April 29, 2024

Bhavana Tv

Its Your Channel

ಮೋದಿ@20 ಗ್ರಂಥ ಬಿಡುಗಡೆ

Exif_JPEG_420

ಹೊನ್ನಾವರದ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ಮತ್ತು ಮೋದಿ@20 ಉತ್ತರಕನ್ನಡ ಸಂಘಟನೆಗಳ ಸಹಯೋಗದಲ್ಲಿ ನಡೆದ ಮೋದಿ@20 ಗ್ರಂಥ ಬಿಡುಗಡೆ
ನಮ್ಮದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಆತ್ಮವಿಶ್ವಾಸ ಮತ್ತು ಸ್ಫ್ಪೂರ್ತಿಯ ಸೆಲೆ. ಕೊರೊನಾ ನಿಯಂತ್ರಣದ ಸಂದರ್ಭದಲ್ಲಿ ಅವರ ಪಾತ್ರ ಬಹಳ ಮಹತ್ವದ್ದು. ವಿಜ್ಞಾನಿಗಳಿಗೆ ಧೈರ್ಯತುಂಬಿ ಲಸಿಕೆಯನ್ನು ದೇಶದಲ್ಲಿಯೇ ಅಭಿವೃದ್ಧಿ ಪಡಿಸಿದ್ದರಿಂದ ದೇಶದ ಬೊಕ್ಕಸಕ್ಕೆ ಸಾಕಷ್ಟು ಹಣ ಉಳಿಯಿತು. ಇಂತಹ ಮಹಾನ್ ವ್ಯಕ್ತಿಯ ಪುಸ್ತಕವನ್ನು ಹೊನ್ನಾವರದಲ್ಲಿ ನಾನು ಬಿಡುಗಡೆಗೊಳಿಸುತ್ತಿರುವುದು ಸಂತಸದ ವಿಚಾರ ಎಂದು ಡಾ.ಚಂದ್ರಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.
ಮೋದಿಯವರ ಕಾರ್ಯಕ್ಷಮತೆ, ಸಮರ್ಪಣಾ ಮನೋಭಾವ, ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ. ‘ಜನೌಷಧಿ’ಯಂತಹ ಯೋಜನೆಗಳ ಮೂಲಕ ಅವರು ನಿಜವಾದ ಜನಸೇವಕರಾಗಿದ್ದಾರೆ ಎಂದರು.
‘ಮೋದಿ@20’ ಪುಸ್ತಕ ಪರಿಚಯಿಸಿ ಮಾತನಾಡಿದ ನಾರಾಯಣಯಾಜಿ ಸಾಲೇಬೈಲ್ ಮೋದಿಯವರ ಕುರಿತಂತೆ ಬಂದಿರುವ ಈ ಪುಸ್ತಕದಲ್ಲಿ 20 ಗಣ್ಯರ ಲೇಖನಗಳಿವೆ. ಕರ್ನಾಟಕದಿಂದ ಸುಧಾಮೂರ್ತಿ ಮತ್ತುಡಾ. ದೇವಿಪ್ರಸಾದ ಶೆಟ್ಟಿಇಬ್ಬರ ಲೇಖನಗಳಿವೆ. ಪ್ರತಿಯೊಬ್ಬರೂ ಈ ಪುಸ್ತಕವನ್ನುಓದಲೇಬೇಕುಎಂದರು.
ಎಂ.ಪಿ.ಇ. ಸೊಸೈಟಿಯಅಧ್ಯಕ್ಷರಾದಕೃಷ್ಣಮೂರ್ತಿ ಭಟ್ಟ ಉಪಸ್ಥಿತರಿದ್ದರು.ಪ್ರಾಚಾರ್ಯರಾದಡಾ. ವಿಜಯಲಕ್ಷಿö್ಮ ಎಂ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮೋದಿ@20ಉತ್ತರಕನ್ನಡದ ಸಂಚಾÀಲಕರಾದಡಾ.ಎಸ್. ಎಸ್. ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.ನಾಗರಾಜ ಅಪಗಾಲ ವಂದಿಸಿದರು. ಪ್ರಶಾಂತ ಮೂಡಲಮನೆ ನಿರೂಪಿಸಿದರು

error: