May 17, 2024

Bhavana Tv

Its Your Channel

ಕುಮಟಾದ ಕಲಾ ಸಿರಿ ವೇದಿಕೆಯಿಂದ ರಾಜ್ಯ ಮಟ್ಟದ ಸಾಂಸ್ಕ್ರತಿಕ ಹಬ್ಬ ಪುರಭವನದಲ್ಲಿ ನ.೧೪ ರಂದು ನಡೆಯಲಿದೆ – ಪ್ರೋ.ಎಂ.ಜಿ.ಭಟ್ಟ

ಕುಮಟಾದ ಕಲಾ ಸಿರಿ ವೇದಿಕೆಯಿಂದ ರಾಜ್ಯ ಮಟ್ಟದ ಸಾಂಸ್ಕ್ರತಿಕ ಹಬ್ಬ ಪುರಭವನದಲ್ಲಿ ನ.೧೪ ರಂದು ನಡೆಯಲಿದೆ ಎಂದು ಕಲಾಸಿರಿ ವೇದಿಕೆಯ ಪ್ರಮುಖರಾದ ಪ್ರೋ.ಎಂ.ಜಿ.ಭಟ್ಟ ತಿಳಿಸಿದರು.

ಕುಮಟಾದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಕಲಾಸಿರಿ ವೇದಿಕೆಯ ಪ್ರಮುಖರಾದ ಪ್ರೋ.ಎಂ.ಜಿ.ಭಟ್ಟ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ವಿವರ ನೀಡಿದರು. ಮನುಷ್ಯ ಸಂಘ ಜೀವಿಯಾಗಿದ್ದು, ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸ್ಸಿಗೆ ಆನಂದ ನೀಡುತ್ತವೆ. ಕಳೆದ ೨ ವರ್ಷಗಳಿಂದ ಕೊರೊನಾ ಸೋಂಕಿನಿAದ ಎಲ್ಲ ಕಾರ್ಯಕ್ರಮ ಸ್ಥಗಿತಗೊಂಡಿದ್ದವು. ಪುನಃ ಸಾಂಸ್ಕöÈತಿಕ ಕಾರ್ಯಕ್ರಮಗಳಿಗೆ ಒತ್ತು ನೀಡುವ ದೃಷ್ಟಿಯಿಂದ ಕಲಾಸಿರಿ ವೇದಿಕೆಯಿಂದ ಸಾಂಸ್ಕ್ರತಿಕ ಹಬ್ಬ ಆಯೋಜಿಸಲಾಗಿದೆ. ಆದರ್ಶ ದಂಪತಿಗಳ ಸ್ಪರ್ಧೆ ಕೂಡ ನಡೆಯಲಿದ್ದು, ಈಗಾಗಲೇ ೧೦ ಕ್ಕೂ ಅಧಿಕ ಆದರ್ಶ ದಂಪತಿಗಳು ಸ್ಪರ್ಧೆಯಲ್ಲಿ ಹೆಸರು ನೋಂದಾಯಿಸಿಕೊAಡಿದ್ದಾರೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿದ್ದು, ಭಾಗವಹಿಸಿದ ಪ್ರತಿ ಸ್ಪರ್ಧಾರ್ಥಿಗಳಿಗೂ ರಾಜ್ಯಮಟ್ಟದ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಯಾ ಶೇಟ್ ೭೪೮೩೧೯೩೨೭೧ ಹಾಗೂ ಅನುಷಾ ೮೩೧೦೫೪೩೬೩೧ ಇವರನ್ನು ಸಂಪರ್ಕಿಸಬೇಕು. ಬೆಳಿಗ್ಗೆ ೯.೩೦ ರಾತ್ರಿ ೯ ಘಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಆಗಮಿಸಿದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕಲಾಸಿರಿ ವೇದಿಕೆಯ ಪ್ರಶಾಂತ ನಾಯ್ಕ ಮಾತನಾಡಿ, ಕಲಾ ಸಿರಿ ವೇದಿಕೆಯು ರಾಜ್ಯ ಮಟ್ಟದ ಸ್ಪರ್ಧೆ ಆಯೋಜಿಸಿರುವುದು ಹೆಮ್ಮೆಯ ವಿಷಯ. ಈ ಕಾರ್ಯಕ್ರಮದಲ್ಲಿ ಕುಮಟಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕು ಎಂದರು.

ಕಲಾ ಸಿರಿ ವೇದಿಕೆಯ ಅಧ್ಯಕ್ಷೆ ಜಯಾ ಶೇಟ್ ಮಾತನಾಡಿ, ಮಾಡೆಲಿಂಗ್ ಕಾಂಪಿಟೇಶನ್, ಆದರ್ಶ ದಂಪತಿಗಳು, ಡಾನ್ಸ್ ಕುಮಟಾ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿದೆ. ಈ ಮೂರು ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಬೆಳಿಗ್ಗೆ ೯.೨೦ ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಸಂಜೆ ೬ ಘಂಟೆಗೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಲಾಸಿರಿ ವೇದಿಕೆಯ ಉಪಾಧ್ಯಕ್ಷೆ ಅನುಷಾ, ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಸದಸ್ಯೆ ಶೈಲಾ ಗೌಡ, ಕಲಾಸಿರಿ ವೇದಿಕೆಯ ಪ್ರಮುಖರಾದ ದೀಪಾ ಹಿಣಿ, ಮಾದೇವಿ ಮುಕ್ರಿ ಸೇರಿದಂತೆ ಮತ್ತಿತರರು ಇದ್ದರು.

error: