April 29, 2024

Bhavana Tv

Its Your Channel

ಕುಮಟಾದಲ್ಲಿ ಡಮ್ಮಿ ಮಾದರಿಯ ಸುಧಾರಿತ ಸ್ಪೋಟ ನಮೂನೆಯ ವಸ್ತು ಸಿಕ್ಕಿದ್ದ ಹಿನ್ನೆಲೆ ಪ್ರಮುಖ ಸ್ಥಳಗಳಲ್ಲಿ ಶೋಧನಾ ಕಾರ್ಯ ಚುರುಕು

ವರದಿ:ನಟರಾಜ ಗದ್ದೆಮನೆ

ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ಗುಡ್ಡದ ಪ್ರದೇಶದಲ್ಲಿ ಸಿಕ್ಕಿತು ಹುಸಿ ಬಾಂಬ್, ಡಮ್ಮಿ ಮಾದರಿಯ ಸುಧಾರಿತ ಸ್ಪೋಟ ನಮೂನೆಯ ವಸ್ತುಗಳು ಕಂಡು ಬಂದಿದ್ದು, ಈ ವಸ್ತು ಸಿಕ್ಕ ಸುತ್ತಮುತ್ತಲಿನ ಸ್ಥಳ, ರೈಲ್ವೇ ನಿಲ್ದಾಣ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಶೋಧನಾ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಧ್ಯಮದವರ ಜತೆ ಮಾತನಾಡಿ, ಗುಡ್ಡದ ನಿರ್ಜನ ಪ್ರದೇಶದಲ್ಲಿ ಸ್ಪೋಟಕ ನಮೂನೆಯ ಅನುಮಾನಾಸ್ಪದ ವಸ್ತುಗಳು ದೊರೆತ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಅವಘಡ ಸಂಭವಿಸಿದAತೆ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ಶ್ವಾನದಳ, ಆಂಟಿ ಸಬೋಟೆಜ್ ಚೆಕ್ ತಂಡದಿAದ ಸುಧಾರಿತ ಸ್ಪೋಟಕ ನಮೂನೆಯ ವಸ್ತು ಸಿಕ್ಕ ಸ್ಥಳದ ಸುತ್ತಮುತ್ತ ಶೋಧಕ ಕಾರ್ಯ ನಡೆಸುತ್ತಿದ್ದಾರೆ. ಮಂಗಳೂರಿನ ಬಾಂಬ್ ನಿಷ್ಕ್ರಿಯದಳದವರು ಸ್ಥಳಕ್ಕೆ ಧಾವಿಸಿ, ಅಗತ್ಯ ಸುರಕ್ಷಾ ಕ್ರಮಗಳೊಂದಿಗೆ ಸುಧಾರಿತ ಸ್ಪೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಿ, ಈ ವಸ್ತುವಿನಲ್ಲಿ ಸ್ಪೋಟಕ ಸಾಮಗ್ರಿಗಳು ಕಂಡುಬAದಿಲ್ಲ. ಇದೊಂದು ಡಮ್ಮಿ ಮಾದರಿ ವಸ್ತು ಎಂದು ಹೇಳಿದ್ದಾರೆ. ಜಿಲ್ಲೆಯ ಕೈಗಾ ಮತ್ತು ಪ್ರಮುಖ ದೇವಸ್ಥಾನಗಳನ್ನು ಪರಿಶೀಲಿಸಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಇದರ ಬಗ್ಗೆ ಮಾಹಿತಿ ಪತ್ತೆ ಹಚ್ಚಲು ತಜ್ಞರ ತಂಡ ಆಗಮಿಸಲಿದ್ದು, ಪ್ರಮುಖ ಸ್ಥಳಗಳಲ್ಲಿ ಪೊಲೀಸರು ತೆರಳಿ, ಪರಿಶೀಲಿಸುತ್ತಿದ್ದಾರೆ. ಸುಧಾರಿತ ಸ್ಪೋಟಕ ನಮೂನೆಯ ಅನುಮಾನಾಸ್ಪದ ವಸ್ತು ದೊರೆತ ಹಿನ್ನೆಲೆಯಲ್ಲಿ ಕುಮಟಾ ಪೊಲೀಸ್ ಠಾಣೆಯಲ್ಲಿ ಎಕ್ಸ್ಪ್ಲೋಸಿವ್ ಆಕ್ಟ್ ಮತ್ತು ಎಕ್ಸ್ಪ್ಲೋಸಿವ್ ಸಬ್‌ಸ್ಟನ್ಸಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದ್ದು, ಆರೋಪಿತರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅನಗತ್ಯವಾಗಿ ಆತಂಕ ಪಡುವ ಅವಶ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ವರದಿ:ನಟರಾಜ ಗದ್ದೆಮನೆ

error: