May 15, 2024

Bhavana Tv

Its Your Channel

ಶ್ರೀ ಗುರು ವಿದ್ಯಾಧಿರಾಜ ನ್ಯೂಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾಗಮ

????????????????????????????????????

ಭಟ್ಕಳ:ಸ್ವತಂತ್ರ ಭಾರತ ಮತ್ತು ಸ್ವಚ್ಛ ಭಾರತ ಇವೆರಡು ಗಾಂಧೀಜಿಯವರ ಪರಿಕಲ್ಪನೆಗಳಾಗಿದ್ದು ಭಾರತ ಸ್ವಾತಂತ್ರö್ಯವಾಗಿ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರೂ, ಸ್ವಚ್ಛ ಭಾರತ ಇನ್ನೂ ಸಾಧ್ಯವಾಗದೆ ಇರುವುದು ಅತ್ಯಂತ ಬೇಸರದ ಸಂಗತಿಯಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಸ್ವಚ್ಛತೆಯ ಅರಿವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ಸುರೇಶಎಮ್ ಕೆ ಹೇಳಿದರು.

ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ನ್ಯೂಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸಮಾಗಮ-2022 ಎನ್ನುವಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಗುಟಖಾತಿನ್ನುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ, ಹೆಸರಿನ ಮುಂಬಾಗದಲ್ಲಿ ಜಾತಿಯನ್ನು ನಮೂದಿಸುವುದರಿಂದ ಪ್ರತ್ಯೇಕತೆಯನ್ನು ನಾವೇ ಪೋಷಿಸಿದಂತೆ, ಅಮೃತ ಮಹೋತ್ಸವದ “ಹರ್‌ಘರ್‌ತಿರಂಗಾ” ಕಾರ್ಯಕ್ರಮ ಹೀಗೆ ಅನೇಕ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾದ ಅನಫಲ್‌ಗ್ರುಪ್ ನ ವ್ಯವಸ್ಥಾಪಕ ಅಚ್ಯುತ್ ಕಾಮತ್ ಮಾತನಾಡುತ್ತ ಶಿಕ್ಷಣವು ಕೇವಲ ಅಂಕಗಳಿಕೆಗೆ ಸೀಮಿತವಾಗದೆ, ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಂದಿರಿಗೆ ನೀಡುವ ಗೌರವ ಮತ್ತು ಸಮಾಜದಲ್ಲಿ ತೋರ್ಪಡಿಸುವ ನಡುವಳಿಕೆಯಲ್ಲಿಯೂ ಸಹ ವ್ಯಕ್ತವಾಗುವಂತಿರಬೇಕೆAದು ಹೇಳಿದರು.
ಭಟ್ಕಳ ಎಜ್ಯುಕೇಶನಟ್ರಸ್ಟನ ಅಧ್ಯಕ್ಷ ಡಾ.ಸುರೇಶ್ ನಾಯಕ ಅಧ್ಯಕ್ಷತೆ ವಹಿಸಿದ್ದರು.ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಬಾಗ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು,ವಿದ್ಯಾರ್ಥಿಗಳಾದ ಕೃಪಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ತಿಲಕ್ ವಂದಿಸಿದರು, ಪ್ರಾಂಜಲ್ ಮತ್ತುಕೀರ್ತಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ದ್ವೀತಿಯ ಪಿ.ಯು.ಸಿ.ಯಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಕೊನೆಯಲ್ಲಿ ದ್ವೀತಿಯ ಪಿ.ಯು.ಸಿ.ವಿದ್ಯಾರ್ಥಿಗಳಿಂದ ಮನೋರಂಜನೆಕಾರ್ಯಕ್ರಮ ನಡೆಯಿತು.

error: