May 3, 2024

Bhavana Tv

Its Your Channel

ಎಂ. ಪಿ. ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ

ಹೊನ್ನಾವರ: ಮಕ್ಕಳ ಭವಿಷ್ಯವನ್ನುರೂಪಿಸಲು ಹೊಸಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ, ಪರೀಕ್ಷಾ ಭಯವನ್ನು ಹೋಗಲಾಡಿಸಲು ಮತ್ತು ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆಎAದು ಸಂಸ್ಥೆಯಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿಯವರು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಪಿ.ಇ ಸೊಸೈಟಿಯಕಾರ್ಯನಿರ್ವಾಹಕಅಧಿಕಾರಿ ಶ್ರೀ ಕಿರಣಕುಡ್ತಾರ್‌ಕರ್‌ರವರು ಭಾರತದ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂರವರುದೇಶಕ್ಕೆ ನೀಡಿದಕೊಡುಗೆಯನ್ನು ಸ್ಮರಿಸಿದರು.ವಿದ್ಯಾರ್ಥಿಗಳು ಎಲ್ಲಾ ಸಂಧರ್ಬದಲ್ಲೂ ನಗುಮೊಗದಿಂದ ಕೆಲಸವನ್ನು ಮಾಡಬೇಕು ಹಾಗೂ ಪ್ರತಿ ವಿದ್ಯಾರ್ಥಿಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತನ್ನು ಹೇಳಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ಜವಾಹರ ಲಾಲ್ ನೆಹರುರವರ ಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿ, ದೀಪ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ನಂತರ ವಿದ್ಯಾರ್ಥಿಗಳಿಗೆ ಛದ್ಮವೇಷ, ಜನಪದ ನೃತ್ಯ ಹಾಗೂ ವಿಜ್ಞಾನ ವಸ್ತು ಪ್ರದರ್ಶನದ ಸ್ಫರ್ಧೆಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪಾಲಕರು ಈ ಎಲ್ಲಾಕಾರ್ಯಕ್ರಮದಲ್ಲಿಅತಿಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಎಂ.ಪಿ.ಸೊಸೈಟಿಯ ಕಾರ್ಯದರ್ಶಿ ಶ್ರೀ ಎಸ್.ಎಂ ಭಟ್ಟ, ಜಂಟಿ ಕಾಯದರ್ಶಿ ಶ್ರೀ ಜಿ.ಪಿ. ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್ಟ ವೇದಿಕೆಯ ಮೇಲೆ ಹಾಜರಿದ್ದರು.ಐದನೇಯತರಗತಿಯ ವಿದ್ಯಾರ್ಥಿಆತ್ರೇಯ ಭಟ್ಟ ಪ್ರಾರ್ಥಿಸಿ, ಶ್ರೀಮತಿ ರೂಪಾರೊಡ್ರಗೀಸ್ ಸ್ವಾಗತಿಸಿದರು.ಶ್ರೀಮತಿ ತಾರಾಶ್ರೀ ಹೆಗಡೆ ವಂದಿಸಿದರು, ಶ್ರೀಮತಿ ವಿಜಯಲಕ್ಷಿö್ಮÃ ನಾಯ್ಕಕಾರ್ಯಕ್ರಮ ನಿರೂಪಿಸಿದರು.

error: