May 2, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಟಿಕೆಟ್‌ಗೆ ಪ್ರವಾಸೋದ್ಯಮ ಇಲಾಖೆ ಆ್ಯಪ್

ಮುರ್ಡೇಶ್ವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಟಿಕೆಟ್ ಸೌಲಭ್ಯವಿರುವ ಎಲ್ಲಾ ಪ್ರವಾಸಿ ತಾಣಗಳ ಟಿಕೆಟ್ ವ್ಯವಸ್ಥೆಯನ್ನು ಆ್ಯಪ್ ಮೂಲಕ ಒಂದೇ ಕಡೆ ಪಡೆಯಲು ಯೋಜನೆ ರೂಪಿಸಿದ್ದು, ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿದೆ.

ಮುರ್ಡೇಶ್ವರದ ಸ್ಕೂಬಾಡೈವಿಂಗ್, ಹೊನ್ನಾವರದ ಇಕೋಬೀಚ್- ಬೋಟಿಂಗ್, ಶಿರಸಿಯ ಸಹಸ್ರಲಿಂಗ, ಕಾರವಾರದ ಚಾಪಲ್ ವಾರ್‌ಪ್ ಮ್ಯೂಸಿಯಂ, ರಾಕ್ ಗಾರ್ಡ್ನ್, ಕಾಳರಿವ ಗಾರ್ಡನ್,
ವಾಟರ್‌ಸ್ಪೋರ್ಟ್ಸ್, ದಾಂಡೇಲಿಯ ಮೊಸಳೆಪಾರ್ಕ್ ಸೇರಿದಂತೆ ಎಲ್ಲೆಲ್ಲಿ ಟಿಕೆಟ್ ಪಡೆದು ಅವಕಾಶ ನೀಡಲಾಗುತ್ತಿದೆಯೋ, ಅಂತಹ ಎಲ್ಲ ಪ್ರವಾಸಿ ತಾಣಗಳನ್ನು ಟಿಕೆಟ್ ಇಂಟಿಗ್ರೇಶನ್ ಸಿಸ್ಟಂ ಅಡಿಯಲ್ಲಿ ತರಲಾಗುತ್ತಿದೆ.
ಸದ್ಯ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದವರೇ ಟಿಕೆಟ್ ಕೊಟ್ಟು ಹಣ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಎಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಎಷ್ಟು ಆದಾಯವಾಗುತ್ತಿದೆ.
ಎಲ್ಲೆಲ್ಲಿಂದ ಪ್ರವಾಸಿಗರು ಬರುತ್ತಿದ್ದಾರೆ. ಯಾವ ಅವಧಿಯಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ ಎಂಬ ನಿಖರವಾದ ಮಾಹಿತಿ ಮತ್ತು ಆದಾಯ ಪ್ರವಾಸೋದ್ಯಮ ಇಲಾಖೆಗೆ ಸಿಗುತ್ತಿಲ್ಲ.
ಇದೀಗ ಈ ಎಲ್ಲಾ ಮಾಹಿತಿಯನ್ನು ಕಲೆಹಾಕಲು ನೂತನ ಟಿಕೆಟ್ ಇಂಟಿಗ್ರೇಶನ್ ಸಿಸ್ಟಮ್ ವ್ಯವಸ್ಥೆ ಮೂಲಕ ತಿಳಿಯಬಹುದಾಗಿದೆ. ಜತೆಗೆ ಅದಕ್ಕೆ ತಕ್ಕಂತೆ ಪ್ರವಾಸಿ ತಾಣಗಳ ಅಭಿವೃದ್ಧಿಗೆ, ಮೂಲಸೌಕರ್ಯ ಕಲ್ಪಿಸಲು ನೆರವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡುವುದಿದ್ದರೆ, ಆನ್‌ಲೈನ್‌ನಲ್ಲಿ ಪ್ಯಾಕೇಜ್‌ಗೆ ಹಣತುಂಬಿ, ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಪಡೆದುಕೊಂಡು, ಎಲ್ಲಾ ಪ್ರವಾಸಿ ತಾಣಗಳಲ್ಲಿ ಕೋಡ್ ತೋರಿಸಿ ಪ್ರವಾಸಿಗರು ಒನ್ ಟೈಮ್ ವೀಕ್ಷಣೆ ಮಾಡಲು ಅವಕಾಶ ಆಗುವಂತೆ ಆ್ಯಪ್ ರೂಪಿಸಲಾಗುತ್ತಿದೆಯಂತೆ. ಇದು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ನೋಡಬೇಕಿದೆ.

error: