April 28, 2024

Bhavana Tv

Its Your Channel

ಶ್ರೀ ಶಿವನಾಥ ರವಳನಾಥ ದೇವಾಲಯದಲ್ಲಿ ಸಂಪ್ರೋಕ್ಷಣೆ ಕಾರ್ಯಕ್ರಮ

ಕಾರವಾರ : ತಾಲೂಕು ಸೋನಾರವಾಡದ ಶ್ರೀ ಶಿವನಾಥ ರವಳನಾಥ ದೇವಾಲಯದಲ್ಲಿ, ಶ್ರೀ ದೇವರ ಸಂಪ್ರೋಕ್ಷಣೆ ಕಾರ್ಯಕ್ರಮದ ಅಂಗವಾಗಿ ಸಂಜೆ ನಡೆದ ಭಜನಾ ಸಂಕೀರ್ತನೆ ಭಕ್ತವೃಂದದ ಮೆಚ್ಚುಗೆಗೆ ಸಾಕ್ಷಿಯಾಯಿತು.
ಕಾರವಾರ ತಾಲೂಕು ಬಾಡ ಸೋನಾರವಾಡದ ಶ್ರೀ ಶಿವನಾಥ ರವಳನಾಥ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವವು ಕಳೆದ 45 ದಿನಗಳ ಹಿಂದೆ ನೆರವೇರಿತ್ತು. ಶಾಸ್ತ್ರದಂತೆ ಪುನರ್ ಪ್ರತಿಷ್ಠಾಪನೆಯಾದ 45 ದಿನಗಳ ಬಳಿಕ ಶ್ರೀ ದೇವಾಲಯದಲ್ಲಿ ಸಂಪ್ರೋಕ್ಷಣೆ ಕಾರ್ಯಕ್ರಮ ನಡೆಯಿತು. ಹಗಲು ಕಲಾವೃದ್ಧಿ ಹೋಮ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಸಾಂಗವಾಗಿ ನೆರವೇರಿದವು. ಸಂಜೆ ಸುಂಕೇರಿ ಶ್ರೀ ಶಾರದಾ ಸಂಗೀತ ಶಾಲೆಯ ಗುರುಗಳು ಹಾಗೂ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಕೀರ್ತನೆ ಎಂದರೆ ಹಾಡು ಹೇಳುವಾಗ ಭಕ್ತಿ ಇರಬೇಕೆಂದಿಲ್ಲ. ಜನರ ಮನೋರಂಜನೆಗೂ ಹಾಡನ್ನು ಹೇಳುವವರು ಇರುತ್ತಾರೆ. ಆದರೆ ಅದು ಸಂಕೀರ್ತನೆಯಾಗಬೇಕಾದರೆ ಭಜನೆಯಲ್ಲಿ ಭಕ್ತಿಯೂ ಕೂಡ ಅಡಕವಾಗಿರಬೇಕು. ಅಂತಹ ಭಜನೆಯೊಂದೇ ಭಗವಂತನನ್ನು ಒಲಿಸಿಕೊಳ್ಳಲು ಸುಲಭದ ಮಾರ್ಗವೆಂದು ದಾಸಶ್ರೇಷ್ಠರು ಕಂಡು ಹೇಳಿದ ಸತ್ಯ.
ಇಂತಹ ಭಜನಾ ಸಂಕೀರ್ತನೆಯನ್ನು ಶಾರದಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸುಮಧುರವಾದ ಕಂಠದಲ್ಲಿ ಶೃದ್ದೆಯಿಂದ ಹಾಡಿ ಭಕ್ತವೃಂದದ ಶ್ಲಾಘನೆಗೆ ಸಾಕ್ಷಿಯಾದರು. ಇವರಿಗೆ ಸಂಗೀತ ಗುರುಗಳಾದ ಚಿಂತನ ಪಾವಸ್ಕರ್ ಹಾರ್ಮೋನಿಯಂ ಸಾಥ್; ಹಾಗೂ ಯೋಗೇಶ್ ಪಾವಸ್ಕರ್ ತಬಲಾ ಸಾಥ್ ನೀಡಿ ಭಜನಾ ಸಂಕೀರ್ತನೆಯ ಮೆರಗನ್ನು ಹೆಚ್ಚಿಸಿದರು.
ನೂರಾರು ಸಂಖ್ಯೆಯಲ್ಲಿ ಭಕ್ತರು, ಕಲಾಭಿಮಾನಿಗಳು ಆಗಮಿಸಿ ಭಜನೆಯನ್ನು ಆಲಿಸಿ, ಪೂಜೆಯ ಕ್ಷಣಗಳನ್ನು ಕಣ್ತುಂಬಿಕೊAಡು ಪುನೀತರಾದರು. ವರದಿ: ನರಸಿಂಹ ನಾಯ್ಕ್ ಹರಡಸೆ.

error: