April 30, 2024

Bhavana Tv

Its Your Channel

ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಒಳಜಗಳ, ದೂರು ಪ್ರತಿ ದೂರು ದಾಖಲಾದ ಘಟಣೆ ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಕಳ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ,ಬಿಜೆಪಿ ಚುನಾವಣೆ ಸಂದರ್ಭದ ಜಗಳಗಳು ಫಲಿತಾಂಶ ಬಂದಮೇಲೂ ಮುಂದುವರೆದಿದ್ದು ಬಿಜೆಪಿಯ ಸುನೀಲ್ ನಾಯ್ಕ ರನ್ನು ಕಾಂಗ್ರೆಸ್ ನ ಮಂಕಾಳುವೈದ್ಯ ದೊಡ್ಡ ಅಂತರದಲ್ಲಿ ಸೋಲಿಸುತ್ತಿದ್ದಂತೆ ಕಾಂಗ್ರೆಸ್,ಬಿಜೆಪಿ ಕಾರ್ಯಕರ್ತರ ಒಳ ಜಗಳ ಇದೀಗ ಬೀದಿಗೆ ಬಂದಿದೆ.

ಜಿಲ್ಲೆಯ ಹೊನ್ನಾವರದ ಮೂಡಕಣಿ ಗ್ರಾಮದಲ್ಲಿ ಕಿಡಿಗೇಡಿಗಳು ಬಿಜೆಪಿ ಕಾರ್ಯಕರ್ತ ಮಾರುತಿ ನಾಯ್ಕ ಎಂಬುವವರ ಎಲಕ್ಟಿಕ್ ಮಳಿಗೆಗೆ ಬೆಂಕಿ ಹಚ್ಚಿದ್ದು ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ನರಸಿಂಹ ಸಣ್ಣತಮ್ಮ ಎಂಬುವವರ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಪಟಾಕಿ ಕಿಡಿ ಕಾರಿನ ಶಡ್ ಗೆ ಹೊತ್ತಿಕೊಂಡು ಕಾರು ಅಲ್ಪಪ್ರಮಾಣದಲ್ಲಿ ಸುಟ್ಟಿದ್ದು ಬೆಂಕಿ ನಂದಿಸಲಾಗಿದೆ. ಆದರೇ ಈ ಕುರಿತು ಈ ವರೆಗೂ ದೂರು ದಾಖಲಾಗಿಲ್ಲ.

ಇನ್ನು ಮುರ್ಡೇಶ್ವರ ವ್ಯಾಪ್ತಿಯ ಶಿರಾಲಿಯ ಬಿಜೆಪಿ ಮುಖಂಡ ರಾಮಚಂದ್ರ ನಾಯ್ಕ ಎಂಬುವವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಹಲ್ಲೆ ಮಾಡಿದ್ದು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದು ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಚುನಾವಣಾ ಫಲಿತಾಂಶದ ನಂತರ ಹಲ್ಲೆ, ಗಲಾಟೆಗೆ ತಿರುಗಿದ್ದು ಮುಂದಿನ ದಿನದಲ್ಲಿ ಯಾವ ಹಂತ ತಲುಪಲಿದೆಯೋ ಎಂಬ ಆತಂಕ ಸಾಮಾನ್ಯ ಜನರನ್ನು ಕಾಡುವಂತೆ ಮಾಡಿದೆ.
ಕಾರ್ಯಕರ್ತರಿಂದ ಹಲ್ಲೆಗೊಳಗಾದ ಪಕ್ಷದ ಮುಖಂಡರಾದ ರಾಮಚಂದ್ರ ನಾಯ್ಕ್ ಮೂಡ ಶಿರಾಲಿ ಹಾಗೂ ಹೊನ್ನಾವರ ತಾಲೂಕಿನ ಹಿರೇಬೈಲ್ ಮಾರುತಿ ನಾಯ್ಕ ಮತ್ತು ಮುಖಂಡರಾದ ನರಸಿಂಹ ಸಣತಮ್ಮ ನಾಯ್ಕ ಅವರ ಮನೆಗೆ ಮಾಜಿ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.

error: