May 15, 2024

Bhavana Tv

Its Your Channel

ಗೆಳೆಯರ ಬಳಗ ಕೇಶವಪಾಲದಿಂದ 10ನೇ ವರ್ಷದ ಗ್ರಾಮೀಣ ಕ್ರೀಡಾಕೂಟ

ಹೊನ್ನಾವರ; ಗ್ರಾಮೀಣ ಕ್ರೀಡಾಕೂಟಗಳ ಆಯೋಜನೆಯಿಂದ ಮನೊರಂಜನೆಯ ಜೊತೆಗೆ ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದು ಕಾಂಗ್ರೇಸ್ ಮುಖಂಡ ಮಂಜುನಾಥ ನಾಯ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಸಾಲ್ಕೋಡ್ ಗ್ರಾ.ಪಂ.ವ್ಯಾಪ್ತಿಯ ಕೇಶವಪಾಲ ಗೆಳೆಯರ ಬಳಗ ದೀಪಾವಳಿಯ ಹಬ್ಬದ ಪ್ರಯುಕ್ತ ಆಯೋಜಿಸಿದ 10ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಸಹಬಾಳ್ವೆಯ ದ್ಯೋತಕವಾಗಿ ಇಂತಹ ಕಾರ್ಯಕ್ರಮ ಪೂರಕವಾಗಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಮನೊರಂಜನೆಯ ಜೊತೆಜೊತೆಗೆ ಒಗ್ಗಟ್ಟು ಮೂಡಿಸಲಿದೆ. ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಪೊತ್ಸಾಹ ನೀಡಿದರೆ, ಮಾತ್ರ ಈ ವಿಭಾಗದಿಂದ ಸಾಧನೆ ಸಾಧ್ಯವಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು.
ಕರವೇ ಸಂಘಟನೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆ ಪೊತ್ಸಾಹಿಸಿದಾಗ ಮುಂದಿನ ತಲೆಮಾರಿಗೆ ಪರಿಚಯಿಸಬಹುದು. ಇಂತಹ ಕಾರ್ಯಕ್ರಮದ ಆಯೋಜನೆಯ ಸಂಘಟನೆಯ ಕಾರ್ಯ ಪ್ರಶಂಸನಾರ್ಹ ಎಂದರು.
ಪುರಷ ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮ ಜರುಗಿತು.
ಬಿಜೆಪಿ ಮುಖಂಡರಾದ ಎಂ.ಜಿ.ಭಟ್ ಮಾತನಾಡಿ ಜಗತ್ತಿನಲ್ಲಿ ಶೇಷ್ಠ ಭೂಮಿ ಭರತ ಭೂಮಿಯಾಗಿದ್ದು, ದೀಪಾವಳಿ ಗಣೇಶ ಚತುರ್ಥಿಯಂತಹ ಹಬ್ಬಗಳ ಆಚರಣೆಯಿಂದ ದೇಶದಲ್ಲಿ ಎಲ್ಲಾ ಜಾತಿ ಮತಗಳನ್ನು ಒಗ್ಗೂಡಿಸಲಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಬ್ರಿಟಿಷ್ ಪದ್ದತಿಯಂತಿದ್ದು, ಸಂಸ್ಕಾರ ನೀಡುತ್ತಿಲ್ಲ. ಇಂತಹ ಕಾರ್ಯಕ್ರಮದ ಮೂಲಕ ದೇಶಭಕ್ತಿ ಹಾಗೂ ದೇಶಿಯ ಕಲೆಯನ್ನು ಪೊತ್ಸಾಹಿಸಬೇಕಿದೆ ಎಂದರು.
ಜೆ.ಡಿಎಸ್ ಮುಖಂಡ ಸೂರಜ್ ಸೋನಿ ಮಾತನಾಡಿ ಗ್ರಾಮೀಣ ಕ್ರೀಡಾಕೂಟದ ಮೂಲಕ ಹಳ್ಳಿಯ ಮೆರಗು ಹೆಚ್ಚಿಸಬಹುದು. ಗ್ರಾಮೀಣ ಕ್ರೀಡಾಕೂಟದ ಗುಂಪು ಸ್ಪರ್ಧೆಯಿಂದ ಬುದ್ದಿಶಕ್ತಿ, ದೈಹಿಕ ಸಾಮರ್ಥ್ಯ ವೃದ್ದಿಸಿಕೊಳ್ಳಬಹುದು ಎಂದರು.
ವೇದಿಕೆಯಲ್ಲಿ ದಂತವೈದ್ಯ ಡಾ. ಸುರೇಶ ಹೆಗಡೆ, ಗ್ರಾ.ಪಂ.ಉಪಾಧ್ಯಕ್ಷ ಸಚೀನ ನಾಯ್ಕ, ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ, ಕಾಂಗ್ರೇಸ್ ಯುವ ಘಟಕದ ತಾಲೂಕ ಅಧ್ಯಕ್ಷ ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶ್ರೀ ಕರಿಕಾನ ಪರಮೇಶ್ವರಿ ತಂಡ ಪ್ರಥಮ, ಶ್ರೀ ವಿರಾಂಜನೇಯ ತಂಡ ದ್ವೀತಿಯ, ಹಳದೀಪುರ ತಂಡ ತೃತೀಯ ಸ್ಥಾನ ಪಡೆದವು.

error: