May 17, 2024

Bhavana Tv

Its Your Channel

ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಜಾಗೃತಿ ಮೂಡಿಸಲು ೧೯ ವರ್ಷದ ಯುವಕ ರೋಹನ ಅಗ್ರವಾಲ್ ಪಾದ ಯಾತ್ರೆ

ಕುಮಟಾ : ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಜಾಗೃತಿ ಮೂಡಿಸಲು ೧೯ ವರ್ಷದ ಯುವಕನೋರ್ವ ಪಾದ ಯಾತ್ರೆ ಆರಂಭಿಸಿದ್ದು, ಬುಧವಾರ ಕುಮಟಾಕ್ಕೆ ಆಗಮಿಸಿದ ಯುವಕನನ್ನು ಬಿಜೆಪಿ ಮುಖಂಡರು ಸ್ವಾಗತಿಸಿ, ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.

ಪ್ಲಾಸ್ಟಿಕ್ ಬಳಕೆಯಿಂದ ಮನು ಕುಲದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಸದುದ್ದೇಶದಿಂದ ಮಹಾರಾಷ್ಟçದ ನಾಗಪುರ ನಿವಾಸಿ ರೋಹನ ಅಗ್ರವಾಲ್ ಎಂಬ ಯುವಕನೋರ್ವ ಪಾದ ಯಾತ್ರೆ ಆರಂಭಿಸಿದ್ದಾನೆ. ಉತ್ತರ ಪ್ರದೇಶದ ವಾರನಾಸಿಯಲ್ಲಿ ಗಂಗಾ ಸ್ನಾನ ಮಾಡಿ ಅಲ್ಲಿಂದ ಆರಂಭವಾದ ಪಾದ ಯಾತ್ರೆಯು ೧೩ ರಾಜ್ಯಗಳನ್ನು ಪೂರೈಸಿದ್ದಾರೆ. ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಆಂದ್ರ ಪ್ರದೇಶ, ಕರ್ನಾಟಕ, ಕೇರಳ, ಗೋವಾ , ಪಾಂಡಿಚೇರಿ, ಮಾರ್ಗವಾಗಿ ಪಾದ ಯಾತ್ರೆ ಸಾಗಲಿದೆ. ಸುಮಾರು ೪೨೦ ದಿನಗಳಿಂದ ಪಾದ ಯಾತ್ರೆ ಮಾಡುತ್ತಿದ್ದು, ಅವರು ಹೋದ ಊರಲೆಲ್ಲ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಟಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೇ ದೇಶದ ಅಖಂಡತೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವ ಈ ಯುವಕ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆಯನ್ನು ಯುವ ಜನತೆಯಲ್ಲಿ ಮೂಡಿಸುವ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ. ಇವರು ಕುಮಟಾಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಾಲಯದಲ್ಲಿ ರೋಹನ ಅಗ್ರವಾಲ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಸೇರಿದಂತೆ ಕಾರ್ಯಕರ್ತರು ಸನ್ಮಾನಿಸಿ, ಗೌರವಿಸುವ ಜೊತೆಗೆ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದರು.

error: