May 17, 2024

Bhavana Tv

Its Your Channel

ಗಾಂಧಿ ಸಂಸ್ಕೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಸಮಾವೇಶ

ಕುಮಟಾ ; ಕೋವಿಡ್ ಸಂದರ್ಭದಲ್ಲಿ ದೇವಸ್ಥಾನ ಬಂದ್ ಮಾಡಿದರು. ಆದರೆ ಮದ್ಯದ ಅಂಗಡಿ ಬಂದ್ ಮಾಡಿಲ್ಲ. ನಮ್ಮ ಸರ್ಕಾರದ ಹಣೆಬರಹ ಇದು. ಸರ್ಕಾರಕ್ಕೆ ಆದಾಯ ಬರುವುದು ಈ ಮದ್ಯ ಮಾರಾಟದಿಂದಾಗಿದೆ. ಹಾಗಾಗಿ ಸರ್ಕಾರವೇ ವ್ಯಸನಿಗಳನ್ನು ಬೆಳೆಸುತ್ತಿದೆ ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಹೇಳಿದರು.

ಕುಮಟಾ ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ನಡೆದ ಗಾಂಧಿ ಜಯಂತಿ ಸಂಭ್ರಮಾಚರಣೆ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಗಾಂಧಿ ಸಂಸ್ಕೃತಿ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತಾನಾಡಿದರು. ಶ್ರೀ ವಿರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಸಮಾಜವನ್ನು ವ್ಯಸನಮುಕ್ತಗೊಳಿಸುವ ಪಣತೊಟ್ಟಿದೆ. ಇಂತ ಕಾರ್ಯಕ್ರಮಗಳ ಮೂಲಕ ಸಮಾಜ ಸುಧಾರಣೆ ಕಾರ್ಯಗಳನ್ನು ಕೈಗೊಂಡು ಧರ್ಮವನ್ನು ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮದ್ಯ ವ್ಯಸನದಿಂದ ಮುಕ್ತರಾದವರನ್ನು ಗೌರವಿಸಿ ಹೊಸ ಜೀವನ ನಡೆಸಲು ಪ್ರೋತ್ಸಾಹ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ವಕೀಲೆ ಮಮತಾ ನಾಯ್ಕ, ಧರ್ಮಸ್ಥಳ ಯೋಜನೆಯ ನಾಗರಾಜ ನಾಯ್ಕ, ಸಂಪನ್ಮೂಲ ವ್ಯಕ್ತಿ ಚಿದಾನಂದ ಪಟಗಾರ, ಪ್ರಮುಖರಾದ ದಯಾನಂದ ದೇಶಭಂಡಾರಿ, ಸತೀಶ ಶೇಟ್, ಇತರರು ಇದ್ದರು.

ವರದಿ: ನಟರಾಜ್ ಗದ್ದೆಮನೆ ಕುಮಟಾ.

error: