April 30, 2024

Bhavana Tv

Its Your Channel

ಕವಲಕ್ಕಿಯ ಸುಬ್ರಹ್ಮಣ್ಯ ಪ.ಪೂ ಕಾಲೇಜಿನಲ್ಲಿ ನಡೆದ ವೈದ್ಯಕೀಯ ತಪಾಸಣಾ ಶಿಬಿರ

ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಪ.ಪೂ ಕಾಲೇಜಿನಲ್ಲಿ ಶ್ರೀಕುಮಾರ ಸಾರಿಗೆ ಸಂಸ್ಥೆಯ ಸೇವಾ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಸಂಸ್ಥೆಯ ವತಿಯಿಂದ ಕಸ್ತೂರ್ಬಾ ಆಸ್ಪತ್ರೆಯ ಮಣಿಪಾಲ ಇವರಿಂದ ವೈದ್ಯಕೀಯ ತಪಾಸಣಾ ಶಿಬಿರ ಜರುಗಿತು.

      ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ತಾವು ಬೆಳೆದ ಹಾಗೇ ಸಮಾಜ ಬೆಳೆಯಲು ಹಲವು ಸಮಾಜಮುಖಿ ಕಾರ್ಯವನ್ನು ಶ್ರೀಕುಮಾರ ಸಂಸ್ಥೆ  ಆಯೋಜಿಸುತ್ತಿದೆ. ಮಣಿಪಾಲ ಕೆ.ಎಂ.ಸಿ. ನೇತ್ರತ್ವದಲ್ಲಿ ಪ್ರಸಿದ್ದ ವೈದ್ಯರು ಆಗಮಿಸಿ ತಪಾಸಣೆ ನಡೆಸುತ್ತಿದ್ದಾರೆ. ನರರೋಗದ ಸಮಸ್ಯೆ ಇದ್ದಲ್ಲಿ ಇಂತಹ ತಪಾಸಣೆಯಿಂದ ಬಹು ಉಪಯೋಗವಾಗಲಿದೆ. ಸಾರ್ವಜನಿಕರು ಇಂತಹ ಶಿಬಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.
    ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ವಾಸಂತಿ ಅಮೀನ್ ಮಾತನಾಡಿ  ಯೋಜನೆಯು ಹಲವು ಕಾರ್ಯಕ್ರಮ ಆಯೋಜಿಸಿತ್ತಾ ಬಂದಿದ್ದು, ಜ್ಞಾನವಿಕಾಸ ಘಟಕದ ವತಿಯಿಂದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಾಗಿದೆ. ಇಂದಿನ ದಿನಮಾನದಲ್ಲಿ ವೈದ್ಯಕೀಯ ಸೌಲಭ್ಯ ಸುಲಭವಾಗಿಲ್ಲ. ಆದರೆ ನುರಿತ ವೈದ್ಯರ ಜೊತೆ ಉಚಿತ ಬಸ್ ಸೇವೆ ಮೂಲಕ ಶಿಬಿರದ ಕರೆ ತರುವ ಕಾರ್ಯ ನಡೆದಿರುವುದು ವಿಶೇಷತೆಯಿಂದ ಕೂಡಿದೆ ಎಂದರು.

ವಕಸ್ತೂರ್ಬಾ ಆಸ್ಪತ್ರೆಯ ಅಸಿಸ್ಟಂಟ್ ಪ್ರೋಪೇಸರ್ ಡಾ. ನಿಶಾ ಶೇಣೈ ಶಿಬಿರದಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಬಿರದ ಆಯೋಜಕರಾದ ವೆಂಕ್ರಟಮಣ ಹೆಗಡೆ ಮಾತನಾಡಿ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಜೊತೆ ಈ ಭಾಗದವರಿಗೆ ಅನೂಕೂಲವಾಗಲಿ ಎಂದು ಈ ಶಿಬಿರ ಆಯೋಜಿಸುವ ಮೂಲಕ ಯಶ್ವಸಿಯಾಗಿದೆ. ಶಿಬಿರ ಯಶ್ವಸಿಯಾಗಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.
ವೇದಿಕೆಯಲ್ಲಿ ಮಣೆಪಾಲ ಆಸ್ಪತ್ರೆಯ ವೈದ್ಯರಾದ ಡಾ. ಸಂದೀಪ, ಸೂರ್ಯನಾರಾಯಣ ಹೆಗಡೆ, ಶಂಭು ಸಂತನ್ ಕಾಲೇಜಿನ ಪ್ರಾಚಾರ್ಯ ವಿ.ಆಯ್.ನಾಯ್ಕ, ಉಪಸ್ಥಿತರಿದ್ದರು.
11 ವಿಭಾಗದ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರತಿಯೊರ್ವರಿಗೂ ಬಿ.ಪಿ.ಶುಗರ್ ತಪಾಸಣೆ ಕಾರ್ಯ ಜರುಗಿತು. ತಾಲೂಕಿನ ವಿವಿಧಡೆಯಿಂದ ಅಪಾರ ಸಂಖ್ಯೆಯ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.

error: