May 17, 2024

Bhavana Tv

Its Your Channel

ಜಾನುವಾರು ಕಳ್ಳತನದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕುಮಟಾ: ಸರಕಾರ ಮತ್ತು ಹಲವು ಮಠಾದೀಶರು ದೇಶಿ ಗೊ ಸಂತತಿಯನ್ನ ಉಳಿಸಬೇಕು ಬೆಳೆಸಬೇಕು ಎಂದು ಉಪದೇಶ ಮಾಡುತ್ತಿದ್ದಾರೆ. ಸರಕಾರ ಈಗಾಗಲೆ ತಾಲೂಕಿಗೊಂದು ಗೋಮಾಳ ಮಾಡಬೇಕೆಂಬ ತಯಾರಿಯಲ್ಲಿದೆ. ಆದರೆ ಕುಮಟಾ ಭಾಗದ ಹಳ್ಳಿ ಹಳ್ಳಿಗಳಲ್ಲಿ ಕಷ್ಟಪಟ್ಟು ಸಾಕಿದ ಹಸುಗಳು ರಾತ್ರಿ ಬೆಳಗಾಗುವುದರೊಳಗೆ ಮಾಯವಾಗುತ್ತಿದೆ

ಗೋ ಕಳ್ಳರ ಹಾವಳಿಯಿಂದ ಹಳ್ಳಿಗರು ಹೈರಾಣಾಗಿದ್ದಾರೆ. ಆದರೆ ದಿನಿದಿಂದ ದಿನಕ್ಕೆ ಪರೀಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಕುಮಟಾ ಭಾಗದಲ್ಲಿ ಹಲವು ಬೀಡಾಡಿ ದನಗಳು ಹೊಟ್ಟೆ ತುಂಬಾ ಮೆಂದು ಜಾಗ ಸಿಕ್ಕಲ್ಲಿ ಮಲಗುತ್ತಿದ್ದವು ಹೀಗೆ ಹಸುಗಳು ಎಲ್ಲೆಂದರಲ್ಲಿ ಠಿಕಾಣಿ ಹೂಡುತ್ತಿದ್ದವು. ಆದರೆ ಕೆಲ ದಿನಗಳಿಂದ ಕತ್ತಲು ಕಳೆದು ಬೆಳಗಾಗುವಷ್ಟ್ರಲ್ಲಿ ಜಾನುವಾರುಗಳು ಮಾಯವಾಗುತ್ತಿವೆ
ಹಲವು ಕಡೆ ರೈತರು ಕೊಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರುಗಳೇ ಮಾಯವಾಗುತ್ತಿವೆ , ಬೆಲೆಬಾಳುವ ಜಾನುವಾರುಗಳನ್ನ ಗೋ ಕಳ್ಳರು ಎಸ್ಕೇಪ್ ಮಾಡುತ್ತಿದ್ದಾರೆ. ಅಲ್ಲದೆ ದುಬಾರಿ ಕಾರುಗಳಲ್ಲೆ ಬರುವದರಿಂದ ಹಳ್ಳಿಗರಿಗೆ ಸಂಶಯಪಡುವುದಕ್ಕೂ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಇದಕ್ಕೆಲ್ಲಾ ಕಡಿವಾಣ ಹಾಕಿ ಎಂದು ಸ್ಥಳೀಯರು ತಾಲೂಕಾ ಆಡಳಿತವನ್ನ ಪೋಲೀಸ್ ಇಲಾಖೆಯನ್ನ ಒತ್ತಾಯಿಸುತ್ತಿದ್ದಾರೆ,
ಸದ್ಯ ಜಾನುವಾರು ಕಳ್ಳತನದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಕಳ್ಳರು ದೇವಾಲಯದಲ್ಲಿರುವ ದೇವರನ್ನೂ, ದೇವರ ಹುಂಡಿಯನ್ನೂ ಬಿಡುತ್ತಿಲ್ಲ, ಹಾಗೆಯೇ ದೇವರು ಎಂದು ನಂಬಿರುವ ಕಾಮಧೇನುವನ್ನೂ ಬಿಡುತ್ತಿಲ್ಲ . ಆದ್ರೆ ಅವರ ದುಷ್ಟಕೃತ್ಯಕ್ಕೆ ಹೈರಾಣಾಗಿರುವವರು ಮಾತ್ರ ಹಳ್ಳಿಗರು.

ವರದಿ:ನಟರಾಜ ಗದ್ದೆಮನೆ.

error: