May 11, 2024

Bhavana Tv

Its Your Channel

ಹೊನ್ನಾವರ ಹೆಸ್ಕಾಂ ಉಪವಿಭಾಗದಲ್ಲಿ ನಡೆದ ಗೇಟ್ ಮೀಟಿಂಗ್

ಹೊನ್ನಾವರ:- ಕ.ವಿ.ಪ್ರ ನಿ. ನೌಕರ ಸಂಘ 659 ಮತ್ತು ಸಂಸ್ಥೆಗಳ ಒಕ್ಕೂಟದ ವತಿಯಿಂದ ನಡೆದ ಗೇಟ್ ಮೀಟಿಂಗ್. ದಿ.1-4-2022 ರಿಂದ ನೌಕರರ ವೇತನ ಪರಿಸ್ಕರಿಸಬೇಕಿದ್ದ ಸರಕಾರ ನೌಕರರ ಬೇಡಿಕೆಗೆ ಸ್ಪಂದಿಸದೇ ಇರುವದರಿಂದ ಕೇಂದ್ರ ಸಮೀತಿಯ ಸೂಚನೆ ಮೇರೆಗೆ ದಿ.16-3-2023 ರಿಂದ ಸಾಮೂಹಿಕವಾಗಿ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಗೈರು – ಹಾಜರಾಗುವುದರೊಂದಿಗೆ ಅನಿರ್ದಿಸ್ಟಾವಧಿ ಮುಷ್ಕರ ನಡೆಸಲು ಹೊನ್ನಾವರ ವಿಭಾಗೀಯ ಸ್ಥಳೀಯ ಸಮೀತಿ ಕರೆ ಮೇರೆಗೆ ಎಲ್ಲ ಅಧಿಕಾರಿ, ನೌಕರರು ಮತ್ತು ಪಿಂಚಣಿದಾರರು ಗೇಟ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.
ವಿದ್ಯುತ್ ಗ್ರಾಹಕರಿಗೆ ತೊಂದರೆಯಾಗದoತೆ ಎಲ್ಲ ನೌಕರರು ಸಹಕರಿಸಿ ಮುಷ್ಕರದಲ್ಲಿ ಪಾಲ್ಗೊಳು ವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕನಾಥ್. ಸಿ.ತಿಳಿಸಿದರು, ಸ್ಥಳೀಯ ಸಮಿತಿ ಅಧ್ಯಕ್ಷರಾದ ಗಜಾನನ ನಾಯ್ಕ್ ಮಾತನಾಡಿ ಸರಕಾರ ಕೊಟ್ಟ ಮಾತಿನಂತೆ ವೇತನ ಪರಿಸ್ಕರಣೆ ಆಗದೇ ಇರುವದರಿಂದ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಿದ್ದು ಎಲ್ಲರೂ ಸಹಕರಿಸುವಂತೆ ತಿಳಿಸಿದರು. ಪಿಂಚಣಿದಾರರ ಸಂಘದ ಸಿ ಇ ಸಿ. ಡಿ ಡಿ ಮಡಿವಾಳ ಮಾತನಾಡಿ ನೌಕರರ ಸಂಘದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸ ಕಾ ನಿ ಇಂಜಿನಿಯರ್ ರಾದ ರಾಮಕೃಷ್ಣ ಭಟ್, ವಿನೋದ ಭಾಗ್ವತ್, ಶಂಕರ್ ಗೌಡ, ನಿರಂಜನ್, ಸತೀಶ್ ಮಾಜಿ ಸಿ ಇ ಸಿ ಅಂತೋನಿ ಮಾತನಾಡಿದರು.
ಲೆಕ್ಕಧಿಕಾರಿಗಳಾದ ನಾಗರಾಜ್ ನಾಯಕ್, ಸೋಮಶೇಖರ್ ಶೆಟ್ಟಿ, ಮಂಜುನಾಥ ಹೆಗ್ಡೆ,ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ನೌಕರರು, ಪಿಂಚಣಿದಾರರು ಹಾಜರಿದ್ದರು.

error: