May 17, 2024

Bhavana Tv

Its Your Channel

ಕುಮಟಾ; ಉದ್ಯಮಿ ಸಂತೆಯೊ ಅಥವಾ ಉದ್ಯಮಿ ಸ್ವಂತವೊ

ವರದಿ: ನಟರಾಜ ಗದ್ದೆಮನೆ ಕುಮಟಾ

ಕುಮಟಾ: ಪಟ್ಟಣದಲ್ಲಿ ೯ ದಿನಗಳ ಕಾಲ ನಡೆಯಲಿರುವ ಉದ್ಯಮಿ ಸಂತೆಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಯೋಜನೆ ಮಾಡಿರುವ ಸಂಸ್ಥೆಗೆ ಹಣ ಮಾಡುವ ಉದ್ಯಮವಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳೀಯ ಗೃಹೋದ್ಯಮಿಗಳಿಗೆ ಮೊದಲ ಪ್ರಾಶಸ್ತ್ಯ ಎಂದು ಆಯೋಜನೆ ಸಂಸ್ಥೆ ಹೇಳಿ ಸ್ಥಳೀಯರಿಗೆ ಅವಕಾಶ ನೀಡದಿರುವುದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಉತ್ತರಕನ್ನಡ ಉತ್ಪನ್ನದ ಹೊರತಾಗಿ ಬೇರೆ ಬೇರೆ ಕಡೆಗಳಿಂದ ವ್ಯಾಪಾರಸ್ಥರು ಆಗಮಿಸಿ, ಮಾರುಕಟ್ಟೆ ಬೆಲೆಗಿಂತ ಅಧಿಕ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖರೀದಿಗೆ ಗ್ರಾಹಕರು ಹಿಂದೇಟು ಹಾಕುವಂತಾಯಿತು. ಸುಮಾರು ೮೦ ಅಂಗಡಿಗಳಿಗೆ ಅವಕಾಶ ನೀಡಲಾಗಿದ್ದು, ಪ್ರತಿ ಅಂಗಡಿಕಾರರಿAದ ದಿನನಿತ್ಯ ೫೦೦ ರೂ. ವಸೂಲಾತಿ ಮಾಡುತ್ತಿದ್ದಾರೆ. ವ್ಯಾಪಾರವಿಲ್ಲದೇ ೫೦೦ ರೂ ಎಲ್ಲಿಂದ ನೀಡುವುದು ಎಂಬುದು ವ್ಯಾಪಾರಿಗಳ ಪ್ರಶ್ನೆಯಾಗಿದ್ದು, ಆರ್ಥಿಕವಾಗಿ ಅಶಕ್ತರಿಗೆ ಅಂಗಡಿಯಿoದ ಹಣ ಪಡೆಯುವುದಿಲ್ಲ. ನಿಮಗೆ ವ್ಯಾಪಾರಕ್ಕೆ ನಮ್ಮ ಸಂಸ್ಥೆಯಿAದ ವೇದಿಕೆ ಕಲ್ಪಿಸುತ್ತೇವೆ ಎಂದು ಹೇಳಿದ್ದರು. ಈ ಕಾರಣಕ್ಕೆ ಅಂಗಡಿ ಹಾಕಿದ್ದೇನೆ. ಆದರೆ ಪ್ರತಿನಿತ್ಯ ೫೦೦ ವಸೂಲಿ ಮಾಡುತ್ತಾರೆ. ಈ ಹಣ ಹೊಂದಿಸುವುದು ಬಹಳ ಕಷ್ಟವಾಗಿ ಪರಿಣಮಿಸಿದೆ. ಅಲ್ಲದೇ ಜನರು ಆಗಮಿಸುತ್ತಿಲ್ಲ. ಹಣ ಎಲ್ಲಿಂದ ಕೊಡುವುದು ಎಂದು ಹೆಸರು ಹೇಳಲಿಚ್ಛಿಸದ ವ್ಯಾಪಾರಿ ತನ್ನ ಅಳಲು ತೋಡಿಕೊಂಡರು.


ಕೊರೊನಾದಿಂದ ಗೃಹೋದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಿಲ್ಲದೇ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿದ್ದಾರೆ. ಇದೊಂದು ವೇದಿಕೆ ಸಿಕ್ಕಿ ಉತ್ಪನ್ನಗಳು ಮಾರಾಟವಾಗಬಹುದು ಎಂಬ ಅತೀ ಆಸೆಯಿಂದ ಆಗಮಿಸಿದ್ದಾರೆ. ಇಲ್ಲಿ ನೋಡಿದರೆ ಅವ್ಯವಸ್ಥೆಯ ಆಗರವಾಗಿ ಜನರು ಇಲ್ಲದೇ ಅಂಗಡಿಕಾರರು ತೀವೃ ನಷ್ಟ ಅನುಭವಿಸುವಂತಾಯಿತು.
ಸ್ಥಳೀಯ ಉತ್ಪನ್ನ ತಯಾರಕರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದು ಮೊದಲು ಹೇಳಿ ಲಗ್ಗೆ ಇಡುವ ಎನ್.ಜಿ.ಓಗಳು ದಿನ ಕಳೆದಂತೆ ಹಣ ಮಾಡುವ ಸಂಸ್ಥೆಗಳಾಗಿ ರೂಪುಗೊಳ್ಳುತ್ತವೆ. ಇವರು ತಮ್ಮ ಸ್ವಾರ್ಥ ನೋಡುತ್ತವೆ ಹೊರತು ಉತ್ಪನ್ನ ತಯಾರಿಕರ ವಿಶ್ವಾಸಗಳಿಸಲು ಹಿಂದೆ ಬೀಳುತ್ತವೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ

ಕೊರೊನಾ ಸೋಂಕು ಹೆಚ್ಚಳವಾಗುತ್ತದೆ ಎಂದು ರಾಜ್ಯ ಸರ್ಕಾರ ಸಭೆ, ಸಮಾರಂಭಗಳನ್ನು ನಡೆಸಂತೆ ಆದೇಶ ಹೊರಡಿಸಿದೆ. ಪಟ್ಟಣದ ಮಣಕಿ ಮೈದಾನದಲ್ಲಿ ನಡೆಯುತ್ತಿರುವ ಉದ್ಯಮಿ ಸಂತೆಯಲ್ಲಿ ಮಾತ್ರ ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಪ್ರಚಾರ ಪತ್ರದಲ್ಲಿ ಮಾತ್ರ ಕೊರೊನಾ ನಿಯಮ ಪಾಲನೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ.

ದೇಶಪಾಂಡೆ ಫೌಂಡೇಶನ್’ನಿAದ ಉದ್ಯಮಿ ಸಂತೆ ಆಯೋಜನೆ ಮಾಡಲಾಗಿದೆ ಎಂದು ಉತ್ತಕರ್ನಾಟಕ ಭಾಗದಿಂದ ಸೀರೆ, ಕರಕುಶಲ ವಸ್ತುಗಳನ್ನು ಹೊತ್ತು ಬಂದಿದ್ದೇವೆ. ಆದರೆ ಇಲ್ಲಿ ನೋಡಿದರೆ ಜನರೇ ಇಲ್ಲ, ವ್ಯಾಪಾರವೂ ಇಲ್ಲ. ೫೦೦ ರೂ. ಅಂಗಡಿ ಬಾಡಿಗೆ ಎಲ್ಲಿಂದ ಕೊಡುವುದು ಎಂಬುದು ದೊಡ್ಡ ಚಿಂತೆಯಾಗಿದೆ.

error: