May 17, 2024

Bhavana Tv

Its Your Channel

ಅರಣ್ಯಭೂಮಿ ಹಕ್ಕಿಗಾಗಿ ಹಕ್ಕೊತ್ತಾಯ ; ಮೇ 7 ಹೊನ್ನಾವರದಲ್ಲಿ ಬೃಹತ್ ಅರಣ್ಯವಾಸಿಗಳನ್ನ ಉಳಿಸಿ- ರ‍್ಯಾಲಿ.

ಕಾರವಾರ: ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟಿನಲ್ಲಿ ಸರಕಾರ ಮೇ 30 ರ ಒಳಗೆ ಪ್ರಮಾಣ ಪತ್ರ ಸಲ್ಲಿಸುವದು ಹಾಗೂ ಉತ್ತರ ಕನ್ನಡ ಜಿಲ್ಲೆಗೂ ಶರಾವತಿ ಅಭಯಾರಣ್ಯ ಪ್ರದೇಶ ವಿಸ್ತರಿಸಿರುವುದರಿಂದ ಉಂಟಾದ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಮೇ 7 ರಂದು ಹೊನ್ನಾವರದಲ್ಲಿ “ಅರಣ್ಯವಾಸಿಗಳನ್ನ ಉಳಿಸಿ”- ಬೃಹತ್ರ‍್ಯಾಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಕಾರವಾರದಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಏರ್ಪಡಿಸಿದ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿದ್ದರು. ಸರಕಾರದ ಇಚ್ಛಾಶಕ್ತಿ ಕೊರತೆ, ಜನಪ್ರತಿನಿಧಿಗಳಿಗೆ ಅರಣ್ಯ ಹಕ್ಕು ಕಾಯಿದೆಯಲ್ಲಿನ ಕಾನೂನು ಜ್ಞಾನದ ಕೊರತೆಯಿಂದ ಇಂದು ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ಮರಿಚಿಕೆಯಾಗುತ್ತಿದೆ. ಅಲ್ಲದೇ, ಸುಫ್ರೀಂ ಕೋರ್ಟಿನಲ್ಲಿ ಸರಕಾರ ಅರಣ್ಯವಾಸಿಗಳ ಪರ ಪ್ರಮಾಣ ಪತ್ರ ಸಲ್ಲಿಸದೇ ಇದ್ದಲ್ಲಿ ಅರಣ್ಯವಾಸಿಗಳು ನಿರಾಶ್ರೀತರಾಗುವುದರಲ್ಲಿ ಸಂಶಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶೇ 78.20 ರಷ್ಟು ತೀರಸ್ಕಾರ:
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮೀಣ ಭಾಗದ ಅತೀಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಿಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 89167 ಅವುಗಳಲ್ಲಿ 69733 ಅರ್ಜಿಗಳು ತೀರಸ್ಕಾರವಾಗಿದ್ದು ತೀರಸ್ಕಾರವಾಗಿರುವ ಅರ್ಜಿಗಳು ಶೇ 78.20 ರಷ್ಟು ಆಗಿವೆ.

ಹಕ್ಕು ಪತ್ರ ಶೇ 3.2:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 ಪಾರಂಪರಿಕ ಅರಣ್ಯವಾಸಿಗಳಿಗೆ 398 ಹಾಗೂ ಸಮುದಾಯ ಉದ್ದೇಶಕ್ಕೆ 1126 ಒಟ್ಟೂ 2852 ಹೀಗೆ ಶೇಕಡವಾರು ಬಂದಿರುವAಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ 3.2 ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ.
ಅಭಯಾರಣ್ಯದಿಂದ ಸೌಲಭ್ಯ ವಂಚಿತ:
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕಿನ ಸುಮಾರು 40,000 ಹೇಕ್ಟರ್ ಪ್ರದೇಶ ಮೀಸಲು ಅರಣ್ಯವನ್ನು ಶರಾವತಿವನ್ಯಜೀವಿ ಅಭಯಾರಣ್ಯಕ್ಕೆ ಹೇಚ್ಚುವರಿಯಾಗಿ ಸೇರ್ಪಡೆಯಿಂದ ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳು ಮೂಲಭೂತ ಸೌಲಭ್ಯದಿಂದ ವಂಚಿತರಾಗುವ ಭೀತಿಯಲ್ಲಿ ಇದ್ದಾರೆ ಎಂದು ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಭೂಮಿ ಹಕ್ಕಿಗಾಗಿ ಸಾಂಘೀಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು. ಹಾಗೂ ಮೇ 7 ರಂದು ಹೊನ್ನಾವರದಲ್ಲಿ ಜರಗುವ ಅರಣ್ಯವಾಸಿಗಳನ್ನು ಉಳಿಸಿ- ಜಾಥಕ್ಕೆ ಹೇಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಬರಬೇಕೆಂದು ಕೋರಿದರು.
ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಜಿ.ಎಮ್.ಶೆಟ್ಟಿ, ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಅಂಕೋಲಾ ಅಧ್ಯಕ್ಷ ರಮಾನಂದ ನಾಯ್ಕ ಅಚಿವೆ, ವಿಜಯ ಪಿಳ್ಳೆ, ಗುರುದಾಸ ಕಾರವಾರ ಮುಂತಾದವರು ಉಪಸ್ಥಿತರಿದ್ದರು

error: