May 17, 2024

Bhavana Tv

Its Your Channel

೩೭ ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ತನಗೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ ಡಿ.ಜೆ ಶಾಸ್ತ್ರೀ

ಕುಮಟಾ ಗಿಬ್ ಬಾಲಕರ ಪ್ರೌಡ ಶಾಲೆಯ ಶಿಕ್ಷಕರಾಗಿ ,ಮುಖ್ಯೊಧ್ಯಪಕರಾಗಿ ಬೇರೆ ಬೇರೆ ಶಾಲೆಗಳಲ್ಲಿ ಕಾರ್ಯನಿರ್ವಹಿಸಿ ೩೭ ವರ್ಷಗಳ ಕಾಲ ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ತನಗೆ ಸಹಕಾರ ನೀಡಿದವಿರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಡಿ.ಜೆ ಶಾಸ್ತ್ರೀ ಔತಣ ಕೂಟ ಏರ್ಪಡಿಸಿದ್ದರು

ಮೂಲತಃ ಕುಮಟಾ ತಾಲೂಕಿನ ಉಂಚಗಿಯ ದಿ.ಗೋಪಾಲ ವಿಷ್ಣು ಶಾಸ್ತ್ರಿ ಹಾಗೂ ದಿ.ನಾಗವೇಣಿ ದಂಪತಿಯ ೬ ನೆ ಪುತ್ರನಾಗಿ ಜನಿಸಿದ ಇವರು , ಉಂಚಗಿಯಲ್ಲಿ ಪ್ರಾಥಮಿಕ ಗಿಬ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಪಡೆದು ಗಿಬ್ ಬಾಲಕರ ಪ್ರೌಢಶಾಲೆಗೆ ಶಿಕ್ಷಕರಾಗಿ ನೇಮಕಗೊಂಡಿದ್ದರು . ಅಲ್ಲದೇ ಕಳೆದ ೬ ವರ್ಷಗಳಿಂದ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .
ಇವರು ಇಂದು ನಿರಂತರವಾಗಿ ಶಿಕ್ಷಣ ಕ್ಷೇತ್ರದಲ್ಲಿ ತನಗೆ ಸಹಕಾರ ನೀಡಿದವಿರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಔತಣ ಕೂಟ ಏರ್ಪಡಿಸಿದ್ದರು

ಈ ಕಾರ್ಯಕ್ರಮ ದಲ್ಲಿ ಆಗಮಿಸಿದ ಡಯಟ್ ಪ್ರಾಂಶುಪಾಲರಾದ ಈಶ್ವರ ಎಚ್.ನಾಯ್ಕ ಅವರು ಮಾತನಾಡಿ ಡಿ.ಜಿ.ಶಾಸ್ತ್ರಿಯವರ ಸರಳತೆ ಮತ್ತು ಸಜ್ಜನಿಕೆ ಪ್ರಶಂಸನೀಯ ಎಂದರು

ಡಿ ಜೆ ಶಾಸ್ತ್ರೀ ಮಾತನಾಡಿ ನನ್ನ ೩೭ ವರ್ಷಗಳ ಸೇವಾ ಅವಧಿಯಲ್ಲಿ ಸಹಕರಿಸಿದ ಇಲಾಖೆಯ ಅಧಿಕಾರಿಗಳಿಗೆ, ಮಾರ್ಗದರ್ಶಕರಿಗೆ, ಮತ್ತು ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಉಪನಿರ್ದೆಶಕ ಹರಿಶ ಗಾಂವಕರ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಲ್ ಭಟ್, ಗಿಬ್ ಬಾಲಕಿಯರ ಮುಖ್ಯಾಧ್ಯಾಪಕರಾದ ಶೀತಾ ಪೈ, ಪಾಡುರಂಗ ವಾಗ್ರೆಕರ್,ವಿನಾಯಕ ಶಾನಭಾಗ ,ವಿ.ವಿ ಶಾನಭಾಗ,ಎಸ್ ಎಸ್ ಶಾಸ್ತ್ರಿ, ಎಸ್ ಬಿ ನಾಯ್ಕ ಇದ್ದರೂ.

error: