May 15, 2024

Bhavana Tv

Its Your Channel

ಸ್ವಂತ ಖರ್ಚಿನಲ್ಲಿ ತಾತ್ಕಾಲಿಕವಾಗಿ ಕುಮಟಾ ಬಸ್ ನಿಲ್ದಾಣದ ಎದುರಿನ ಗುಂಡಿಗಳನ್ನು ಮುಚ್ಚಿಸಿದ ಸೂರಜ್ ನಾಯ್ಕ ಸೋನಿ

ಕುಮಟಾ ಹೊಸ ಬಸ್ ನಿಲ್ದಾಣದ ಎದುರು ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಗುಂಡಿಗಳು ಬಿದ್ದಿದ್ದು ನಿತ್ಯವು ಈ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ,

. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವೂ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊAಡಿದೆ. ಕಳೆದ ಒಂದೆರಡು ವಾರದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇನ್ನು ಬಸ್ ನಿಲ್ದಾಣದ ಎದುರು ಮೊದಲೇ ಹೊಂಡ ಬಿದ್ದ ಮಾರ್ಗದಲ್ಲಿ ನೀರು ತುಂಬಿಕೊAಡಿದ್ದು, ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗುವುದನ್ನು ಕಣ್ಣಾರೆ ಕಂಡ ಸಂಭAಧ ಪಟ್ಟ ಅಧಿಕಾರಿಗಳು, ಹಾಗೂ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ದುರಸ್ಥಿ ಮಾಡುವ ಗೋಜಿಗೆ ಹೋಗಿಲ್ಲ. ಬಸ್ ನಿಲ್ದಾಣಕ್ಕೆ ಸಾಗುವ ಮಾರ್ಗವೂ ಹೊಂಡ ಬಿದ್ದಿದ್ದು, ಈ ಮಳೆಗಾಲದಲ್ಲಿ ನೀರು ತುಂಬಿಕೊAಡಿರುವುದರಿAದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿತ್ತು. ಇನ್ನು ಬಸ್‌ನಂತಹ ಬೃಹತ ಗಾತ್ರದ ವಾಹನವನ್ನು ರಸ್ತೆಯಲ್ಲಿ ಬಿದ್ದ ಹೊಂಡ ದಾಟಿಸಿ ಕೆ.ಎಸ್.ಆರ್.ಟಿ.ಸಿ ಚಾಲಕರು ಹೇಗೋ ಬಸ್ ಸಂಚಾರ ಮಾಡಿಕೊಂಡು ಹೋಗುತ್ತಾರೆ. ಇನ್ನು ಚಿಕ್ಕ ಗಾತ್ರದ ರಿಕ್ಷಾ, ಬೈಕ್‌ಗಳಿಗೆ ಸಂಚರಿಸುವುದು ನಕರಯಾತನೆಯಾಗಿ ಪರಿಣಮಿಸಿತು. ಈ ಅವ್ಯವಸ್ಥೆಯ ಬಗ್ಗೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಗಮನ ಸೇಳೆದರು ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯ ಬಗ್ಗೆ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ ಜನರ ಸಮಸ್ಯೆಯನ್ನು ಅರಿತು, ಹೊಂಡ ಬಿದ್ದ ರಸ್ತೆ ಗುಂಡಿ ಸ್ವಂತ ಖರ್ಚಿನಿಂದ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿ, ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಬಸ್ ನಿಲ್ದಾಣದ ಎದುರು ರಸ್ತೆ ಹೊಂಡ ಬಿದ್ದು ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆಯ ಕುರಿತು ನನ್ನ ಗಮನಕ್ಕೆ ತಂದಿದ್ದರು. ನನ್ನ ಹತ್ತಿರ ಅಧಿಕಾರ ಇಲ್ಲ, ಆದರೆ ಸಾರ್ವಜನಿಕರಿಗೆ ಸ್ವಂದಿಸ ಬೇಕು ಎನ್ನುವ ಕಳಕಳಿ ತುಂಬಾ ಇದೆ, ಈ ಹಿನ್ನಲೆಯಲ್ಲಿ ಹೊಂಡ ಬಿದ್ದ ಭಾಗಕ್ಕೆ ತಾಲ್ಕಾಲಿಕವಾಗಿ ಚಿರೆ ಕಲ್ಲು, ಹಾಕಿಸಿ, ಜೆಸಿ.ಬಿ ಇಂದ ಸಮತಟ್ಟಾಗಿ ಮಾಡಿ, ಮೆಲ್ಭಾಗದಲ್ಲಿ ಜಲ್ಲಿ ಪುಡಿ ಗ್ರೀಟ್ ಬೀರುವಂತ ಕೆಲಸ ಮಾಡಿಸಿದ್ದೇನೆ. ಪುರಸಭೆಯ ಸಿಬ್ಬಂದಿಗಳು, ಜೆ.ಸಿ.ಬಿ ಬಳಸಲು ಸಹಕರಿಸಿದ್ದಾರೆ, ಇನ್ನು ಬಸ್ ನಿಲ್ದಾಣದ ಸುತ್ತಲು ಬಿದ್ದಿರುವ ಹೊಂಡಗಳನ್ನು ಮುಚ್ಚಬೇಕೆಂದು ಡಿಪೋ ಮ್ಯಾನೇಜರ್ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

error: