May 17, 2024

Bhavana Tv

Its Your Channel

ಇಂದು ಅತೀಕ್ರಮಣದಾರರ ಬೆಂಗಳೂರು ಸಭೆ ; ಸರಕಾರಕ್ಕೆ ಹತ್ತು ಬೇಡಿಕೆಯ ಮನವಿ ನೀಡಲು ನಿರ್ಧಾರ.

ಕಾರವಾರ:ಅರಣ್ಯವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸುವುದು, ಅರಣ್ಯ ಹಕ್ಕು ಕಾಯಿದೆಯ ವೈಫಲ್ಯ ಸರಿಪಡಿಸುವುದು, ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉನ್ನತ ಮಟ್ಟದ ಸಭೆ ಜರುಗಿಸುವುದು ಮತ್ತು ಸುಫ್ರೀಂ ಕೋರ್ಟನಲ್ಲಿ ರಾಜ್ಯಸರಕಾರವು ಅರಣ್ಯವಾಸಿಗಳ ಪರ ಪ್ರಮಾಣ ಪತ್ರ ಸಲ್ಲಿಸುವ ಮುಂತಾದ
ಹತ್ತು ಬೇಡಿಕೆಗಳನ್ನು ಅರಣ್ಯವಾಸಿಗಳಪರ ಫೇ. ೧೭ ರಂದು ಸರಕಾರಕ್ಕೆ ಮನವಿ ನೀಡಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ತಿಳಿಸದ್ದಾರೆ.

ಫೇ. ೧೭ ರಂದು ಬೆಂಗಳೂರಿನ ನೌಕರ ಭವನ, ಕಬ್ಬನ್ ಪಾರ್ಕ ಆವರಣ, ವಿಕಾಸ ಸೌಧ ಎದುರು, ಜರುಗಲಿರುವ ‘೩೦ ವರ್ಷ ಅರಣ್ಯ ಭೂಮಿ ಹಕ್ಕು ಹೋರಾಟದ ಸ್ಮರಣ ಸಂಚಿಕೆ ಬಿಡುಗಡೆ’ ಸಮಾರಂಭದಲ್ಲಿ ಹತ್ತು ಬೇಡಿಕೆಗಳನ್ನು ಮಂಡಿಸಲಾಗುವುದೆಂದು ಅವರು ತಿಳಿಸಿದರು.

೧೯೭೮ ರ ಪೂರ್ವದ ಅತೀಕ್ರಮಿಸಿದ ಹಕ್ಕು ಪತ್ರ ನೀಡುವುದು, ಶಿವಮೊಗ್ಗ ಶರಾವತಿ ಅಭಯಾರಣ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಪ್ರದೇಶ ಸೇರ್ಪಡೆಗೆ
ವಿರೋಧ, ಅರಣ್ಯವಾಸಿಗಳ ಮೇಲೆ ದಾಖಲಿಸಿರುವ ಕ್ರೀಮಿನಲ್ ಪ್ರಕರಣ ಹಿಂದಕ್ಕೆ ಪಡೆಯುವುದು ಅರಣ್ಯ ಅಧಿಕಾರಿಗಳ ದೌರ್ಜನ್ಯ ನಿಯಂತ್ರಿಸುವುದು, ಅತೀವೃಷ್ಠಿ
ಸಂದರ್ಭದಲ್ಲಿ ಬೆಳೆನಷ್ಟ ಪರಿಹಾರಕ್ಕೆ ಅರಣ್ಯ ಅತೀಕ್ರಮಣ ಸಾಗುವಳಿದಾರರನ್ನು ಒಳಪಡಿಸುವಂತೆ ಮುಂತಾದ ಪ್ರಮುಖ ಬೇಡಿಕೆಗಳಾಗಿದೆ ಎಂದು ಅವರು ತಿಳಿಸಿದರು.

ಸದ್ರಿ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಹಸ್ರಾರು ಜನ ಅರಣ್ಯ ಅತೀಕ್ರಮಣದಾರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಅರಣ್ಯ ಇಲಾಖೆಯ ತನಿಖೆಗೆ ಅಗ್ರಹ:
ಅರಣ್ಯ ಇಲಾಖೆಯ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನೆಪದಲ್ಲಿ ಇತ್ತೀಚಿನ ೫ ವರ್ಷಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ
ಸಕಾರಣವಿಲ್ಲದೇ ಮರ ಕಡಿದಿರುವ ಕುರಿತು ಹಾಗೂ ಕಾಮಗಾರಿಯ ಕಾರ್ಯ ಪಾರದರ್ಶಕ ತನಿಖೆಗೆ ಒಳಪಡಿಸಲು ಸರಕಾರಕ್ಕೆ ಅಗ್ರಹಿಸುತ್ತೇವೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

error: