April 29, 2024

Bhavana Tv

Its Your Channel

ಕುಮಟಾ-ಶಿರಸಿ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಕುಮಟಾ :ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಕುಮಟಾ ತಾಲೂಕಿನ ಕತಗಾಲ್‌ನಲ್ಲಿ ಹೆದ್ದಾರಿ ತಡೆದು, ಸಂಪೂರ್ಣ ಹದಗೆಟ್ಟಿರುವ ಕುಮಟಾ-ಶಿರಸಿ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದ ಪ್ರತಿಭಟನಾಕಾರರು ಶಾಸಕರು ಮತ್ತು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಕಾರ್ಯ ಮಾಡಿದರು. ಅತೀ ಶೀಘ್ರದಲ್ಲಿ ಹೆದ್ದಾರಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಅಧಿಕಾರಿಗಳ ಭರವಸೆಯನ್ನು ನಂಬದ ಪ್ರತಿಭಟನಾಕಾರರು, ನೀವು ಈ ಹೆದ್ದಾರಿಯ ಮೇಂಟೆನೆನ್ಸ್ ಹಣವನ್ನು ಶಾಸಕರೊಂದಿಗೆ ಮಾಡಿಕೊಂಡಿದ್ದರಿoದ ಈ ಹೆದ್ದಾರಿಯನ್ನು ಸುಧಾರಣೆ ಮಾಡುವ ಮನಸ್ಥಿತಿ ನಿಮಗಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಹೆದ್ದಾರಿಯಿಂದ ಎಬ್ಬಿಸಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು.
ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿವೇಕ ಶೇಣ್ವಿ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಹೆದ್ದಾರಿ ದುರಸ್ತಿ ಕಾರ್ಯಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ತಹಸೀಲ್ದಾರ್ ಅವರ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಕರವೇ ಪದಾಧಿಕಾರಿಗಳಾದ ಮಂಜುನಾಥ ಗೌಡ, ಮಹೇಂದ್ರ ನಾಯ್ಕ, ಪ್ರಮುಖರಾದ ಕೃಷ್ಣಾನಂದ ವೆರ್ಣೇಕರ್, ಕೃಷ್ಣ ಗೌಡ, ಸುದರ್ಶನ ಶಾನಭಾಗ, ವಿನಾಯಕ ಅಂಬಿಗ, ಬೊಮ್ಮಯ್ಯ ಪಟಗಾರ, ಬಲೀಂದ್ರ ಗೌಡ, ರಾಜು ಗೌಡ, ಜಿ ಜಿ ಹೆಗಡೆ ಅಂತ್ರವಳ್ಳಿ, ಎಸ್ ಎನ್ ಭಟ್ ಕತಗಾಲ, ದಿನೇಶ ನಾಯ್ಕ , ಪಾಂಡು ಪಟಗಾರ , ಜಗದೀಶ ನಾಯ್ಕ, ಲಂಬೋಧರ ಗೌಡ ಸೇರಿದಂತೆ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.

error: