September 16, 2024

Bhavana Tv

Its Your Channel

ಕಡತೋಕಾದಲ್ಲಿ ನಡೆದ ನಮ್ ಹಬ್ಬ

ಹೊನ್ನಾವರ ತಾಲ್ಲೂಕಿನ ಕಡತೋಕಾದಲ್ಲಿ ನಮ್ ಹಬ್ಬ ಹೆಸರಿನಲ್ಲಿ ತಮ್ಮ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಸೇರಿಸಿ ಪುಟಾಣಿಗಳ ಕಲರವ ದೊಡ್ಡೋರ್ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಸಾಮರಸ್ಯ, ಸಹಬಾಳ್ವೆ ಮರೆತು ಕೂತ ಕಾಲದಲ್ಲಿ ಹೃದಯ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು. ತಾನು ತನ್ನವರು ಎಂಬ ಪ್ರೀತಿ ಬಿತ್ತಬೇಕು ಎಂಬ ಸದಾಶಯದೊಂದಿಗೆ ತಾಲ್ಲೂಕಿನ ಕಡತೋಕಾದಲ್ಲಿ ನಮ್ ಹಬ್ಬ ಹೆಸರಿನ ವಿನೂತನ ಕಾರ್ಯಕ್ರಮ ನಡೆಯಿತು.
ಪುಟಾಣಿಗಳ ಕಲರವ ದೊಡ್ಡೋರ್ ಸಂಭ್ರಮ ಎಂಬoತೆ ಅಂಗನವಾಡಿ ವಿದ್ಯಾರ್ಥಿಗಳಿಂದ ಆರಂಭಗೊAಡು ಅರವತ್ತರ ವರೆಗಿನ ಎಲ್ಲರೂ ಸಂತಸದಿAದ ಪಾಲ್ಗೊಂಡರು. ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಹಾಗೂ ಪುರುಷರು ಮತ್ತು ಮಹಿಳೆಯರಿಗಾಗಿ ಭಿನ್ನ ಭಿನ್ನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಾಗೂ ಭಾಗವಹಿದವರನ್ನು ಪ್ರೋತ್ಸಾಹಿಸುವ ಸಲುವಾಗಿ ಬಹುಮಾನ ವಿತರಣೆ ಕೂಡ ನಡೆಯಿತು.
ನಂತರ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಪುಟಾಣಿಗಳ ನೃತ್ಯ ಹಾಡು ಮನಸೂರೆಗೊಂಡಿತು.

error: