May 18, 2024

Bhavana Tv

Its Your Channel

ಇಡಗುಂಜಿ ಶ್ರೀ ಮಹಾ ಗಣಪತಿಯ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ವಿಘ್ನೆಶ್ವರನ ದರ್ಶನ ಪಡೆದ ಸಾವಿರಾರು ಭಕ್ತರು

ಹೊನ್ನಾವರ: ಪುರಾಣ ಪ್ರಸಿದ್ದ ಇಡಗುಂಜಿ ಶ್ರೀ ಮಹಾ ಗಣಪತಿಯ ದೇವಾಲಯದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಮಂಗಳವಾರ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಬಂದು ಶ್ರೀ ವಿಘ್ನ ವಿನಾಸಕ ವಿಘ್ನೆಶ್ವರನ ದರ್ಶನ ಪಡೆದರು,

ಬೆಳಿಗ್ಗೆ 7 ಗಂಟೆಗೆ ಪಂಚಾಮೃತಾಭಿಷೇಕದೊAದಿಗೆ ದೈನಂದಿನ ಸೇವೆಗಳು ನಡೆದವು, 10 ಗಂಟೆಯಿAದ ಗಣಹೋಮ ಸಂಕಲ್ಪ ದೊಂದಿಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ದೇವರ ಸನ್ನಿಧಿಯಲ್ಲಿ ಗಣಹೋಮ, ಕುಂಕುಮಾರ್ಚನೆ, ಹಣ್ಣುಕಾಯಿ. ಪಂಚಕಜ್ಜಾಯ ಸೇವೆ, ಬಾಳೆಗೊನೆ ಸೇವೆ, ಅಭಿಷೇಕ, ಮಂಗಳಾರತಿ, ಸತ್ಯ ಗಣಪತಿ ವ್ರತ, ಸತ್ಯ ನಾರಾಯಣ ವೃತ, ಪಂಚಾಮೃತ ಅಭಿಷೇಕ್, ದೂರ್ವಾರ್ಚನೆ, ಕುಂಕುಮಾರ್ಚನೆ, ಸೇರಿದಂತೆ ವಿವಿದ ಸೇವೆ ಸಲ್ಲಿಸಿದರು,

ಈ ಸಂದರ್ಭದಲ್ಲಿ ಮಾತನಾಡಿದ ಇಡಗುಂಜಿ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಮಂಜುನಾಥ ಭಟ್ಟ ರವರು ಅಂಗಾರಕಿ ಸಂಕಷ್ಟ ಚತುರ್ಥಿ ವಿಶೇಷತೆ ಕುರಿತು ಮಾತನಾಡಿದರು. ಇಂದು 250 ಗಣಹೋಮ, 75 ಸತ್ಯ ಗಣಪತಿ ಸತ್ಯ ನಾರಾಯಣ ವೃತ, ಫಲ ಪಂಚಾಮೃತ ಅಭಿಷೇಕ, 2 ಕ್ವೀಂಟಾಲ ಪಂಚಕಾದ್ಯ ಸೇವೆ, ಸೇರಿದಂತೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆದಿದೆ, ಅಂಗಾರಕ ಸಂಕಷ್ಟಿಯ ದಿನದಂದು ಜಿವನದಲ್ಲಿ ಬರತಕ್ಕಂತ ಸಂಕಷ್ಟ ನೀವಾರಣೆಯ್ಯಾಗುತ್ತದೆ ಎನ್ನುವ ನಂಬಿಕೆ ಭಕ್ತ ಜನರದು, ಬಂದAತ ಭಕ್ತರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಗಣೇಶ ಎಲ್ಲರ ಸಂಕಷ್ಟವನ್ನು ನೀವಾರಣೆ ಮಾಡಲಿ ಎಂದು ಹಾರೈಸಿದರು.
ವಿದ್ವಾನ್ ವಿಷ್ಣು ಭಟ್ಟ ಮಾತನಾಡಿ ಬಾದ್ರಪದ ಮಾಸದಲ್ಲಿ ಅಂಗಾರಕ ಸಂಕಷ್ಟಿ ಬಂದಿರುವುದು ಬಹಳ ವಿಷೇಶವಾಗಿದೆ, ಗಣಪತಿಯನ್ನು ಜೇಷ್ಠರಾಜ ಎಂದು ಕರೆಯಲಾಗುತ್ತದೆ, ಅಂಗಾರಕ ಅಂದರೆ ಕುಜ, ಕುಜ ಈಶ್ವರನ ಮಗ, ಗಣಪತಿಯು ಈಶ್ವರನ ಮಗನಾಗಿರುವುದರಿಂದ ಅಂಗಾರಕ ಸಂಕಷ್ಟಿಗೆ ಭೂ ಲೋಕದಲ್ಲಿ ನೀಡಲಾಗಿದೆ, ಅದರಂತೆ ಇಂದು ಅನೇಕ ಭಜಕರು ಸರತಿ ಸಾಲಿನಲ್ಲಿ ನಿಂತು ಗಣಪತಿಯ ದರ್ಶನವನ್ನು ಮಾಡುತಾ, ಪುನಿತರಾಗುತ್ತಿದ್ದಾರೆ ಎಲ್ಲರಿಗು ಮಂಗಲವನ್ನುAಟು ಮಾಡಲಿ ಎಂದು ಹಾರೈಸಿದರು.

ವಿವಿಧೆಡೆಯಿಂದ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: