May 1, 2024

Bhavana Tv

Its Your Channel

ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಎನ್.ಪಿ.ಎಸ್ ಹೋರಾಟ ಸಮಿತಿಯಿಂದ ಮನವಿ

ಕುಮಟಾ: ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆಯನ್ನ ಜಾರಿಗೊಳಿಸಲು ಎನ್.ಪಿ.ಎಸ್ ಹೋರಾಟ ಸಮಿತಿ ಕುಮಟಾ ಇವರು ಶಾಸಕರಾದ ದಿನಕರ ಕೆ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ನಿವೃತ್ತಿಯ ನಂತರ ಹೊಸ ಪಿಂಚಣಿ ಯೋಜನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ದಿನಾಂಕ 19 ಡಿಸೆಂಬರ್ 2022 ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನಾತ್ಮಕ ಹೋರಾಟದ ಬಗ್ಗೆ ಮಾನ್ಯ ಶಾಸಕರಿಗೆ ವಿ.ಎ ಪಟಗಾರ ರವರು ವಿಸ್ತೃತ ಮಾಹಿತಿಯನ್ನು ನೀಡಿದರು ಇಡೀ ದೇಶದಲ್ಲಿ ಈಗಾಗಲೇ ಐದು ರಾಜ್ಯಗಳು ಎನ್.ಪಿ.ಎಸ್ ರದ್ಧತಿ ಬಗ್ಗೆ ಕ್ರಮ ವಹಿಸಿದೆ ಹಾಗೂ ಈಗಾಗಲೇ ಹರಿಯಾಣದಲ್ಲಿಯೂ ಕೂಡ ಈ ಬಗ್ಗೆ ಕ್ರಮವಹಿಸಲಾಗುತ್ತಿದೆ. ಹಳೇ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಅಲ್ಲದೆ ಎನ್.ಪಿ.ಎಸ್ ನಿಂದ ತಮ್ಮ ವೇತನದಿಂದ 10% ಹಣ ಕಡಿತವಾಗುವ
ಹಾಗೂ ಇತರೆ ಕಂಪನಿಗಳಲ್ಲಿ ಹೂಡಿಕೆ ಬಗ್ಗೆ ಮತ್ತು ಅದರಿಂದ ಬರುವ ಮೊತ್ತವನ್ನು ನೌಕರಿಗೆ ನೀಡುವ ಬಗ್ಗೆ ಅಲ್ಲದೆ ಬೇರೆ ದೇಶಗಳಲ್ಲಿ ಎನ್.ಪಿ.ಎಸ್ ನಿಂದಾದ ವೈಫಲ್ಯಗಳ ಬಗ್ಗೆ ಮಾನ್ಯ ಶಾಸಕರಿಗೆ ಮಾಹಿತಿ ನೀಡಿದರು ಮತ್ತು ಮಾನ್ಯ ಶಾಸಕರು ಈ ಬಗ್ಗೆ ಸದನದಲ್ಲಿ ವ್ಯಕ್ತಪಡಿಸುವ ಬಗ್ಗೆ ಮತ್ತು ಎನ್‌ಪಿಎಸ್ ರದ್ದುಗೊಳಿಸುವ ಬಗ್ಗೆ ಮತ್ತು ಹಳೇ ಪಿಂಚಣಿಯನ್ನು ಜಾರಿಗೊಳಿಸುವ ಬಗ್ಗೆ ಭರವಸೆ ನೀಡಿ ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಮಾತನಾಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿ.ಎ.ಪಟಗಾರ, ಶಿವಾನಂದ ವಕಾರಿ, ರಾಘವೇಂದ್ರ ನಾಯ್ಕ, ಆನಂದ ನಾಯ್ಕ, ವಿನಾಯಕ ಪಿ., ಮಹೇಶ ಹೆಗಡೆ, ಮಂಜುಳಾ ನಾಯ್ಕ, ಸುಗೀತಾ ಭಟ್ಟ, ಸವಿತಾ ಪಟಗಾರ, ಅಣ್ಣಯ್ಯ ಮತ್ತು ನಲವತ್ತಕ್ಕು ಹೆಚ್ಚು ಮಂದಿ ಹಾಜರಿದ್ದರು.

error: