April 29, 2024

Bhavana Tv

Its Your Channel

ಪುರಾಣ ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯಲ್ಲಿ ನಾಗರಪಂಚಮಿ ಪ್ರಯುಕ್ತ ದೇವರ ದರ್ಶನ ಪಡೆದ ಸಾವಿರಾರು ಭಕ್ತರು.

ಹೊನ್ನಾವರ ತಾಲೂಕಿನ ನಾನಾ ಕಡೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ನಾಗರಾಧನೆ ಮಾಡಿ ಹಾಲಿನ ಅಭಿಷೇಕ್ ದೊಂದಿಗೆ ಭಕ್ತರು ಪೂಜೆ ಸಲ್ಲಿಸಿದರು.

ಪೌರಾಣಿಕ ಕಾಲದಿಂದಲೂ ಸರ್ಪಗಳನ್ನು ದೇವರಂತೆ ಪೂಜಿಸಲಾಗುತ್ತದೆ. ನಾಗರ ಪಂಚಮಿಯ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ.
ಪುರಾಣ ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಪಂಚಮಿ ಪ್ರಯುಕ್ತ ಮಂಗಳವಾರ
ಸಾವಿರಾರು ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪುನೀತರಾದರು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದಿಂದ ತುಂತುರು ಮಳೆ ಬೀಳುತ್ತಲೆ ಇದ್ದರು ಭಕ್ತರ ದಂಡು ಹರಿದು ಬರುತ್ತಲೆ ಇತ್ತು.

ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಾರಾಧನೆಗೆ ಪುಣ್ಯ ಕ್ಷೇತ್ರವಾಗಿದ್ದು, ನಾಗರ ಪಂಚಮಿ ದಿನವಾದ ಮಂಗಳವಾರ ಸಾವಿರಾರು ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಳಿಗ್ಗೆಯಿಂದ ರಾತ್ರಿ 8.30ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸರ್ವಾಭರಣ ಸೇವೆ, ನಾಗ ಮಂತ್ರಾಭಿಷೇಕ, ರುದ್ರಾಭಿಷೇಕ ಇತ್ಯಾದಿ ಸೇವೆಗಳು ನಡೆದವು.

ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯ ಚರ್ಮ ರೋಗ, ಸಂತಾನ ಅಪೇಕ್ಷೆಗಳಿಗೆ ಪುಣ್ಯ ಸ್ಥಳವಾಗಿದೆ. ಸಣ್ಣಪುಟ್ಟ ಕಾಯಿಲೆಗಳು ಬಂದಲ್ಲಿ ಸುಬ್ರಹ್ಮಣ್ಯನಿಗೆ ಬಾಳೆಗೊನೆ ಪೂಜೆ ಸಮರ್ಪಣೆ ಮಾಡಿದ್ದಲ್ಲಿ ಭಕ್ತರ ಮನೋಬಿಷ್ಠೆಗಳು ಸಿದ್ಧಿಸುತ್ತವೆ ಎನ್ನುವುದು ಭಕ್ತರ ನಂಬಿಕೆ. ವಿವಿಧ ಜಿಲ್ಲೆ, ವಿವಿಧ ರಾಜ್ಯ ಹಾಗೂ ಸುತ್ತಮುತ್ತಲಿನ ಊರುಗಳ ಜನರೆಲ್ಲ ತಮ್ಮ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ನಾಗಬನವು ಶ್ರೀ ಕ್ಷೇತ್ರಕ್ಕೆ ಹೋಗುವ ದ್ವಾರದಲ್ಲಿದ್ದು, ನಾಗರಪಂಚಮಿಯAದು ಅಲ್ಲಿ ವಿಶೇಷ ಪೂಜೆ ಭಕ್ತರಿಂದ ನಡೆಯುತ್ತದೆ. ವಿಶೇಷವಾಗಿ ಭಕ್ತರು ಹರಕೆ ಹಾಗೂ ಭಕ್ತಿಪೂರ್ವಕವಾಗಿ ನಾಗಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳವಾದ ‘ನಾಗಬನ’ವು ಇಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಕ್ಷೇತ್ರಕ್ಕೆ ಕುಟುಂಬ ಸಮೇತ ಬಂದು ಪೂಜೆ ಸಲ್ಲಿಸಿ ಶ್ರೀದೇವರ ಕೃಪೆಗೆ ಪಾತ್ರರಾದ ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರತಿ ವರ್ಷ ಶ್ರಷ್ಠಿಯ ಸಮಯದಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ನಾಗರ ಪಂಚಮಿ ದಿನವಾದ ಮಂಗಳವಾರ ಕೂಡ ದೇವರ ದರ್ಶನ ಮಾಡಿ ಕ್ಷೇತ್ರದ ಜನರಿಗೆ ಯಾವುದೇ ಕಷ್ಟವು ಬರದಿರಲಿ, ಜಿಲ್ಲೆ ರಾಜ್ಯದಲ್ಲಿ ಯಾವುದೇ ಸಮಸ್ಯೆಯು ಉಂಟಾಗದಿರಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದರು.

ದೇವಾಲಯದ ಆಡಳಿತ ಕಮಿಟಿಯ ಅಧ್ಯಕ್ಷರಾದ ಎಸ್. ಆರ್. ಹೆಗಡೆ ಕಣ್ಣಿಯವರು ಮಾತನಾಡಿ ಕಳೆದ ಎರಡು ವರ್ಷದಿಂದ ಕೋವಿಡ್ ಕಾರಣಕ್ಕೆ ದೇವರ ಪೂಜಾ ಸೇವೆ ಮಾತ್ರ ನಡೆದಿತ್ತು. ಬಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇಲ್ಲವಾಗಿತ್ತು. ಈ ವರ್ಷ ಪೂರ್ಣಪ್ರಮಾಣದಲ್ಲಿ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಪ್ರತಿ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಭಕ್ತರಿಗೆ ಯಾವುದೇ ತೊಂದರೆ ಯಾಗದಂತೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ ಎಂದರು.
ಕಾರ್ಯದರ್ಶಿ ನಾರಾಯಣ ತೋಟಿಯವರು ಮಾತನಾಡಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ವಿವರ ನೀಡಿದರು.
ಮುಂಜಾನೆಯಿAದ ಸಂಜೆ ತನಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯ ಗೋವಿಂದ ಭಟ್ಟ, ದೇವಸ್ಥಾನ ಆಡಳಿತ ಮಂಡಳಿಯ ಎನ್. ಎಂ. ಹೆಗಡೆ, ಇದ್ದರು.

error: