May 17, 2024

Bhavana Tv

Its Your Channel

“ಬೀದಿ ಬದಿ ವ್ಯಾಪರಸ್ಥರಿಗೆ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ

ಕುಮಟಾ: ಕೆಲವೊಂದು ಪುಡಾರಿಗಳು ಕೇವಲ ವಿರೋಧಿಸುವ ಉದ್ದೇಶ ಹೊಂದಿ ಸಮಾಜದ ಉದ್ಧಾರಕ್ಕೆ ತೊಡಕಾಗಿ ಪರಿಣಮಿಸಿದ್ದಾರೆ. ಆದರೆ, ಸುಸ್ಥಿರ ಮತ್ತು ಸ್ವಚ್ಛ ಸಮಾಜಕ್ಕಾಗಿ ಇಂತಹ ಮಾಹಿತಿ ಕಾರ್ಯಾಗಾರಗಳು ಅತ್ಯಂತ ಮಹತ್ವ ಉಪಯುಕ್ತವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಪುರಸಭೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಕ್ಯ ಸರ್ಕಾರೇತರ ಸಂಸ್ಥೆ, ರೋಟರಿ ಏನ್ಸ್ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡ “ಬೀದಿ ಬದಿ ವ್ಯಾಪರಸ್ಥರಿಗೆ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಘನ ತ್ಯಾಜ್ಯ ಘಟಕಗಳ ನಿರ್ಮಾಣದಿಂದ ಉಪಯೋಗಗಳು ಸಾಕಷ್ಟಿದ್ದು ಈ ಮೊದಲು ಮೂರೂರು ಗುಡ್ಡದ ಮೇಲಿನ ಸ್ಥಳವನ್ನು ಆಯ್ಕೆ ಮಾಡಿಕೊಂಡಾಗ ಮರಿ ಪುಡಾರಿಗಳು ಒಂದಿಷ್ಟು ಜನರನ್ನು ಸೇರಿಸಿ ವಿರೋಧಿಸಿದರು. ಗೋಕರ್ಣ ಗ್ರಾಮ ಪಂಚಾಯ್ತಿ ಹಿಂಭಾಗದಲ್ಲಿಯೇ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಿ ಒಣಕಸ ಮತ್ತು ಹಸಿಕಾಸಗಳನ್ನು ಪ್ರತ್ಯೇಕಿಸಿ ಸಂಗ್ರಹ ಮಾಡುತ್ತಿದ್ದಾರೆ ಎಂದರು.

ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಮುಖ್ಯಾಧಿಕಾರಿ ಎಂ.ಕೆ.ಸುರೇಶ, ರೋಟರಿಯ ಸುಜಾತಾ ಕಾಮತ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಡಿ.ಟಿ.ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಹರ್ಮಲಕರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ, ಶೈಲಾ ಗೌಡ, ಗೀತಾ ಮುಕ್ರಿ, ಮಹೇಶ ನಾಯ್ಕ ವನ್ನಳ್ಳಿ ಇದ್ದರು. ಐಕ್ಯ ಸರ್ಕಾರೇತರ ಸಂಸ್ಥೆ ಅಧ್ಯಕ್ಷ ಎಂ.ಜಿ.ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

error: