May 16, 2024

Bhavana Tv

Its Your Channel

ಕುಮಟಾ ಪೋಲಿಸ್ ಠಾಣೆ ಯವರು ಪ್ರತಿಷ್ಠಾಪಿಸಿದ ಗಣಪತಿಗೆ ಸತ್ಯಗಣಪತಿ ವೃತ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ

ಕುಮಟಾ : ಗಣೇಶೋತ್ಸವ ದ ಅಂಗವಾಗಿ ನಗರದ ಪೋಲಿಸ್ ಠಾಣೆ ಯವರು ಪ್ರತಿಷ್ಠಾಪಿಸುವ ಗಣಪತಿಗೆ ಸತ್ಯಗಣಪತಿ ವೃತದ ಪೂಜಾ ಸೇವೆ ಹಾಗೂ ಅನ್ನದಾನ ಶುಕ್ರವಾರ ಮಧ್ಯಾಹ್ನ ನಡೆಯಿತು..
ಪ್ರತಿವರ್ಷ ಕುಮಟಾ ದ ಪೋಲೀಸ್ ಗಣಪತಿ ಎಂದೇ ಪ್ರಖ್ಯಾತಿ ಪಡೆದಿರುವ ಗಣಪನನ್ನು ಪೋಲೀಸ್ ಠಾಣೆಯ ಹತ್ತಿರವಿರುವ ಗೋಂಬೆ ದೇವಾಲಯದಲ್ಲಿ ೧೧ದಿನ ಪ್ರತಿಷ್ಠಾಪಿಸಲಾಗುತ್ತದೆ ಹಾಗೂ ಹಾಗೂ ವಿಜೃಂಭಣೆಯಿAದ ಪ್ರತಿದಿನದ ಸೇವೆ ನೆರವೇರಿಸಲಾಗುತ್ತದೆ.. ಈ ವರ್ಷ ಸತ್ಯಗಣಪತಿ ವೃತ ಹಾಗೂ ಅನ್ನದಾನ ದಿನ ಶ್ರೀಧರ ಗೌಡ ಸಹೋದರರ ತಂಡದ ಭಜನಾ ಸೇವೆ ಏರ್ಪಡಿಸಲಾಗಿತ್ತು ಭಜನಾ ಕಾರ್ಯಕ್ರಮ ದಲ್ಲಿ ಹವಾಲ್ದಾರ್ ಲೋಕೇಶ ಅರಿಶಿಣಗುಪ್ಪಿಯವರ ಹಾಡಿದ ಯಾರನ್ನ ನಂಬಬೇಕೊ ಯಾರನ್ನ ಬಿಡಬೇಕೊ ಎಂಬ ಭಜನೆ ಭಕ್ತರನ್ನು ಮೂಕವಿಸ್ಮಿತರನ್ನಾಗಿಸಿತು.. ಶ್ರೀಧರ ಗೌಡ ತಂಡದವರೂ ಕೂಡ ಸುಶ್ರಾವ್ಯವಾಗಿ ಹಾಡಿ ಪೂಜೆಗೆ ಕಳೆ ತಂದರು..
ವಿಶೇಷವೇನೆಂದರೆ ಸಿಪಿಐ ತಿಮ್ಮಪ್ಪ ನಾಯಕ , ಪಿಎಸ್ ಐ ನವೀನ ನಾಯ್ಕ, ರವಿ ಗುಡ್ಡಿ, ಹಾಗೂ ಇತರರು ಮತ್ತು ಎಲ್ಲ ಸಿಬ್ಬಂದಿಗಳು ಬಿಳಿ ಪಂಚೆ ಬಿಳಿ ಶರ್ಟ್ ಹಾಗೂ ಹಳದಿ ಶಾಲಿನ ಸಮವಸ್ತ್ರ ಧರಿಸಿ ಒಗ್ಗಟ್ಟಿನ ಪ್ರದರ್ಶನ ದೊಂದಿಗೆ ಪೂಜೆಗೆ ಮೆರಗು ತಂದರು…ಮಹಿಳಾ ಪಿಎಸ್ ಐ ಗಳಾದ ಪದ್ಮಾ ಹಾಗೂ ಚಂದ್ರಾವತಿ ಮತ್ತು ಮಹಿಳಾ ಸಿಬ್ಬಂದಿಗಳು, ಎಲ್ಲ ಪೋಲಿಸ್ ಸಿಬ್ಬಂದಿಗಳ ಕುಟುಂಬಸ್ಥರು ಪಾಲ್ಗೊಂಡಿದ್ದರು.. ಶನಿವಾರ (ಇಂದು) ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ

ಶಾಸಕ ದಿನಕರ ಶೆಟ್ಟಿ, ಕುಮಟಾ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಸಹಾಯಕ ಸರ್ಕಾರಿ ಅಭಿಯೋಜಕರು, ತಾಲೂಕು ವೈದ್ಯಾಧಿಕಾರಿ, ಹಾಗೂ ಇತರ ಗಣ್ಯ ವ್ಯಕ್ತಿಗಳು ನಿವೃತ್ತ ಪೋಲಿಸ್ ಅಧಿಕಾರಿಗಳು, ಕೋರ್ಟ ಸಿಬ್ಬಂದಿಗಳು ಗೃಹ ರಕ್ಷಕ ದಳದ ಸಿಬ್ಬಂದಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

error: