
ಹೊನ್ನಾವರ:- ದಿನಾಂಕ 14/03/2023ರಂದು ರೋಟರಿ ಕ್ಲಬ್ ಹೊನ್ನಾವರ ಮತ್ತು ಕೆನರಾ ಬ್ಯಾಂಕ ಸಹಭಾಗಿತ್ವದಲ್ಲಿ “ರೋಟರಿ ಆಟೋ ಎಕ್ಸ್ಪೋ 2023” ವಾಹನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಇಂದು ಪಟ್ಟಣದ ಶರಾವತಿ ಸರ್ಕಲ್ ಬಳಿ ಮಾರ್ಥೋಮಾ ಮಾಲ್ ಆವರಣದಲ್ಲಿ ವಿದ್ಯುಕ್ತವಾಗಿ ಚಾಲನೆಗೋಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಉದ್ಗಾಟಕರಾಗಿ ಕೆನರಾ ಬ್ಯಾಂಕ ರಿಜನಲ್ ಆಫಿಸರ ನಂದಕಿಶೋರ ಕಾಸ್ಕರ್ , ಮುಖ್ಯ ಅತಿಥಿಗಳಾಗಿ ಪೋಲಿಸ್ ಇನ್ಸ್ಪೆಕ್ಟರ್ ಮಂಜುನಾಥ ಇ.ಓ, ರೋ. ಇ ಆರ್ ಅನಂತಮೂರ್ತಿ ಶಾಸ್ತ್ರಿ (ಅಸ್ಸಿಸ್ಟಂಟ್ ಗವರ್ನರ್ ರೋಟರಿ 3170) ಲಾಯನ್ಸ ಕ್ಲಬ್ ಅಧ್ಯಕ್ಷರು ಲಾಯನ್ ಕೆ.ಸಿ. ವರ್ಗೀಸ್ ಆಗಮಿಸಿದ್ದರು.
ಇಂದಿನಿAದ ಎರಡು ದಿನಗಳ ಕಾಲ ನಡೆಯುವ ವಾಹನ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಪ್ರತಿಷ್ಟಿತ ಕಾರು ಬ್ರಾಂಡಗಳಾದ ಹ್ಯೂಂಡಯ್, ಹೊಂಡಾ, ರೆನೋ, ಟಾಟಾ, ಕಿಯಾ, ಟೋಯೊಟಾ, ಮಾರುತಿ ಸುಜುಕಿ, ನೆಕ್ಸಾ ಕಂಪನಿಗಳ ವಾಹನಗಳು ಪ್ರದರ್ಶನಗೊಳ್ಳಲಿದೆ. ಇನ್ನು ಪ್ರಸಿದ್ದ ದ್ವಿಚಕ್ರ ವಾಹನ ಕಂಪನಿಗಳಾದ ಹೊಂಡಾ, ಟಿವಿಎಸ್ ಮತ್ತು ಇವಿ ವಿಭಾಗದಲ್ಲಿ ಎಥರ್, ಎಂಪಿಯರ್, ಪ್ಯೂರ್ ಹಾಗೂ ಇಲೆಕ್ಟಿçಕ್ ಸೈಕಲ್‌ಗಳು
ಪ್ರದರ್ಶನಗೊಳ್ಳಲಿವೆ.
ಕೆನರಾ ಬ್ಯಾಂಕ ರಿಜನಲ್ ಆಫಿಸರ ನಂದಕಿಶೋರ ಕಾಸ್ಕರ್ ರವರು ಮಾತನಾಡಿ ದೇಶದ ಪ್ರತಿಷ್ಠಿತ ವಾಹನಗಳು ಒಂದೆ ಸೂರಿನಡಿಯಲ್ಲಿ ತಮ್ಮ ವಾಹನಗಳನ್ನು ಪ್ರದರ್ಶಿಸಲಿವೆ. ಇನ್ನು ಗ್ರಾಹಕರ ಸರಿಯಾದ ದಾಖಲೆಗಳನ್ನು ಒದಗಿಸಿದ್ದಲ್ಲಿ ಕೆನರಾ ಬ್ಯಾಂಕ ಕೇವಲ 24 ಗಂಟೆಯ ಒಳಗೆ ವಾಹನ ಸಾಲವನ್ನು ಮಂಜೂರಿ ಮಾಡಲಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ರೋಟರಿ ಅಧ್ಯಕ್ಷರಾದ ಮಹೇಶ ಕಲ್ಯಾಣಪುರರವರು ಮಾತನಾಡಿ ಈ ಕಾರ್ಯಕ್ರಮವನ್ನು ಆಯೋಜಿಸಲು ಸಹಕಾರ ನೀಡಿದ ರೋಟರಿ ಸದಸ್ಯರಿಗೆ ಮತ್ತು ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ ಮಾರ್ಥೋಮಾ ಸಂಸ್ಥೆಯ ಖಜಾಂಚಿಗಳಾದ ಕೆ.ಸಿ ವರ್ಗಿಸ್ ರವರಿಗೆ ಧನ್ಯವಾದ ತಿಳಿಸಿದರು. ಇನ್ನು ಕಾರ್ಯಕ್ರಮದಿಂದ ಬರುವ ಹಣವನ್ನು ಹೊನ್ನಾವರದ ಸುತ್ತಮುತ್ತಲಿನ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ ಕ್ಲಾಸ್‌ಗಳನ್ನು ಅಭಿವೃದ್ಧಿ ಪಡಿಸಲು ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ರೋ ದಿನೇಶ ಕಾಮತ ಕಾರ್ಯಕ್ರಮವನ್ನು ನಿರೂಪಿಸಿದರು. ರೋ ಗಿರಿಶ್ ರಾವ್ ವಂದನಾರ್ಪಣೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರೋ. ಗಾಯತ್ರಿ ಗುನಗಾ, ರೋ. ಸ್ಟೀಫನ್ ರೊಡ್ರಗೀಸ್, ರೋ,ಕಮಲಾ ನಾಯ್ಕ, ರೋ. ಡಾ. ಆಶಿಕ್ ಹೆಗ್ಡೆ, ರೋ. ನಾರಾಯಣ ಯಾಜಿ, ರೋ. ದೀಪಕ ಲೋಪಿಸ್, ರೋ.ಎಸ್ ಎನ್, ಹೆಗ್ಡೆ, ರೋ, ಗಜಾನನ್ ಹೆಗ್ಡೆ, ರೋ. ಗಣೆಶ ಹೆಬ್ಬಾರ, ರೋ. ಶ್ರೀಕಾಂತ ನಾಯ್ಕ, ರೋ, ರಂಗನಾಥ ಪುಜಾರಿ, ರೋ.ಡಿ.ಜೆ. ನಾಯ್ಕ, ರೋ.ಸತೀಶ ಭಟ್ ಉಪಸ್ಥಿತರಿದ್ದರು.

More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ