May 2, 2024

Bhavana Tv

Its Your Channel

ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ’ ಮಂಕಿಯಲ್ಲಿ ವಿಜ್ಞಾನ ಪ್ರದರ್ಶನ

ಹೊನ್ನಾವರ:- ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆ’ ಮಂಕಿಯಲ್ಲಿ ವಿಜ್ಞಾನ ಪ್ರದರ್ಶನ, ಪೋಷಕರ ಕ್ರೀಡಾಕೂಟ ಹಾಗೂ ಮಕ್ಕಳ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿರುವವರಿಗೆ ಬಹುಮಾನ ವಿತರಣೆ

ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ಪ್ರದರ್ಶನವನ್ನು ಪುಟಾಣಿ ಮಕ್ಕಳು ಬಹು ಚೆನ್ನಾಗಿ ನಡೆಸಿಕೊಟ್ಟರು. ಓಝೋನ್ ಪದರದ ಸವಕಳಿ, ವಿಂಡ್ ಮಿಲ್ ವಿದ್ಯುತ್ ಉತ್ಪಾದನೆ, ಸ್ವಯಂ ಚಾಲಿತ ಬೀದಿ ದೀಪಗಳು, ಭೂಮಿಯ ಭ್ರಮಣೆ ಮತ್ತು ಪರಿಭ್ರಮಣೆ, ಸುರಕ್ಷಿತ ಸಾರಿಗೆ ಮಾರ್ಗ, 3-ಆ ಹೊಲೊಗ್ರಾಮ್ ಮಾದರಿ, ಹೈಡ್ರಾಲಿಕ್ ಕ್ರೇನ್, ಬಾಹ್ಯಾಕಾಶ ನೌಕೆ, ಮಾನವನ ಜೀರ್ಣಾಂಗ ವ್ಯವಸ್ಥೆ, ಮಾನವನ ಹೃದಯದಲ್ಲಿ ರಕ್ತ ಸಂಚಾರ, ಕಿಡ್ನಿಯ ಕಾರ್ಯದ ಮಾದರಿ ಮುಂತಾದ 11 ಮಾಡೆಲ್ ಗಳನ್ನು ಮಕ್ಕಳು ಶಿಕ್ಷಕರ ಸಹಾಯದೊಂದಿಗೆ ಮಾಡಿದ್ದಲ್ಲದೆ ಬಹು ಚೆನ್ನಾಗಿ ವಿವರಣೆಯನ್ನು ನೀಡಿದ್ದು ಬಹಳ ವಿಶೇಷವಾಗಿತ್ತು.
ತಮ್ಮ ವಯಸ್ಸಿಗೆ ಮೀರಿದ ವಿಜ್ಞಾನದ ಪರಿಕಲ್ಪನೆಗಳನ್ನು ಆಯ್ಕೆ ಮಾಡಿಕೊಂಡು ಬಂದAತಹ ನೂರಾರು ಪೋಷಕರಿಗೆ ವಿವರಣೆಗಳನ್ನು ಧೈರ್ಯದಿಂದ ನೀಡಿದ್ದು ವಿಶೇಷವಾಗಿತ್ತು. ಮಕ್ಕಳ ಈ ಪ್ರತಿಭೆಗೆ ಪೋಷಕರಿಂದ ಬಹಳ ಪ್ರಶಂಸೆ ವ್ಯಕ್ತವಾಯಿತು. ನಂತರ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪೋಷಕರ ಕ್ರೀಡಾಕೂಟವು ಈ ಬಾರಿ ಗೋಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದಿದ್ದು,ಸ್ಪರ್ಧೆಯಲ್ಲಿ ವಿಜೇತರಾದ ಪೋಷಕರಿಗೆ ಬಹುಮಾನಗಳನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸವಿತಾ ದೇವಾಡಿಗ ರೇಂಜರ್ ಆಫೀಸರ್, ಉಷಾ ಹಾಸ್ಯಗಾರ್, ತಾಲೂಕು ವೈದ್ಯಾಧಿಕಾರಿ ಇವರುಗಳು ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಶ್ರೀಯುತ ಎ.ಆರ್.ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ನಿರ್ದೇಶಕರಾದ ಶ್ರೀಮತಿ ದೀಪಾ ರಾವ್ ಹಾಗೂ ಪ್ರಾಂಶುಪಾಲರಾದ ರಮೇಶ್ ಯರಗಟ್ಟಿಯವರು ಉಪಸ್ಥಿತರಿದ್ದರು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಒತ್ತುಕೊಟ್ಟು ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ ಪ್ರದರ್ಶನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಗೋಲ್ ಶಾಲೆಯ ಆಡಳಿತ ಮಂಡಳಿಯ ವಿವಿಧ ಪ್ರಯತ್ನಗಳಿಗೆ ಪೋಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಳೆ ಫೆಬ್ರವರಿ 2 ರಂದು ಸಂಜೆ 6 ಗಂಟೆಗೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು ‘ಭೂತಾಯಿ ಉಳಿಸಿ’ ಎಂಬ ವಿಶೇಷ ಪರಿಕಲ್ಪನೆ ಅಡಿಯಲ್ಲಿ 615ಕ್ಕೂ ಹೆಚ್ಚು ಮಕ್ಕಳು ಸಾಂಸ್ಕೃತಿಕ ರಸದೌತಣ ನೀಡಲಿದ್ದಾರೆ. ಯಾವುದೇ ಸಿನಿಮಾ ಹಾಡುಗಳ ಅಬ್ಬರವಿಲ್ಲದೆ ಕಾಂಟೆAಪರರಿ, ಭರತನಾಟ್ಯ,ಲಘು ಶಾಸ್ತ್ರೀಯ ಹಾಗೂ ಜಾನಪದ ನೃತ್ಯ ಪ್ರಕಾರಗಳನ್ನು ಮಕ್ಕಳು ಪ್ರಸ್ತುತಪಡಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಎಲ್ಲರನ್ನೂ ತುಂಬು ಹೃದಯದಿಂದ ಆಹ್ವಾನಿಸಲಾಗಿದೆ.

error: