May 17, 2024

Bhavana Tv

Its Your Channel

ಕನ್ನಡ ಮನಸ್ಸುಗಳು ನಮ್ಮ ಜೊತೆ ಇರುತ್ತಾರೆಂಬ ನಂಬಿಕೆ ನಮಗಿದೆ – ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ.

ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಪದಾಧಿಕಾರಿಗಳ ಆಯ್ಕೆಯನ್ನು ಮಂಗಳವಾರದoದು ಕಾರವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜಿಲ್ಲಾಧ್ಯಕ್ಷ ಬಿಎನ್ ವಾಸರೆ ಬಿಡುಗಡೆ ಮಾಡಿದರು.

ಇತ್ತೀಚೆಗೆ ನಿಧನರಾದ ಅಪ್ರತಿಮ ವಾಗ್ಮಿ ಇಬ್ರಾಹಿಂ ಸುತಾರ್, ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ರಿಗೆ ಮೌನಾಚರಣೆ ಆಚರಿಸಿ ಸಂತಾಪ ಸೂಚಿಸಲಾಯಿತು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನು ಸಶಕ್ತಗೊಳಿಸಿ ಅದಕ್ಕೆ ನಾವಿನ್ಯತೆ ತರಲು ಈಗಾಗಲೇ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಕನ್ನಡ ಮನಸ್ಸುಗಳು ನಮ್ಮ ಜೊತೆ ಇರುತ್ತಾರೆಂಬ ನಂಬಿಕೆ ನಮಗಿದೆ ಅದಕ್ಕಾಗಿ ಕಸಾಪದ ಅಜೀವ ಸದಸ್ಯರೊಂದಿಗೆ ಚರ್ಚಿಸಿ, ಎಲ್ಲರ ಅಭಿಪ್ರಾಯ ಪಡೆದು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ’ ಈಗಾಗಲೇ ‘ಶಾಲೆಗಳತ್ತ ಸಾಹಿತಿಗಳು’ ಕನ್ನಡ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಲು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಬ್ಯಾಂಕಿನಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿಗಳಿಗೆ ಕನ್ನಡ ಬಾರದ ಕಾರಣ ಗ್ರಾಹಕರಿಗೆ ಸಂವಹನದ ಕೊರತೆಯಾಗುತ್ತದೆ. ಅದನ್ನು ಕೊನೆಗಾಣಿಸಲು ಸರ್ಕಾರದ ನಿಯಮದಂತೆ ಕನ್ನಡ ಬಾರದ ಸಿಬ್ಬಂದಿಗಳು 6 – ತಿಂಗಳಲ್ಲಿ ಕನ್ನಡ ಕಲಿಯಬೇಕು. ಇದಕ್ಕೆ ನಾವು ಒತ್ತು ನೀಡುತ್ತೇವೆ. ಅದಲ್ಲದೇ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು.
ಈ ಹಿಂದೆ ಜಿಲ್ಲಾ ಕೇಂದ್ರವಾದ ಕಾರವಾರಕ್ಕೆ ಬಂದ ‘ಗಡಿ ಕನ್ನಡ ಭವನ’ಕ್ಕಾಗಿ ಬಂದ ಹಣ ವಾಪಸ್ ಹೋಗಿದ್ದು, ಅದನ್ನು ಮತ್ತೆ ತರಲು ನಾವು ಪ್ರಯತ್ನಿಸುತ್ತೇವೆ. ಪ್ರತಿ ತಾಲೂಕಿನಲ್ಲೂ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು, ಕನ್ನಡ ಸಂಸ್ಕೃತಿ ಇಲಾಖೆಯ ಜಿಲ್ಲಾ ರಂಗಮAದಿರವನ್ನು ಕಸಾಪದ ಕಾರ್ಯಕ್ರಮ ಮಾಡಲು ಉಚಿತವಾಗಿ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ
ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾಜ್ ಫರ್ನಾಂಡಿಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆ ಹೊಸೂರು, ಕಾರವಾರ ತಾಲೂಕಾಧ್ಯಕ್ಷ ರಾಮಾ ನಾಯ್ಕ ಉಪಸ್ಥಿತರಿದ್ದರು.

error: