May 18, 2024

Bhavana Tv

Its Your Channel

ಜನತಾ ವಿದ್ಯಾಲಯ ಕಡತೋಕಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಹೊನ್ನಾವರ: ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು, ಜಿಲ್ಲಾಡಳಿತ & ಜಿಲ್ಲಾ ಪಂಚಾಯತ, ಮೈಸೂರು ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮೈಸೂರು ದೈಹಿಕ ಶಿಕ್ಷಣ ವಿಭಾಗ ಇವರ ಸಹಯೋಗದಲ್ಲಿ ದಿನಾಂಕ: 19/02/2023 ರಿಂದ 22/02/2023 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ನಜರ್‌ಬಾದ್, ಮೈಸೂರಿನಲ್ಲಿ ನಡೆಯುವ 2022-23 ನೇ ಸಾಲಿನ ರಾಜ್ಯ ಮಟ್ಟದ 14 & 17 ವರ್ಷದೊಳಗಿನ ಶಾಲಾ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜನತಾ ವಿದ್ಯಾಲಯ ಕಡತೋಕದ ವಿದ್ಯಾರ್ಥಿಗಳಾದ. ಕುಮಾರ, ಕಾರ್ತಿಕ ಎಚ್. ಗೌಡ 100 ಮೀ. ಓಟ, ಲೋಕೇಶ ಎಸ್. ಗೌಡ 110 ಮೀ. ಹರ್ಡಲ್ಸ್, ಧರ್ಮೇಂದ್ರ ಎಸ್. ಗೌಡ ತ್ರಿವಿಧ ಜಿಗಿತ, ಕುಮಾರಿ, ದಿವ್ಯಾ ಎಮ್. ಗೌಡ 100 ಮೀ. ಹರ್ಡಲ್ಸ್, ಶೃತಿಕಾ ಡಿ. ಮುಕ್ರಿ 600 ಮೀ. ಓಟದಲ್ಲಿ ಭಾಗವಹಿಸುವ ಅರ್ಹತೆ ಪಡೆದು, 5 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಾಲೂಕು & ಜಿಲ್ಲೆಯ ಪ್ರೌಢಶಾಲೆ ಎಂಬ ಹಿರಿಮೆಗೆ ಪಾತ್ರವಾಗಿ. ವಿದ್ಯಾರ್ಥಿಗಳು ಸಂಸ್ಥೆ, ಶಾಲೆಯ, ಊರಿನ, ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸ್ಪೆöÊಕ್ ವಿತರಿಸಿದ ಪೂರ್ವ ವಿದ್ಯಾರ್ಥಿಗಳಾದ ಕೆ. ಅರುಣಕುಮಾರ & ಸಂಗಡಿಗರು ಆರ್ಥಿಕ ಸಹಾಯ ಮಾಡಿದ ವ್ಯವಸಾಯ ಸೇವಾ ಸಹಕಾರಿ ಸಂಘ (ರಿ) ಕಡತೋಕಾ, ಗ್ರಾಮ ಪಂಚಾಯತ ಕಡತೋಕಾ, ಗ್ರಾಮ ಪಂಚಾಯತ ನವಿಲಗೋಣ ಹಾಗೂ ಟ್ರಾö್ಯಕ್ ಶೂಟ್ & ಶೂ ವಿತರಿಸಿದ ಶಿಕ್ಷಣ ಇಲಾಖೆಯನ್ನು ವಿದ್ಯಾಲಯ ಅಭಿನಂದಿಸಿದೆ..

ಈ ವಿದ್ಯಾರ್ಥಿ/ನಿಯರನ್ನು ನಮ್ಮ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಟ್ರಸ್ಟಿಗಳು, ಶಾಲಾಭಿವೃಧ್ಧಿ ಸಮಿತಿಯವರು, ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಪ್ರಾಚಾರ್ಯರು, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಪೂರ್ವ ವಿದ್ಯಾರ್ಥಿಗಳು, ಹಾಗೂ ಊರ ನಾಗರಿಕರು, ಕ್ರೀಡಾಪಟುಗಳನ್ನು ಅಭಿನಂದಿಸಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಶುಭ ಹಾರೈಸಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೃಷ್ಣ ಆರ್. ಗೌಡ ಇವರು ತರಬೇತಿಯನ್ನು ನೀಡಿರುತ್ತಾರೆ.

error: