September 16, 2024

Bhavana Tv

Its Your Channel

ಹೆಸ್ಕಾಂನಿoದ ವಿದ್ಯುತ್ ಸುರಕ್ಷತೆ ಹಾಗೂ ಜಾಗೃತಿ ಅಭಿಯಾನ

ಹೊನ್ನಾವರ ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಹೆಸ್ಕಾಂ ಉಪವಿಭಾಗದಿಂದ ಅಯೋಜಿಸಿರುವ ಕಾರ್ಯಕ್ರಮಗಳಲ್ಲಿ ವಿದ್ಯುತ್ ಗ್ರಾಹಕರಿಗೆ ವಿದ್ಯುತ್ ಸುರಕ್ಷತೆ ಮತ್ತು ಜಾಗೃತಿ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮದ ಆಯೋಜಕರಾದ ಸ.ಕಾ.ನಿ.ಇಂಜಿನಿಯರ್ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಸಿಬ್ಬಂದಿಗಳಿಗೆ ವಿದ್ಯುತ್ ಅಪಘಾತ ಸಂಭವಿಸದoತೆ ಸುರಕ್ಷತೆ ವಹಿಸುವಂತೆ ತಿಳಿಸಿದರು.
ಉಪನ್ಯಾಸಕರಾಗಿ ಬಂದ ಸಹಾಯಕ ಇಂಜಿನಿಯರ್ ನಿರಂಜನ್ ಹೆಗ್ಡೆ ಮಾತನಾಡಿ ವಿದ್ಯುತ್ ಉತ್ಪಾದನೆ, ಟ್ರಾನ್ಸಮಿಷನ್ , ಡಿಸ್ಟ್ರಿಬ್ಯೂಷನ್ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಉಪನ್ಯಾಸಕರಾದ ಸಹಾಯಕ ಇಂಜಿನಿಯರ್ ಪ್ರಭಾಕರ್ ಸತ್ತಿ ವಿದ್ಯುತ್ ಬಳಕೆಯ ಸುರಕ್ಷತೆ, ವಿದ್ಯುತ್ ಉಳಿತಾಯದ ಕ್ರಮಗಳು, ಸೌರಶಕ್ತಿ ಬಳಕೆ, ಇ ವಿ ಚಾರ್ಜಿಂಗ್ ಸ್ಟೇಷನ್ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸ. ಕಾ. ಇ. ವಿನೋದ ಭಾಗ್ವತ್, ಲೆಕ್ಕಾಧಿಕಾರಿ ನಾಗರಾಜ್ ನಾಯಕ್, ಸ. ಲೆಕ್ಕಧಿಕಾರಿ ನವ್ಯಶ್ರೀ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್ ವಿ ನಾಯ್ಕ್ ಮಾತನಾಡಿದರು. ಶಾಖಾಧಿಕಾರಿ ಶಂಕರ್ ಗೌಡ ಸ್ವಾಗತಿಸಿದರು, ಸತೀಶ್ ನಾಯ್ಕ್ ಪ್ರಾರ್ಥಿಸಿದರು. ಗ್ರಾಹಕರ ಪರವಾಗಿ ಮಾಜಿ ಲಯನ್ಸ ಅಧ್ಯಕ್ಷ ಡಿ ಡಿ ಮಡಿವಾಳ ಮತ್ತು ಗುತ್ತಿಗೆದಾರರ ಸಂಘದ ಎಸ್ ಕೆ ಶೆಟ್ಟಿ ಮಾತನಾಡಿದರು. ನೌಕರ ಸಂಫದ ಮಾಜಿ ಸಿ ಇ ಸಿ. ಅಂತೋನಿ ಫರ್ನಾಂಡಿಸ್ ನಿರ್ವಹಿಸಿದರು. ಪ್ರಸಾದ್ ನಾಯ್ಕ್ ವಂದಿಸಿದರು. ನೌಕರರ ಸಂಫದ ಸಿ ಇ ಸಿ. ವಿನಾಯಕ್ ನಾಯ್ಕ್. ಅಧ್ಯಕ್ಷ ಗಜಾನನ ನಾಯ್ಕ್, ಸಿಬ್ಬಂದಿಗಳು, ಸಾರ್ವಜನಿಕರು, ಗುತ್ತಿಗೆದಾರರು, ಐ ಟಿ ಐ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

error: