April 30, 2024

Bhavana Tv

Its Your Channel

ಅನಂತ ಪದ್ಮನಾಭ ದೇವಸ್ಥಾನ ದಲ್ಲಿ, ಅನಂತ ಚತುರ್ದಶಿ ಪ್ರಯುಕ್ತ ಪ್ರತಿಭಾನ್ವಿತ ಕಲಾವಿದರಿಂದ ಭಕ್ತಿ ಭಜನಾ ಕಾರ್ಯಕ್ರಮ

ಕುಮಟಾ ತಾಲೂಕಿನ ಧಾರೇಶ್ವರದ ಅನಂತ ಪದ್ಮನಾಭ ದೇವಸ್ಥಾನ ದಲ್ಲಿ, ಅನಂತ ಚತುರ್ದಶಿ ಪ್ರಯುಕ್ತ ಪ್ರತಿಭಾನ್ವಿತ ಕಲಾವಿದರಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು.

ಭಾದ್ರಪದ ಮಾಸದ 14 ನೇ ದಿನಕ್ಕೆ ಅನಂತ ಚತುರ್ದಶಿ ಹಬ್ಬವು ಬರುತ್ತದೆ. ಅನಂತ ಚತುರ್ದಶಿಯು ವಿಷ್ಣುವನ್ನು ಅನಂತ ಅವತಾರದಲ್ಲಿ ಪೂಜಿಸುವ ಅತ್ಯಂತ ಗಮನಾರ್ಹ ದಿನವಾಗಿದೆ. ಹಿಂದೂ ಹಬ್ಬವಾದ ಗಣೇಶೋತ್ಸವದ ಕೊನೆಯ ದಿನವೂ ಇದಾಗಿದ್ದು, ಭಕ್ತರು ವಿಜೃಂಭಣೆಯಿAದ ಆಚರಿಸತ್ತಾರೆ.

ಅದರಂತೆ ಕುಮಟಾದ ಶ್ರೀ ಮಾರುತಿ ಭಜನಾ ಮಂಡಳಿಯವರಿAದ ಭಕ್ತಿ ಭಜನಾ ಕಾರ್ಯಕ್ರಮವು ನಡೆಯಿತು.

ವಿಶೇಷವೆಂಬAತೆ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿಯ ತಾಲೂಕಾ ಅಧ್ಯಕ್ಷ, ಕರ್ನಾಟಕ ಪ್ರೆಸ್ ಕ್ಲಬ್ ಜಿಲ್ಲಾ ಅಧ್ಯಕ್ಷ, ಚಲನಚಿತ್ರ ನಟ, ನಿರ್ಮಾಪಕ, ಗಾಯಕ ಸೇರಿದಂತೆ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಕಲಾವಿದ ಜಿ.ಡಿ. ಹೆರಂಭಾ ಅವರು ಭಜನೆಯಲ್ಲಿ ಪಾಲ್ಗೊಂಡು ಸುಮಧುರವಾಗಿ ಹಾಡಿದರು.

ದಶಕದ ಹಿಂದೆ ತಾಲೂಕಿನ ರಾಘವೇಂದ್ರ ಪಟಗಾರ್ ಹಾಡಿ ಜಿಲ್ಲೆಯಲ್ಲಿ ಜನಪ್ರಿಯಗೊಳಿಸಿದ್ದ “ಏನ ಹೇಳಲಿ ತಂಗಿ…”ಭಕ್ತಿಗೀತೆಯನ್ನು , ಈಗ ರಾಜ್ಯಪ್ರಶಸ್ತಿ ಪುರಸ್ಕೃತ ಮಾರುತಿ ನಾಯ್ಕ್ ಕೂಜಳ್ಳಿ ಮತ್ತೊಮ್ಮೆ ಹಾಡಿ ಮೆರಗು ತಂದರು. ಇವರಿಗೆ ಖ್ಯಾತ ಕೀಬೋರ್ಡ್ ವಾದಕ ವಿಜಯ ಮಹಾಲೆ ಹಾರ್ಮೋನಿಯಂ ಸಾಥ್ ನೀಡಿದರೆ, ತಬಲಾದಲ್ಲಿ ಹರೀಶ್ ಶೇಟ್ ಮುಂತಾದವರು ಸಾಥ್ ನೀಡಿದರು.

ಶ್ರೀ ಮಾರುತಿ ಭಜನಾ ಮಂಡಳಿಯವರು ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯ ತನಕ ಪ್ರತಿನಿತ್ಯವೂ ವಿವಿಧ ಶೃದ್ಧಾ ಕೇಂದ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನೀಡಿ, ಜನಮನವನ್ನು ರಂಜಿಸಿ ಕಲಾಭಿಮಾನಿಗಳ ಶ್ಲಾಘನೆಗೆ ಸಾಕ್ಷಿಯಾಗಿದ್ದಾರೆ. ಶಂಕರ ನಾಯ್ಕ್ ದಾರೇಶ್ವರ, ವೀರೇಂದ್ರ ಗುನಗ, ಸೋನಾಲಿ ನಾಯ್ಕ್ ಮತ್ತಿತರ ಪ್ರತಿಭಾನ್ವಿತರು ಇಲ್ಲಿ ಗಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ವರದಿ:ನರಸಿಂಹ ನಾಯ್ಕ್ ಹರಡಸೆ.

error: