May 17, 2024

Bhavana Tv

Its Your Channel

ಕುಮಟಾದಲ್ಲಿ ಸುಸಜ್ಜಿತ ಟ್ರಾಮಾ ಸೆಂಟರ್ : ಶಾಸಕರಿಗೆ ಮಂಜೂರಾತಿ ಪತ್ರ ಹಸ್ತಾಂತರ

ಕುಮಟಾ : ನಗರದಲ್ಲಿ ಸುಸಜ್ಜಿತ ಟ್ರಾಮಾ ಸೆಂಟರ್ ನಿರ್ಮಾಣ ಮಾಡುವ ಬಗ್ಗೆ ಶಾಸಕ ದಿನಕರ ಶೆಟ್ಟಿಯವರಿಗೆ ಬೆಂಗಳೂರಿನ ಬಿಇಎಲ್ ನವರು ಮಂಜೂರಾತಿ ಪತ್ರವನ್ನು ಶಾಸಕರಿಗೆ ಹಸ್ತಾಂತರಿಸಿದರು.
ಇಂದು ಕುಮಟಾದಕ್ಕೆ ಆಗಮಿಸಿದ್ದ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆಯ ಜನರಲ್ ಮ್ಯಾನೇಜರ್ ಗಳಾಗಿರುವ ಡಾ||ಗುರುರಾಜ್ ಹಾಗೂ ಡಾ|| ಶಶಿಭೂಷಣ್ ಅವರು ಟ್ರಾಮಾ ಸೆಂಟರ್ ನ ಮಂಜೂರಾತಿ ಪತ್ರವನ್ನು ಶಾಸಕ ದಿನಕರ ಶೆಟ್ಟಿ ಯವರಿಗೆ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಕುಮಟಾ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ||ಗಣೇಶ ನಾಯ್ಕ ಜೊತೆಗಿದ್ಜರು.


ಸಿ. ಎಸ್. ಆರ್. ಫಂಡ್. ನಲ್ಲಿ ೨.೭೩ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ಪೆಷಲ್ ಕ್ಯಾಶುಯಲ್ಟಿ ಅರ್ಥೋಪೇಡಿಕ್ ಟ್ರಾಮಾ ಸೆಂಟರ್ ಇದಾಗಲಿದ್ದು, ಹೆಚ್ಚುವರಿ ಬೆಡ್ ಗಳು, ಯೂರಿನ್ ಅನಾಲಿಸಿಸ್ ಯಂತ್ರ ಸೇರಿದಂತೆ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕೆಲವು ಅತ್ಯಾಧುನಿಕ ಸೌಲಭ್ಯಗಳು ಸಿಗಲಿದ್ದು ಸುಸಜ್ಜಿತ ಟ್ರಾಮಾ ಸೆಂಟರ್ ನಿರ್ಮಾಣ ಆಗಲಿದೆ.

ಕುಮಟಾ ಹೊನ್ನಾವರದ ಜನಪ್ರಿಯ ಶಾಸಕರಾಗಿರುವ ದಿನಕರ ಶೆಟ್ಟಿಯವರ ಸತತ ಪ್ರಯತ್ನದ ಫಲವಾಗಿ, ಕ್ಷೇತ್ರದ ಜನಸಾಮಾನ್ಯರ ಬಹುವರ್ಷಗಳ ಒಂದು ಬೇಡಿಕೆ ಸಾಕಾರಗೊಳ್ಳುವ ಸುಮುಹೂರ್ತ ಈಗ ನಿಶ್ಚಯವಾಗಿದೆ. ಕುಮಟಾದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಮಾಡುವ ಬಗ್ಗೆ ಶಾಸಕರು ಭರವಸೆ ನೀಡಿದ್ದರು. ಈ ಕುರಿತಾಗಿ ಬಿ. ಈ. ಎಲ್. (ಃhಚಿಡಿಚಿಣh ಇಟeಛಿಣಡಿoಟಿiಛಿs ಐimiಣeಜ) ಸಂಸ್ಥೆಯೊಡನೆ ನಿರಂತರವಾಗಿ ಸಂಪರ್ಕದಲ್ಲಿದ್ದು, ವಿಚಾರವಿನಿಮಯ ಮಾಡಿಕೊಂಡಿದ್ದರು.
ವೈದ್ಯಾಧಿಕಾರಿಗಳು ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ರೂಪುರೇಷೆಗಳ ಬಗ್ಗೆ ಶಾಸಕರೊಡನೆ ಚರ್ಚಿಸಿದರು. ಈ ಕುರಿತು ಶಾಸಕರು ಸೂಕ್ತ ಸಲಹೆಸೂಚನೆಗಳನ್ನು ನೀಡಿದರು. ಕುಮಟಾದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯಗಳನ್ನು ಹೊಂದುವ ಸುಸಂದರ್ಭ ಒದಗಿ ಬಂದಿರುವುದರ ಹಿಂದೆ ನಮ್ಮ ಶಾಸಕರ ಪರಿಶ್ರಮ ಹಾಗೂ ಜನರ ಆರೋಗ್ಯದ ಕುರಿತಾಗಿ ಅವರಿಗೆ ಇರುವ ಅಪಾರ ಕಾಳಜಿಯೇ ಪ್ರಮುಖ ಕಾರಣವಾಗಿದೆ.

ಕುಮಟಾ ಹೊನ್ನಾವರ ಕ್ಷೇತ್ರದ ಜನರಿಗೆ ಅತ್ಯಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿರುವ ಶಾಸಕರಾಗಿರುವ ಶ್ರೀ ದಿನಕರ ಶೆಟ್ಟಿಯವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ

.

error: