May 16, 2024

Bhavana Tv

Its Your Channel

ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ವತಿಯಿಂದ ದಿ. ಸಂಜೀವ ಕಾಮತ್ ಅವರಿಗೆ ನುಡಿನಮನ ಕಾರ್ಯಕ್ರಮ

ಹೊನ್ನಾವರ: ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ವತಿಯಿಂದ ಅಗಲಿದ ನಮ್ಮ ಸಂಘಟನೆಯ ಸಂಘಟನಾ ಕಾರ್ಯಾಧ್ಯಕ್ಷರು ಆದ ದಿ. ಶ್ರೀ ಸಂಜೀವ ಕಾಮತ್ ಅವರಿಗೆ ನುಡಿನಮನ ಶ್ರದ್ಧಾಂಜಲಿ ಸಭೆಯನ್ನು ಹೊನ್ನಾವರದ ನಾಮಧಾರಿ ಸಮಾಜದ ಸಭಾಭವನದಲ್ಲಿ ನಡೆಸಲಾಯಿತು

ಈ ಸಂದರ್ಭದಲ್ಲಿ ಅವರ ಪೋಟೋ ಗೆ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಲಾಯಿತು.ಈ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಸಮಸ್ತ ಅಬಿಮಾನ ಬಳಗದವರು ಆಗಮಿಸಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಅಗಲಿದ ಸಂಜಯ್ ಕಾಮತ್ ಇವರ ಬಾಲ್ಯದ ನೆನಪುಗಳು ಅವರ ಜೀವನದ ಕಷ್ಟ ಸುಖಗಳು ಅವರು ಸಾರ್ವಜನಿಕವಾಗಿ ಎಷ್ಟು ಜನಪ್ರಿಯತೆಗೆ ಸಾಕ್ಷಿಯಾಗಿ ಹೊನ್ನಾವರ ತಾಲೂಕಿನ ಸಾರ್ವಜನಿಕರ ಪ್ರೀತಿ ಪಾತ್ರಗಳಿಗೆ ಕಾರಣರಾಗಿ ಯಾವತ್ತು ಪ್ರಾಮಾಣಿಕ ಶುದ್ಧ ಮನಸ್ಸಿನಿಂದ ಕಷ್ಟ ಎಂದು ಬರುವ ಪ್ರತಿಯೊಬ್ಬ ಸಾಮಾನ್ಯ ಜನರೊಂದಿಗೆ ಬೆರೆತು ಉಚಿತ ಸೇವೆಯನ್ನು ನೀಡಿ ಮುಂದಿನ ದಿನಗಳಲ್ಲಿ ನಾನು ಕಂಡ ಹೊನ್ನಾವರ ಒಂದು ಗುರಿಯತ್ತ ಸಾಗಬೇಕು ಎಂಬ ಆಶಯದೊಂದಿಗೆ ಸಂಘಟನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮ ಅನಾರೋಗ್ಯದ ಸಂದರ್ಭದಲ್ಲಿ ಭಾಗವಹಿಸಿ ನಮ್ಮ ಹೊನ್ನಾವರ ಒಂದು ಗುರಿಯತ್ತ ಸಾಗಬೇಕು ಎಂದು ಅಚಲ ವಿಶ್ವಾಸದಲ್ಲಿ ಹೊನ್ನಾವರದ ಸಾಗರ್ ರೆಸಿಡೆನ್ಸಿ ಯಲ್ಲಿ ಒಂದು ಅದ್ಬುತ ಸಮಾಲೋಚನೆ ಸಭೆಯನ್ನು ನಡೆಸಿ ಹೊನ್ನಾವರದ ಪ್ರಖ್ಯಾತ ವೈದ್ಯರುಗಳು, ಕಾನೂನು ಪಂಡಿತರನ್ನು ಪತ್ರಿಕೆಯ ಹಿರಿಯನ್ನು ಗೌರವಾನ್ವಿತ ಹೊನ್ನಾವರದ ಪ್ರಮುಖರನ್ನು ಆಹ್ವಾನಿಸಿ ಹೊನ್ನಾವರ ಒಂದು ದಿಶೆಯಲ್ಲಿ ಬೆಳಗಬೇಕು ಎಂಬ ಆಶಯದೊಂದಿಗೆ ಕಾರ್ಯ ಕ್ರಮದ ಜವಾಬ್ದಾರಿ ಹೊತ್ತ ಸಂಜೀವ ಕಾಮತ್ ಇಲ್ಲದೆ ಇರುವುದು ಹೊನ್ನಾವರ ಬಡವಾಯಿತು.ಅವರು ಇಟ್ಟ ಈ ಆಸೆಯನ್ನು ನಾವೆಲ್ಲರು ಮುನ್ನೆಂಡಿಸಿಕೊAಡು ಹೋಗುವ ಅವರು ನಮ್ಮ ಜೋತೆಯಲ್ಲಿ ಇಲ್ಲದೆ ಇರಬಹುದು ಅವರ ಆತ್ಮ ಯಾವತ್ತು ಈ ಹೊನ್ನಾವರ ಬೆಳವಣಿಗೆಗೆ ಇದೆ ಮನದಾಳದ ನುಡಿಮಾತುಗಳನ್ನ ಆಡಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜಿ ಎನ್ ಗೌಡರು ಸಂಜು ಕಾಮತರಿಗಿದ್ದ ಹೊನ್ನಾವರದ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಕಾಳಜಿ ಬದ್ಧತೆ ಎಲ್ಲ ಸಮಾಜ ಎಲ್ಲ ಧರ್ಮಗಳಜನರ ಜೊತೆ ಆತ್ಮೀಯತೆ ಹಾಗೂ ನಮ್ಮ ಸಂಘಟನೆಯ ಬೆನ್ನೆಲುಬಾಗಿ ಸಹಕರಿಸಿದನ್ನು ಸ್ಮರಿಸಿದರು ಅವರ ಆದರ್ಶಗಳನ್ನು ಇಟ್ಟುಕೊಂಡು ನಾವು ಸಂಘಟನೆಯನ್ನು ಕಟ್ಟುತ್ತೇವೆ ಅವರನ್ನು ಕಳೆದುಕೊಂಡ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಅವರ ಕುಟುಂಬದವರ ಜೊತೆ ಸದಾ ನಾವು ಇದ್ದೇವೆ ಎಂದರು

ಡಾ ಪ್ರಕಾಶ್ ನಾಯ್ಕ, ಡಾ. ರಾಜೇಶ್ ಕಿಣಿ ಅವರು ಮಾತನಾಡಿ ಅವರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕವಾಗಿ ನಾವೆಲ್ಲರು ಸಹಾಯ ಮಾಡಬೇಕಾದ ಅನಿವಾರ್ಯತೆ ಇದೆ ಅದಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನಾವೇಲ್ಲರು ಸೇರಿ ನೀಡೋಣ , ಅವರ ಮಕ್ಕಳು ಸಹ ತಂದೆಯoತೆ ನ್ಯಾಯವಾದಿ ಯಾಗಿ ಬಡವರ ಆಶಾಕಿರಣ ಆಗಿ ಮುಂದಿನ ದಿನಗಳಲ್ಲಿ ಬೆಳೆಯಲಿ ಎಂದರು

ಈ ಸಂದರ್ಭದಲ್ಲಿ ಹೊನ್ನಾವರದ ಖ್ಯಾತ ವೈದ್ಯರುಗಳಾದ ರಾಜೇಶ್ ಕಿಣಿ, ಪ್ರಕಾಶ್ ನಾಯ್ಕ, ರಂಗನಾಥ್ ಪೂಜಾರಿ.ಸಂಘಟನೆಯ ಗೌರವ ಅಧ್ಯಕ್ಷರಾದ ಜೆ ಟಿ ಪೈ, ಸಂಘಟನೆಯ ಸಲಹೆಗಾರರಾದ ಮಹೇಶ ಕಲ್ಯಾಣಪುರ, ಎಸ್ ಡಿ ಹೆಗಡೆ, ಶ್ರೀಪಾದ ಶೆಟ್ಟಿ, ಕೃಷ್ಣಮೂರ್ತಿ ಹೆಬ್ಬಾರ, ಸಂಘಟನೆಯ ಅಧ್ಯಕ್ಷರಾದ ಜಿ ಎನ್ ಗೌಡ, ಸಂಘಟನೆಯ ಪ್ರಮುಖ ಪದಾಧಿಕಾರಿಗಳಾದ ಎಸ್ ಜಿ ಹೆಗಡೆ, ಶ್ರೀಕಾಂತ ನಾಯ್ಕ, ಪ್ರಭಾಕರ ಪಟಗಾರ, ಜಗದೀಶ್ ನಾಯ್ಕ, ವಕೀಲಎನ್ ಎಸ್ ಭಟ್ , ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವರಾಜ್ ಮೇಸ್ತ, ರಾಘವೇಂದ್ರ ನಾಯ್ಕ, ರಾಘು ಮೇಸ್ತ, ಎಸ್ ಕೆ ಮೇಸ್ತ, ಗಿರೀಶ್ ರಾಯ್ಕರ್, ಅಣ್ಣಪ್ಪ ನಾಯ್ಕ, ಆರ್ ಎಸ್ ಕಾಮತ್, ಮುಜಾಫರ್, ರವಿ ಹೆಗಡೆ, ನಾಗರಾಜ ನಾಯ್ಕ, ರಘು ಪೈ ,ಚಂದನ ಪ್ರಭು , ದೀಪಕ ಪ್ರಭು ಶ್ರೀ ಆರ್ ಎಸ್ ಕಾಮತ್ ಮಂಜುನಾಥ್ ಗೌಡ ಕರವೇ ಇತರ ಗಣ್ಯರು ಉಪಸ್ಥಿತರಿದ್ದರು.
ಶ್ರದ್ಧಾಂಜಲಿ ಸಭೆಯಲ್ಲಿ 2 ನಿಮಿಷಗಳ ಮೌನಾಚರಣೆ ಮಾಡಿದರು.ಶ್ರೀ ದಿನೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು

error: