May 15, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ” ಕೋಟಿ ಕಂಠ ಗೀತಾ ಗಾಯನ” ಕಾರ್ಯಕ್ರಮ

ಹೊನ್ನಾವರ; ನಮ್ಮ ಸಂಸ್ಕ್ರತಿಯ ಅರಿವು ನಮಗಿಲ್ಲ. ಕಾಂತಾರ ಸಿನಿಮಾ ಇಡೀ ಪ್ರಪಂಚ ವ್ಯಾಪ್ತಿಸಿದೆ. ಇದು ರೊಮಾಂಚನ ಮೂಡಿಸಿದ ಸಂಗತಿಯಾಗಿದೆ ಎಂದು ಜನಾಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅಭಿಪ್ರಾಯಪಟ್ಟರು.

ತಾಲೂಕಿನ ಕಾಸರಕೋಡ ಇಕೋ ಬೀಚ್ ಆವರದಲ್ಲಿ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ” ಕೋಟಿ ಕಂಠ ಗೀತಾ ಗಾಯನ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕನ್ನಡ ಮರೆತರೆ ನಮಗೆ ನಾವೇ ದ್ರೋಹ ಮಾಡಿಕೊಂಡAತೆ, ಭಾರತದ 56ಕ್ಕೂ ಅತ್ಯಂತ ಹಿರಿಯ ಭಾಷೆಯಲ್ಲಿ ಕನ್ನಡವು ಒಂದು. ಅದು ನಮ್ಮೆಗೆಲ್ಲರಿಗೂ ಭಾಷೆಯ ಮೇಲಿದ್ದ ಹಿರಿಮೆಯಾಗಿದೆ. ಕನ್ನಡದ ಹಿರಿಮೆ ಹೆಚ್ಚಿಸಲು ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲೋಣ ಎಂದು ಕರೆ ನೀಡಿದರು.
ವಿವಿಧ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಗೀತಾ ಗಾಯನ ಪ್ರಸುತ್ತಪಡಿಸಿದರು. ಆಯ್ದ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ವಿವಿಧ ದೇಶಭಕ್ತಿಗೀತೆ ಯನ್ನು ಪ್ರಸುತ್ತಪಡಿಸಿದರು.
ವೇದಿಕೆಯಲ್ಲಿ ಜಿಲ್ಲಾ ಯುವ ಜನ ಸೇವಾ ಕ್ರೀಡಾಧಿಕಾರಿ ಪ್ರವೀಣಕುಮಾರ, ತಹಶೀಲ್ದಾರ
ನಾಗರಾಜ ನಾಯ್ಕಡ್, ಇ.ಓ.ಸುರೇಶ ನಾಯ್ಕ,ಪ.ಪಂ.ಮೂಖ್ಯಾಧಿಕಾರಿ ಪ್ರವೀಣ ಕುಮಾರ್, ಪದವಿಪೂರ್ವ ಇಲಾಖೆಯ ಉಪನಿರ್ದೇಶಕರಾದ ಹನುಮಂತಪ್ಪ ನೆಟ್ಟುರ್, ಸಿಪಿಐ ಶ್ರೀಧರ ಎಸ್,ಆರ್, ವಾಲಿಬಾಲ್ ಅಶೋಶಿಯೇಶನ್ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಕೃಷಿಅಧಿಕಾರಿ ಪುನೀತಾ ಎಸ್.ಬಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷೆ ಸಾಧನಾ ಬರ್ಗಿ, ಯುವಜನ ಸೇವಾಕ್ರೀಢಾಧಿಕಾರಿ ಸುಧೀಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

error: