂಬಿ ಹೋಗುತ್ತದೆ. ದೇವಾಲಯ ಸಮಿತಿಯವರು, ಅಂಗಡಿಕಾರರು ಅದರ ಶುದ್ಧತೆಗೆಂದು ಕೆಲವು ದಿನ ಕಾಲ ಸಾಹಸ ಪಡಬೇಕಾಗುತ್ತದೆ. ಅದಕ್ಕೋಸ್ಕರ ಮುಂಜಾಗ್ರತ ಕ್ರಮವಾಗಿ ಅಂಗಡಿಗಳಿಗೆ ನೋಟಿಸ್ ಕೂಡ ನೀಡಿದ್ದೇವೆ, ಆದರೂ ಕೂಡ ಕೆಲವು ಅಂಗಡಿಯವರು ಪ್ಲಾಸ್ಟಿಕ್ ಬಳಕೆ ಮಾಡಿದ್ದಾರೆ.

2022ರ ಜುಲೈ 1ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲ್ಪಟ್ಟಿದೆ. ಈ ಮೊದಲೇ ಕಾನೂನು ಪ್ರಕಾರ ನಿಷೇಧಕ್ಕೊಳಗಾಗಿದ್ದರೂ ಜನರು ಪ್ಲಾಸ್ಟಿಕ್ ಚೀಲ ಹಿಡಿದೇ ಬಂದಿರುವುದು ಕಂಡು ಬಂತು. ಅದನ್ನು ಅವರಿಂದ ಪಡೆದು ಬಳಸಿ ಎಲ್ಲೆಂದರಲ್ಲಿ ಬಿಸಾಡದಂತೆ, ಬಟ್ಟೆ ಚೀಲ ಕೊಟ್ಟಿರುತ್ತಾರೆ. ವಶಪಡಿಸಿಕೊಂಡ ಪ್ಲಾಸ್ಟಿಕ್ ರಾಶಿಯೇ ಬಿದ್ದಿದ್ದು ಕಂಡು ಬಂತು. ಪ್ಲಾಸ್ಟಿಕ್ ನೆಲ, ಜಲ, ಜಾನುವಾರು, ಜೀವಿಗಳಿಗೆ ಮರಣಪ್ರಾಯವಾಗಿದೆ. ನಮ್ಮ ಕಸವನ್ನು ನಾವೇ ಸೂಕ್ತ ವಿಲೇವಾರಿ ಮಾಡುವುದರ ಕುರಿತು ಜಾಗೃತಿ ಮೂಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಸ್ವಯಂ ಸೇವಾ ಕಾರ್ಯಕರ್ತರು ಮನವಿ ಮಾಡಿಕೊಂಡರು.

ಈ ಅಭಿಯಾನದ ಬಗ್ಗೆ ಮಾತನಾಡಿದ ಜಯಾ ಶೆಟ್ಟಿ ಕವಲಕ್ಕಿ ಪರಿಸರ ಸ್ವಚ್ಛ ಇಡಲು ಪ್ರಯತ್ನ ಪಡುತ್ತಿದ್ದೇವೆ. ಕೆಲವರು ಸ್ಪಂದನೆ ನೀಡುತ್ತಿದ್ದಾರೆ, ಇನ್ನೂ ಕೆಲವರು ಸ್ಪಂದನೆ ನೀಡುತ್ತಿಲ್ಲ. ನಾನು ಬೆಳಿಗ್ಗೆ 6.30 ರಿಂದ ಮಳೆಯಲ್ಲೇ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ಸಹಕಾರ ನೀಡಬೇಕು. ಗ್ರಾ. ಪಂ. ಪೊಲೀಸ್ ಇಲಾಖೆ ಪ್ಲಾಸ್ಟಿಕ್ ಸಂಪೂರ್ಣ ನಿಷೇದ ಮಾಡಬೇಕು. ನಾವು ಪ್ರತಿ ರವಿವಾರ ಕವಲಕ್ಕಿ ಸ್ವಚ್ಛ ಗೊಳಿಸುತ್ತಿದ್ದೇವೆ. ಜನ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಬೇಸರವಿದೆ ಎಂದರು.

ಈ ಅಭಿಯಾನದಲ್ಲಿ ಸ್ವಯಂ ಸೇವಾ ಕಾರ್ಯಕರ್ತರಾಗಿ ನಾಗರಿಕ ವೇದಿಕೆ ಕವಲಕ್ಕಿಯ ಎನ್. ಎಸ್. ಬಂಡಾರಿ ಕವಲಕ್ಕಿ, ಶೇಖರ ನಾಯ್ಕ ಶಿಕ್ಷಕರು, ಜನಾರ್ಧನ ಶೆಟ್ಟಿ, ಸುಬ್ರಾಯ ಗೌಡ, ಗಿರೀಶ ಮಡಿವಾಳ, ಮಹಿಳಾ ಸಂಘಟನೆಯ ಜಯಾ ಶೆಟ್ಟಿ, ಪೂರ್ಣಿಮಾ ಮಡಿವಾಳ, ಸಂಗೀತ ನಾಯ್ಕ, ರಶ್ಮಿ ಭಟ್ಟ ಶ್ಯಾ0ಡ್ರಾ ಮೂಡ್ಕಣಿ, ಆಶಾ, ಸುಜಾತ, ರಂಚಿತ ನಾಯ್ಕ, ನಾಗವೇಣಿ ಗೌಡ, ಕುಮಾರಿ ಸ್ವಾತಿ ಇದ್ದರು. ಮುಗ್ವಾ ಗ್ರಾ. ಪಂ. ಅಧ್ಯಕ್ಷರಾದ ಗೌರಿ ಅಂಬಿಗ, ಸದಸ್ಯ ಗೋವಿಂದ ಭಟ್ಟ, ಪಂಚಾಯತ ಅಭಿವೃದ್ಧಿ ಅಧಿಕಾರಿ ಕವಿತಾ ಗೌಡ ಸಹಕಾರ ನೀಡಿದರು.

error: