May 4, 2024

Bhavana Tv

Its Your Channel

ಹೊನ್ನಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಹೊನ್ನಾವರ: ಶಿಕ್ಷಣದ ಒಂದು ಭಾಗದಂತಿರುವ ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿದಂತೆ. ಇದರ ಪ್ರಯೋಜನ ಪ್ರತಿಯೊಬ್ಬ ಮಕ್ಕಳು ಪಡೆಯಬೇಕೆಂದು ರೋಟರಿ ಅಧ್ಯಕ್ಷ ಮಹೇಶ ಕಲ್ಯಾಣಪುರ ಹೇಳಿದರು.

ಮಾಥೋ೯ಮಾ ಪ್ರೌಢಶಾಲೆಯಲ್ಲಿ ನಡೆದ ಹೊನ್ನಾವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳ ಮನಸ್ಸಿನಲ್ಲಿ ನೆಲೆ ನಿಂತ ಸಮಸ್ಯೆ ಮತ್ತು ಹೆದರಿಕೆಯನ್ನು ಮೆಟ್ಟಿನಿಂತು ತಮ್ಮಲ್ಲಿರುವ ಪ್ರತಿಭೆಯನ್ನು ಯಾವುದೇ ಸಂಕೋಚವಿಲ್ಲದೆ ಪ್ರದರ್ಶಿಸಿದರೆ ಬದುಕಿನಲ್ಲಿ ಮುಂದೆ ಬರಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊAದು ಪ್ರತಿಭೆ ಇದ್ದೇ ಇರುತ್ತದೆ. ಅದಕ್ಕಾಗಿ ಪಾಲಕರು ಸಹ ಮಕ್ಕಳ ಪ್ರತಿಭೆ ಗುರುತಿಸುವಂತಾಗಬೇಕು ಎಂದರು.

ಮಾರ್ಥೊಮಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಲೀಯೊ ಚಾಕೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಎಂಬುದು ಒಂದು ಅಡಿಪಾಯದ ಸಂಪನ್ಮೂಲದAತೆ. ಪ್ರತಿಭೆ ಎಂಬುದು ಚುರುಕುತನ ಮತ್ತು ಆನುವಂಶಿಕವಾಗಿ ಬರುವ ಕಲೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೊAದು ಕಲೆ ಅಂತರ್ಗತವಾಗಿರುತ್ತದೆ. ಅಂತಹ ಕಲೆಯನ್ನು ಪ್ರದರ್ಶಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ.ಮಕ್ಕಳ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದ ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ಎಸ್.ನಾಯ್ಕ ಮಾತನಾಡಿ, ಮಕ್ಕಳಲ್ಲಿರುವ ದೈತ್ಯ ಪ್ರತಿಭೆಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಇಂತಹ ವೇದಿಕೆಯಿಂದ ಪ್ರತಿಭೆಗಳು ಬೆಳಗುವಂತಾಗಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ ಮಾತನಾಡಿ, ಕೊರೋನಾ ಕಾಲದಿಂದ ಸುಮಾರು ಎರಡು ವರ್ಷಗಳ ಕಾಲ ನಿಂತಿದ್ದ ಕಾರಂಜಿ ಪ್ರಸಕ್ತ ಸಾಲಿನಲ್ಲಿ ಮತ್ತೆ ತನ್ನ ಹೊಸ ವೈಭವವನ್ನೇ ಪ್ರದರ್ಶಿಸಲಿದೆ. ನಮ್ಮ ಬಾಲ ಪ್ರತಿಭೆ ಬೆಳೆಯಲು, ಬೆಳಗಲು ಇದರಿಂದ ಸಾಧ್ಯ ಎಂದರು.

ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷೆ ಸಾಧನಾ ಬಗಿ೯ ಮಾತನಾಡಿ, ಮಕ್ಕಳಲ್ಲಿರುವ ಸಪ್ತ ಪ್ರತಿಭೆ ಬೆಳಗುವಂತಾಗಲು ಪ್ರತಿಭಾ ಕಾರಂಜಿ ಸಹಾಯಕವಾಗಿದೆ. ಮಕ್ಕಳ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಯಿಂದ ಅವರ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ ಎಂದರು.

ಪ್ರಾರAಭದಲ್ಲಿ ಮಾತೊ೯ಮಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಶೇಟ್ ಸ್ವಾಗತಿಸಿದರು. ಶಿಕ್ಷಕಿ ಪುಷ್ಪ ನಾಯ್ಕ ವಂದಿಸಿದರು. ಶಿಕ್ಷಕಿ ವಿಜಯ ಶೇಟ್ ನಿರೂಪಿಸಿದರು.

error: