May 15, 2024

Bhavana Tv

Its Your Channel

ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಕ್ತದಾನದ ಮಹತ್ವ ಕುರಿತು ಕಾರ್ಯಕ್ರಮ

ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್ ಕಬ್ಲ್ ಮತ್ತು ರೆಡ್ ಕ್ರಾಸ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ರೋಟರಿ ಕ್ಲಬ್ ಕುಮಟಾ ಸಹಯೋಗದಲ್ಲಿ ರಕ್ತದಾನ ಮಹತ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಕಮಲಾ ಬಾಳಿಗಾ ಕಾಲೇಜಿನ ಪ್ರಾಚಾರ್ಯೆಯಾದ ಪ್ರೀತಿ ಭಂಡಾರಕರ ಮಾತನಾಡಿ ನಾವು ಪ್ರತಿ ವರ್ಷವೂ ಸಹ ರೆಡ್ ಕ್ರಾಸ್ ದಿನವನ್ನು ಯಾವುದಾರೂ ಸಂಸ್ಥೆಯ ಸಹಯೋಗದಲ್ಲಿ ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ನಾವು ರೋಟರಿ ಕ್ಲಬ್ ಕುಮಟಾ ಸಹಯೋಗದಲ್ಲಿ ಕಾರ್ಯಕ್ರಮವನ್ನು ಮಾಡಿದ್ದೇವೆ, ಅಲ್ಲದೇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಹ ಸ್ವಹ ಇಚ್ಛೆಯಿಂದ ರಕ್ತದಾನ ಮಾಡುತ್ತೇವೆ ಎಂದು ಕಾರ್ಯಕ್ರಮದಲ್ಲಿ ಭಾಗಹಿಸಿದ್ದಾರೆ.ನಾವು ಮುಂದಿನ ವಾರ ರಕ್ತದಾನ ಹಾಗೂ ಏಡ್ಸ್ ಜಾಗೃತಿಯ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದೇವೆ.

ಈ ವೇಳೆ ರೋಟರಿ ಕ್ಲಬ್ ಚೇರ್‌ಮೆನ್ ಆದ ಡಾ. ನಮೃತ ಶಾನಭಾಗ ಮಾತನಾಡಿ ರಕ್ತದಾನದ ಬಗ್ಗೆ ಈಗಿನ ಯುವ ಜನತೆಯಲ್ಲಿ ಜಾಗೃತಿ ಮೂಡಿಸಬೇಕು, ರಕ್ತದಾನವು ಪ್ರತಿಯೊಬ್ಬರ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯ, ಯಾವುದೇ ತುರ್ತು ಸಂದರ್ಭಧಲ್ಲಿ ರಕ್ತ ಇಲ್ಲದೇ ಸಾಯಬಾರದು ಎನ್ನುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.

ಈ ವೇಳೆ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಚಾರ್ಯೆರಾದ ಪ್ರೀತಿ ಭಂಡಾರಕರ್ ಅವರು ರಕ್ತದಾನವನ್ನು ಮಾಡಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಇದ್ದರು.

error: